Advertisement

ಇಂದಿರಾ- ಮೋದಿ- ವಾಜಪೇಯಿ: ಯಾರು ಉತ್ತಮ ಪ್ರಧಾನಿ? ಇಲ್ಲಿದೆ ಸಮೀಕ್ಷೆ ಫಲಿತಾಂಶ

11:49 AM Jan 28, 2023 | Team Udayavani |

ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಗೆ ಮೊದಲು ದೇಶದಲ್ಲಿ ಒಟ್ಟು ಒಂಬತ್ತು ಕಡೆಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ 2023 ಅತ್ಯಂತ ಪ್ರಮುಖ ವರ್ಷವಾಗಿದೆ. ಈ ಚುನಾವಣಾ ವರ್ಷದಲ್ಲಿ ಜನರ ಅಭಿಪ್ರಾಯಗಳನ್ನು ತಿಳಿಯಲು ಸಿ ವೋಟರ್ ಮತ್ತು ಇಂಡಿಯಾ ಟುಡೇ ಸಮೀಕ್ಷೆಗಳನ್ನು ನಡೆಸಿದೆ.

Advertisement

ಭಾರತ್ ಜೋಡೊ ಯಾತ್ರೆ ಲಾಭ?

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಬಗ್ಗೆ ಶೇಕಡಾ 37 ರಷ್ಟು ಜನರು ಯಾತ್ರೆಯು ಸಂಚಲನವನ್ನು ಸೃಷ್ಟಿಸಿದೆ, ಆದರೆ ಇದರಿಂದ ಕಾಂಗ್ರೆಸ್‌ ಗೆ ಗೆಲ್ಲಲು ಸಾಧ್ಯವಿಲ್ಲ ಎಂದು ಎಂದು ಭಾವಿಸುತ್ತಾರೆ. ಶೇಕಡಾ 29 ರಷ್ಟು ಜನರು ಇದೊಂದು ದೊಡ್ಡ ಸಮೂಹ ಸಂಪರ್ಕ ಚಳುವಳಿ ಎಂದು ಭಾವಿಸಿದ್ದಾರೆ. ಸುಮಾರು 13 ಪ್ರತಿಶತ ಜನರು ಇದು ರಾಹುಲ್ ಗಾಂಧಿಯನ್ನು ಮರು ಬ್ರಾಂಡ್ ಮಾಡುವ ಪ್ರಯತ್ನ ಎಂದು ಭಾವಿಸಿದರೆ, 9 ಪ್ರತಿಶತ ಜನರು ಯಾತ್ರೆಯು ಯಾವುದೇ ಬದಲಾವಣೆಯನ್ನು ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಆಯ್ಕೆ ಯಾರು?

52 ರಷ್ಟು ಜನರು ಪ್ರಧಾನಿಯಾಗಿ ಮುಂದುವರಿಯಲು ಪ್ರಧಾನಿ ನರೇಂದ್ರ ಮೋದಿ ಸೂಕ್ತ ಎಂದು ಭಾವಿಸಿದರೆ, ಶೇಕಡಾ 14 ರಷ್ಟು ಜನರು ರಾಹುಲ್ ಗಾಂಧಿ ಅವರು ರಾಷ್ಟ್ರವನ್ನು ಮುನ್ನಡೆಸಬಹುದು ಎಂದು ಭಾವಿಸುತ್ತಾರೆ ಎಂದು ಸಮೀಕ್ಷೆ ಹೇಳಿದೆ.

Advertisement

ಮೋದಿ ಉತ್ತರಾಧಿಕಾರಿ?

ಪ್ರಧಾನಿ ಮೋದಿಯವರ ಉತ್ತರಾಧಿಕಾರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 26 ರಷ್ಟು ಜನರು ಅಮಿತ್ ಶಾಗೆ ಒಲವು ತೋರಿದರೆ, ಶೇಕಡಾ 25 ರಷ್ಟು ಜನರು ಯೋಗಿ ಆದಿತ್ಯನಾಥ್ ಅವರ ಪರವಾಗಿ ಮತ್ತು ಶೇಕಡಾ 16 ರಷ್ಟು ಜನರು ನಿತಿನ್ ಗಡ್ಕರಿ ಅವರನ್ನು ಆಯ್ಕೆ ಮಾಡಿದರು.

ಯಾರು ಉತ್ತಮ?

ಇದುವರೆಗೆ ಭಾರತದ ಅತ್ಯುತ್ತಮ ಪ್ರಧಾನಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜನರಲ್ಲಿ ಮೋದಿಗೆ ಶೇಕಡಾ 47 ರಷ್ಟು ಮತ ಚಲಾಯಿಸಿದರೆ, ವಾಜಪೇಯಿ ಅವರಿಗೆ ಶೇಕಡಾ 16 ಮತ್ತು ಇಂದಿರಾ ಗಾಂಧಿಗೆ ಶೇಕಡಾ 12 ರಷ್ಟು ಜನರು ಮತ ಚಲಾಯಿಸಿದ್ದಾರೆ.

ಯಾರ ಸರ್ಕಾರ?

ಸಮೀಕ್ಷೆಯ ಪ್ರಕಾರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬಹುದು. 543 ಸ್ಥಾನಗಳಲ್ಲಿ ಎನ್ ಡಿಎ 298 ಸ್ಥಾನಗಳನ್ನು ಗೆಲ್ಲಬಹುದು, ಕಾಂಗ್ರೆಸ್ 153 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next