Advertisement

ಚೀನ ಉದ್ಧಟತನಕ್ಕೆ ಏನು ಕಾರಣ?

03:14 PM Jun 18, 2020 | Hari Prasad |

ಪೂರ್ವ ಲಡಾಖ್‌ನಲ್ಲಿ ಭಾರತ – ಚೀನ ಸಂಘರ್ಷ ಮುಂದುವರಿದಿದ್ದು, ಸೋಮವಾರ ತಡರಾತ್ರಿ ಓರ್ವ ಕರ್ನಲ್‌ ಸೇರಿದಂತೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದೇ ವೇಳೆೆ ಚೀನದ 40ಕ್ಕೂ ಹೆಚ್ಚು ಸೈನಿಕರು ಸಾವಿಗೀಡಾಗಿದ್ದಾರೆ. ಗಡಿ ಘರ್ಷಣೆಗಳು ಮೊದಲೇನೂ ಅಲ್ಲವಾದರೂ ಕಳೆದ 45 ವರ್ಷಗಳ ಬಳಿಕ ಚೀನ ಜತೆಗಿನ ಸಂಘರ್ಷದಲ್ಲಿ ಸೈನಿಕರು ಹತ್ಯೆಯಾಗಿದ್ದಾರೆ. ಈ ಘಟನೆ ದೇಶದಲ್ಲಿ ಆಕ್ರೋಶ ಮತ್ತು ಬಿಕ್ಕಟ್ಟು ಎಲ್ಲಿಗೆ ತಲುಪಬಹುದು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.

Advertisement

ಲಡಾಖ್‌ನ ರಸ್ತೆಗಳ ಸುತ್ತ
ಲಡಾಖ್‌ನಲ್ಲಿ ಪಾಂಗಾಂಗ್‌ ತ್ಸೋ ಹಾಗೂ ಟಿಬೆಟ್‌ ಸನಿಹದ ನಾಥೂ ಲಾ ಪಾಸ್‌ ಬಳಿ ಚೀನ ಹಾಗೂ ಭಾರತೀಯ ಸೈನಿಕರ ನಡುವಿನ ಘರ್ಷಣೆಯೇ ಈಗಿನ ಬಿಕ್ಕಟ್ಟಿನ ಮೂಲ ಎನ್ನಲಾಗುತ್ತದೆಯಾದರೂ, ಇದು ಸತ್ಯವಲ್ಲ. ಆದಾಗ್ಯೂ, ಮೊದಲಿಂದಲೂ ಲಡಾಖ್‌ನ ಬಹುಭಾಗವನ್ನು ಚೀನ ತನ್ನ ಪ್ರದೇಶವೆಂದು ಹೇಳುತ್ತಾ ಬಂದಿದೆಯಾದರೂ 2019ರಲ್ಲಿ ಲಡಾಖ್‌ ಕೇಂದ್ರಾಡಳಿತ ಪ್ರದೇಶವಾದಾಗಿನಿಂದ ಚೀನದ ಹುಚ್ಚಾಟ ಅಧಿಕವಾಗಿದೆ.

ಏಕೆಂದರೆ, ಆಗಿನಿಂದ ಲಡಾಖ್‌ ಭಾಗದಲ್ಲಿ ಭಾರತೀಯ ಸೇನೆಗೆ ಅನುಕೂಲವಾಗುವಂಥ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಬಿಟ್ಟಿವೆ. ಅದರಲ್ಲೂ ಭಾರತದ ರಕ್ಷಣಾ ಇಲಾಖೆಯ ಪ್ರಮುಖ ಅಂಗವಾದ ಬಾರ್ಡರ್‌ ರೋಡ್ಸ್‌ ಆರ್ಗನೈಸೇಷನ್‌(ಬಿಆರ್‌ಓ) ಗಡಿ ಭಾಗದಲ್ಲಿನ ಅಭಿವೃದ್ಧಿಯಲ್ಲಿ, ಮುಖ್ಯವಾಗಿ ರಸ್ತೆ ನಿರ್ಮಾಣದಲ್ಲಿ ಸಕ್ರಿಯವಾಗಿದೆ. ಚೀನ ಭಾರತದ ವಿರುದ್ಧ ಜಗಳ ಕಾಯಲು ಮುಂದಾಗುತ್ತಿರುವುದಕ್ಕೆ ಇನ್ನೂ ಅನೇಕ ಕಾರಣಗಳಿವೆಯಾದರೂ, ರಕ್ಷಣಾ ಪರಿಣತರ ಪ್ರಕಾರ, ಸದ್ಯಕ್ಕೆ ಗಡಿ ಭಾಗದಲ್ಲಿ ಭಾರತ ನಿರ್ಮಿಸುತ್ತಿರುವ ರಸ್ತೆಗಳೇ ಚೀನದ ಹುಚ್ಚಾಟಕ್ಕೆ ಹೆಚ್ಚು ಕಾರಣವಾಗಿವೆ.

ಆತಂಕ ಸೃಷ್ಟಿಸಿದ್ದ ಡೋಕ್ಲಾಂ ಬಿಕ್ಕಟ್ಟು
2017ರಲ್ಲಿ ಲಡಾಖ್‌ನಲ್ಲಿ ಚೀನಿ ಸೈನಿಕರು ಅನೇಕ ಕಿಲೋಮೀಟರ್‌ಗಳವರೆಗೆ ನಮ್ಮ ಸೀಮೆಯೊಳಕ್ಕೆ ನುಸುಳಿ ಬಿಟ್ಟಿದ್ದರು. ಸುಮಾರು 70 ದಿನಗಳವರೆಗೆ ಎರಡೂ ರಾಷ್ಟ್ರಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಗಿದ್ದ ಡೋಕ್ಲಾಂ ಘಟನೆಯು ಚೀನದ ದುರುದ್ದೇಶಗಳಿಗೆ ಸ್ಪಷ್ಟ ಕನ್ನಡಿ ಹಿಡಿದಿತ್ತು. ಆದರೆ, ಚೀನಕ್ಕೆ ಆಘಾತ ಮೂಡಿಸಿದ್ದು, ಭಾರತದ ಬಲವಾದ ಪ್ರತಿರೋಧ.

ಅಂತಾರಾಷ್ಟ್ರೀಯ ಮಟ್ಟದಲ್ಲೂ ಡೋಕ್ಲಾಂ ವಿಚಾರದಲ್ಲಿ ಭಾರತ ತೋರಿಸಿದ ಕೆಚ್ಚೆದೆ ಚೀನದ ಆತಂಕಕ್ಕೆ
ಕಾರಣವಾಯಿತು. ಈ ಕಾರಣಕ್ಕಾಗಿಯೇ, ಚೀನ ಈಗ ಮೊದಲಿನಂತೆ ಭಾರತವನ್ನು ಹಗುರವಾಗಿ ನೋಡುತ್ತಿಲ್ಲ. ಹೀಗಾಗಿ, ಈಗಿನ ಬಿಕ್ಕಟ್ಟು ನಿಸ್ಸಂಶಯವಾಗಿಯೂ ಮಾತುಕತೆಯಲ್ಲೇ ಅಂತ್ಯವಾಗುತ್ತದೆ ಎನ್ನುತ್ತಾರೆ ರಕ್ಷಣಾ ವಿಶ್ಲೇಷಕರು. ಗಮನಾರ್ಹ ಸಂಗತಿಯೆಂದರೆ, ಚೀನ ಮತ್ತು ಭಾರತದ ನಡುವೆ ಕಡೆಯ ಬಾರಿ ಗುಂಡಿನ ಚಕಮಕಿ ನಡೆದದ್ದು 53 ವರ್ಷಗಳ ಹಿಂದೆ, ಅಂದರೆ 1967ರಲ್ಲಿ!

Advertisement

ಇದನ್ನೂ ಓದಿ: ಗಡಿ ಘರ್ಷಣೆ: ಚೀನದ 43 ಸೈನಿಕರ ಹತ್ಯೆ?

ಚೀನದ ಸಲಾಮಿ ಸ್ಲೈಸಿಂಗ್‌ ತಂತ್ರ
ಗಡಿ/ಸೀಮೆಗಳು ಸ್ಪಷ್ಟವಾಗಿ ಇರದ ಪ್ರದೇಶಗಳೆಲ್ಲ ಚೀನ, ಇಂಚಿಂಚು ಜಾಗವನ್ನು ಕಬಳಿಸಲು ಮಾಡುವ ಹುನ್ನಾರವನ್ನು ಮಿಲಿಟರಿ ಭಾಷೆಯಲ್ಲಿ ‘ಸಲಾಮಿ ಸ್ಲೈಸಿಂಗ್‌’ ಎಂದು ಕರೆಯಲಾಗುತ್ತದೆ. ಅಂದರೆ, ಮೊದಲು ಒಳಗೆ ನುಗ್ಗಿಬಿಡುವುದು, ನಂತರ ಸಂಪೂರ್ಣವಾಗಿ ಹಿಂದೆ ಸರಿಯದೇ ಸ್ವಲ್ಪ ಜಾಗವನ್ನು ಉಳಿಸಿಕೊಳ್ಳುವುದು! ಗಡಿ ರೇಖೆಯು ಸ್ಪಷ್ಟವಾಗಿ ಇಲ್ಲದ ಪ್ರದೇಶಗಳಲ್ಲಿ ಚೀನಿ ಸೈನಿಕರು ಸದ್ದಿಲ್ಲದೇ ನುಸುಳಿಬಿಡುತ್ತಾರೆ.

ಭಾರತಕ್ಕೆ ಚೀನದ ಈ ನಡೆಯ ಬಗ್ಗೆ ತಿಳಿಯುತ್ತಿದ್ದಂತೆ ಸೈನಿಕರನ್ನು ಕಳುಹಿಸಲಾಗುತ್ತದೆ. ಸ್ಪಷ್ಟ ಗಡಿಯನ್ನು ಸೂಚಿಸುವ ಯಾವುದೇ ಭೌತಿಕ ರಚನೆಗಳು ಇರದ ಕಾರಣ, ಚೀನಿ ಸೈನಿಕರು ತಾವು ಸಂಪೂರ್ಣವಾಗಿ ಹಿಂದೆ ಸರಿದಿದ್ದೇವೆ ಎಂದೇ ವಾದಿಸುತ್ತಾರೆ! “”ನಾವು ಆಗ ನಕ್ಷೆ ಅಥವಾ ಉಪಗ್ರಹ ಚಿತ್ರಗಳನ್ನು ತೋರಿಸುತ್ತೇವೆ.

ಈ ವಿಷಯ ಎರಡೂ ಕಡೆಯ ಹಿರಿಯ ಕಮಾಂಡರ್‌ಗಳ ಮಟ್ಟದಲ್ಲಿ ಚರ್ಚೆಯಾಗುತ್ತದೆ. ಆಗ ಚೀನಿ ಸೈನಿಕರು ಪೂರ್ಣಸರಿಯುತ್ತಾರೆ. ಕೆಲವೊಮ್ಮೆ ಚೀನಿ ಅಧಿಕಾರಿಗಳು ಉಪಗ್ರಹ ಚಿತ್ರಗಳನ್ನು ತೋರಿಸಿದರೂ, ಒಪ್ಪುವುದಿಲ್ಲ. ಆಗ ನಾವು ಸ್ವಲ್ಪ ದಿನ ಸುಮ್ಮನಿದ್ದು, ಅವಕಾಶ ದೊರೆತಾಕ್ಷಣ ಸೈನಿಕರನ್ನು ಕಳಿಸಿ ಆ ಪ್ರದೇಶವನ್ನು ಮರು ಹಿಡಿತಕ್ಕೆ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

ಇದನ್ನೂ ಓದಿ: ಮಾತುಕತೆಗೆಂದು ತೆರಳಿದ್ದ ಭಾರತೀಯ ಯೋಧರ ಮೇಲೆ ಚೀನಿ ಸೈನಿಕರ ಅಟ್ಟಹಾಸ

ಬದಲಾದ ನಂಬಿಕೆ, ಬಲವಾದ ಸೇನೆ
ಗಡಿ ಭಾಗದಲ್ಲಿ ರಸ್ತೆ ಅಭಿವೃದ್ಧಿಪಡಿಸಿದರೆ ಅಥವಾ ವಿಸ್ತರಿಸಿದರೆ, ತುರ್ತು ಸ್ಥಿತಿಯಲ್ಲಿ ಶತ್ರು ಸೈನಿಕರಿಗೆ (ಚೀನಿಯರು) ಒಳನುಗ್ಗಲು ಸುಲಭವಾಗಿಬಿಡುತ್ತದೆ ಎಂದೇ ಹಿಂದಿನ ನಂಬಿಕೆಯಾಗಿತ್ತು. ಆದರೆ, ಅತ್ತ ಚೀನ ಮಾತ್ರ ದಶಕಗಳಿಂದ ಗಡಿ ಭಾಗದಲ್ಲಿ ಆಯಕಟ್ಟಿನ ಜಾಗಗಳಲ್ಲಿ ರಸ್ತೆಗಳನ್ನು ನಿರ್ಮಿಸುತ್ತಾ ಸಾಗಿತ್ತು. ಹೀಗಾಗಿ, 2012ರಲ್ಲಿ ಮನಮೋಹನ್‌ ಸಿಂಗ್‌ ಸರಕಾರ ಭಾರತ-ಚೀನ ಗಡಿಯಲ್ಲಿ 3,812 ಕಿಲೋಮೀಟರ್‌ ಉದ್ದದಲ್ಲಿ 60ಕ್ಕೂ ಹೆಚ್ಚು ರಸ್ತೆಗಳ ನಿರ್ಮಾಣ/ಅಭಿವೃದ್ಧಿಗೆ ಆದೇಶ ನೀಡಿತು.

2019ರಲ್ಲಿ ನರೇಂದ್ರ ಮೋದಿ ಸರ್ಕಾರವು ಐಸಿಬಿಆರ್ ‌(ಇಂಡಿಯಾ ಚೀನ ಬಾರ್ಡರ್‌ ರೋಡ್ಸ್‌) ಅನ್ನು “ಗಡಿ ಭಾಗದಲ್ಲಿ ಸಕ್ಷಮ ನಿಗಾ ವ್ಯವಸ್ಥೆಗೆ, ಭದ್ರತೆಗೆ ಹಾಗೂ ದುರ್ಗಮ ಪ್ರದೇಶಗಳಲ್ಲಿ ಮೂಲಸೌಕರ್ಯಾಭಿವೃದ್ಧಿಗೆ” ಪ್ರಮುಖ ಅಂಶ ಎಂದು ಹೇಳಿತು. ಕಳೆದ ವರ್ಷ, ಭದ್ರತೆಯ ಮೇಲಿನ ಕ್ಯಾಬಿನೆಟ್‌ ಸಮಿತಿಯು ಭಾರತ-ಚೀನ ಗಡಿ ಭಾಗದಲ್ಲಿ “ವ್ಯೂಹಾತ್ಮಕವಾಗಿ ಮುಖ್ಯವಾಗಿರುವ’ 44 ಹೆಚ್ಚುವರಿ ರಸ್ತೆಗಳ ನಿರ್ಮಾಣಕ್ಕೂ ಅನುಮತಿ ನೀಡಿದ್ದು, ಇದಕ್ಕಾಗಿ 21,040 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಿದೆ. ಅಲ್ಲದೇ ಈಗ ಬಾರ್ಡರ್‌ ರೋಡ್ಸ್‌ ಆರ್ಗನೈಸೇಷನ್‌ 3,346 ಕಿಲೋಮೀಟರ್‌ ಉದ್ದದಲ್ಲಿ 61 ರಸ್ತೆಗಳನ್ನು ಗಡಿ ಭಾಗದಲ್ಲಿ ನಿರ್ಮಿಸುತ್ತಿದೆ.

ಇದನ್ನೂ ಓದಿ: ಡ್ರ್ಯಾಗನ್‌ ರಾಷ್ಟ್ರದೊಂದಿಗಿನ ತಿಕ್ಕಾಟದ ಮೂಲ ಗೊತ್ತೇ?

ನೇಪಾಳಕ್ಕೆ ಚೀನ ಕುಮ್ಮಕ್ಕು
ಇತ್ತೀಚೆಗೆ ಭಾರತವು ಕೈಲಾಸ ಮಾನಸ ಸರೋವರ ಯಾತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಉದ್ಘಾಟಿಸಿದಾಗ, ಚೀನಕ್ಕೆ ಹೆಚ್ಚು ಆಘಾತವಾಯಿತು. ಸತ್ಯವೇ ನೆಂದರೆ, ಲಿಪು ಲೇಖ್‌ನಲ್ಲಿ ಭಾರತದ ರಸ್ತೆ ನಿರ್ಮಾಣವಾಗು­ತ್ತಿದ್ದಂ­ತೆಯೇ, ಭಾರ­ತೀಯ ಸೈನಿಕರಿಗೆ ಚೀನದ ಗಡಿ ಭಾಗದಲ್ಲಿನ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿಯೇ, ಚೀನ ಲಿಪುಲೇಖ್‌ ವಿಚಾರದಲ್ಲಿ ಕೆ.ಪಿ. ಶರ್ಮಾ ಓಲಿ ನೇತೃತ್ವದ ನೇಪಾಳ ಸರ್ಕಾರವನ್ನು ಭಾರತದ ವಿರುದ್ಧ ಎತ್ತಿಕಟ್ಟುತ್ತಿದೆ ಎನ್ನಲಾಗುತ್ತದೆ.

ಆದಾಗ್ಯೂ, ಕಾಲಾಪಾನಿ, ಲಿಪುಲೇಖ್‌ , ಲಿಂಪಿಯಾಧುರಾ ಪ್ರದೇಶಗಳ ವಿಚಾರವಾಗಿ ಭಾರತ-ನೇಪಾಳದ ನಡುವೆ ಮೊದಲಿನಿಂದಲೂ ಬಿಕ್ಕಟ್ಟು ಇದೆಯಾದರೂ, ನೇಪಾಳ ಸರ್ಕಾರವೆಂದಿಗೂ ಭಾರತದ ವಿರುದ್ಧ ಇಷ್ಟು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರಲಿಲ್ಲ. ಈ ಮೂರೂ ಪ್ರದೇಶಗಳನ್ನು ತನ್ನದೆಂದು ಸಾರುವ ನಕ್ಷೆಯನ್ನೂ ನೇಪಾಳ ರಚಿಸಿದ್ದು, ಇದರ ಮಾಸ್ಟರ್‌ ಮೈಂಡ್‌ ಚೀನ ಎನ್ನುತ್ತಾರೆ ರಕ್ಷಣಾ ಪರಿಣತರು.

ಕಾಡುತ್ತಿರುವ ಹೊಸ ರಸ್ತೆ
ಪ್ಯಾಂಗಾಂಗ್‌ ತ್ಸೋ ಲೇಕ್‌ ಸನಿಹದ ಪ್ರದೇಶದಲ್ಲಿ ಭಾರತವು ವ್ಯೂಹಾತ್ಮಕ ದೃಷ್ಟಿ­ಯಿಂದ ಮಹತ್ವ ಪೂರ್ಣ ರಸ್ತೆಯನ್ನು ನಿರ್ಮಿಸಿ­ರುವುದು ಚೀನವನ್ನು ಹೆಚ್ಚು ಕಾಡುತ್ತಿರುವ ವಿಷಯ. ಗಲ್ವಾನ್‌ ಕಣಿವೆಯಲ್ಲೂ ಭಾರತ ನಿರ್ಮಿಸುತ್ತಿರುವ ರಸ್ತೆಯ ಬಗ್ಗೆಯೂ ಚೀನಕ್ಕೆ ಆತಂಕವಿದೆ. ಗಲ್ವಾನ್‌ ಕಣಿವೆಯಲ್ಲಿ ಡಬುìಕ್‌-ಶಯೋಕ್‌-ದೌಲತ್‌ ಬೇಗ್‌ ಓಲ್ಡೀ ರಸ್ತೆಯನ್ನು ಸಂಪರ್ಕಿಸುವ ಮತ್ತೂಂದು ರಸ್ತೆಯನ್ನೂ ನಿರ್ಮಿಸಲಾಗುತ್ತಿದೆ. ಇದು ಪೂರ್ಣಗೊಂಡರೆ, ಅಲ್ಲಿ ಭಾರತೀಯ ಸೈನ್ಯದ ಉಪಸ್ಥಿತಿಯು ಹೆಚ್ಚಾಗಿ, ಚೀನಿ ಸೈನಿಕರ ಚಲನವಲನಗಳ ಮೇಲೆ ಹದ್ದಿನಗಣ್ಣಿಡಲು ಸುಲಭವಾಗುತ್ತದೆ!

Advertisement

Udayavani is now on Telegram. Click here to join our channel and stay updated with the latest news.

Next