Advertisement

ಖುರ್ಚಿ ಉಳಿಸಿಕೊಳ್ಳಲು ಅಂದು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ರು : ಸಿಎಂ

01:14 PM Jun 25, 2021 | Team Udayavani |

ಬೆಂಗಳೂರು : 46 ವರ್ಷಗಳ ಹಿಂದೆ ಇದೇ ದಿನ ಅಂದಿನ ಪ್ರಧಾನಿ ಇಂದಿರಾಗಾಂಧಿ ಯಾವುದೇ ಕಾರಣ ಇಲ್ಲದೇ ತುರ್ತುಸ್ಥಿತಿ ಘೋಷಣೆ ಮಾಡಿದ್ರು. ಕೇವಲ ತನ್ನ ಖುರ್ಚಿ ಉಳಿವಿಗಾಗಿ ಇಂತಹ ತೀರ್ಮಾನ ಮಾಡಿದ್ರು. ದೇಶದ ಅನೇಕ ನಾಯಕರು ಜೈಲುವಾಸ ಅನುಭವಿಸಬೇಕಾಯಿತು ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

Advertisement

ತುರ್ತುಪರಿಸ್ಥಿತಿ ವೇಳೆ ವಾಕ್ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯ ಕಸಿದುಕೊಳ್ಳಲಾಯಿತು. ಹಲವು ಪತ್ರಿಕೆಗಳು ಪ್ರತಿಭಟಿಸಿದ್ವು.
ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದ ನಟಿ ಸ್ನೇಹಲತಾ ಜೈಲಿನಲ್ಲಿ ಸಾವನ್ನಪ್ಪಿದ್ರು. ನಾನು ಸೇರಿದಂತೆ ಅನೇಕ ಕಾರ್ಯಕರ್ತರು ಜೈಲುವಾಸ ಅನುಭವಿಸಬೇಕಾಯಿತು.

ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡೀಸ್, ದೇವೇಗೌಡ ಸೇರಿದಂತೆ ಎಲ್ಲರನ್ನೂ ಬಂಧಿಸಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿಟ್ಟಿದ್ದರು. ಆನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಜನ ಅವರನ್ನ ತಿರಸ್ಕರಿಸಿದ್ರು. ಈ ದಿನ ಬಿಜೆಪಿಯಿಂದ ಅಂದು ಬಂಧಿತರಾದವರ ಮನೆಗೆ ಹೋಗಿ ಗೌರವಿಸುವ ಕೆಲಸ ಮಾಡಲಾಗ್ತಿದೆ.

ಅಂತಹ ಕರಾಳ ಶಾಸನ ಜನಜೀವನದ ಮೇಲೆ ಬೀರಿದ ದುಷ್ಪರಿಣಾಮ 46 ವರ್ಷಗಳಾದ್ಮೇಲೂ ಕಾಣ್ತಿದೆ. ಇಂದು ಕಾಂಗ್ರೆಸ್ ದೇಶದ ಜನರಲ್ಲಿ ಕ್ಷಮೆ ಕೇಳ್ಬೇಕು. ಆಮೂಲಕ ಅವರು ಮಾಡಿದ ಅಕ್ಷ್ಯಮ್ಯ ಅಪರಾಧವನ್ನ ಒಪ್ಪಿಕೊಳ್ಳಬೇಕು.

ಮನೆಮನೆಗೆ ಗುರುತಿಸಿ ಸನ್ಮಾನ ಮಾಡುತ್ತಿರುವ ನಮ್ಮ ಕಾರ್ಯಕ್ರರ್ತರಿಗೆ ಧನ್ಯವಾದ ತಿಳಿಸುತ್ತೇನೆ. ಜೈಲಿನಲ್ಲಿದ್ದಾಗ ಅಲ್ಲೇ ನಮ್ಮನ್ನ ಮುಗಿಸೋಕೆ ಪ್ರಯತ್ನ ಮಾಡಿದ್ದನ್ನು ಜೀವನ ಪೂರ್ತಿ ನೆನಪಿಟ್ಡುಕೊಳ್ಳಬೇಕು. ಜಯಪ್ರಕಾಶ್ ನಾರಾಯಣ್ ಪುಣ್ಯಾತ್ಮನ ಹೋರಾಟದಿಂದ ತುರ್ತು ಪರಿಸ್ಥಿತಿ ಅಂತ್ಯ ಆಯ್ತು ಎಂದು ಸಿಎಂ ಹೇಳಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next