Advertisement

ಇಂದಿರಾ ನೆಚ್ಚಿನ ಮುಖರ್ಜಿ,ರಾಜೀವ್ ಗಾಂಧಿ ಮೂಲೆಗುಂಪಾಗಿಸಿದ್ರು! ಹೊಸ ಪಕ್ಷ ಕಟ್ಟಿದ್ದ ಪ್ರಣಬ್

06:18 PM Aug 31, 2020 | Nagendra Trasi |

ಮಣಿಪಾಲ: ಹಿರಿಯ ರಾಜಕಾರಣಿ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರಣಬ್ ಮುಖರ್ಜಿ ಅವರ ಪ್ರತಿಭೆಯನ್ನು ಮೊದಲು ಗುರುತಿಸಿದವರು ಇಂದಿರಾ ಗಾಂಧಿ. ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಮೂಲಕ ಮುಖರ್ಜಿಗೆ ತಕ್ಕ ಸ್ಥಾನ ಕಲ್ಪಿಸಿಕೊಟ್ಟಿದ್ದರು. ಆದರೆ 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯ ನಂತರ ಅವರನ್ನು ಕಡೆಗಣಿಸಲು ಪ್ರಾರಂಭಿಸಿದ್ದರು. ಅದಾಗಲೇ ರಾಜೀವ್ ಗಾಂಧಿ ಪಕ್ಷವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಬಿಟ್ಟಿದ್ದರು. ಮುಖರ್ಜಿ ಸಚಿವ ಹುದ್ದೆಯನ್ನು ಕಳೆದುಕೊಳ್ಳವಂತಾಗಿತ್ತು. ಅಷ್ಟೇ ಅಲ್ಲ ಪ್ರಣಬ್ ಮುಖರ್ಜಿ ಅವರನ್ನು ಪಶ್ಚಿಮಬಂಗಾಳದ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ನೋಡಿಕೊಳ್ಳುವ ಹೊಣೆಗಾರಿಕೆ ನೀಡಿ ಕಳುಹಿಸಲಾಗಿತ್ತು.

Advertisement

1984ರಲ್ಲಿಯೂ ಪ್ರಧಾನಿ ಹುದ್ದೆ ವ್ಯವಸ್ಥಿತವಾಗಿ ತಪ್ಪಿಸಲಾಗಿತ್ತು:

1984ರಲ್ಲಿಯೂ ಪ್ರಣಬ್ ಮುಖರ್ಜಿ ಅವರನ್ನು ಪ್ರಧಾನಿ ಹುದ್ದೆಗೆ ಏರಿಸಲು ಅವಕಾಶ ಇತ್ತು. ಅಲ್ಲದೇ ಇಂದಿರಾಗಾಂಧಿ ಆಪ್ತರಾಗಿದ್ದ ಮುಖರ್ಜಿ ಅವರನ್ನು ಅವರ ಬಳಿಕ ಪ್ರಧಾನಿಯಾಗಲಿದ್ದಾರೆಂಬುದು ಸುದ್ದಿ ಹರಿದಾಡುತ್ತಿತ್ತು. ಆದರೆ ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರನ್ನು ಎತ್ತಿಕಟ್ಟುವ ಮೂಲಕ ಮುಖರ್ಜಿ ಅವರನ್ನು ರಾಜಕೀಯ ಪಡಸಾಲೆಯಿಂದ ಅವರನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಿಬಿಟ್ಟಿದ್ದರು.

ಇದರಿಂದ ಅಸಮಧಾನಗೊಂಡ ಪ್ರಣಬ್ ಮುಖರ್ಜಿ ಅವರು 1986ರಲ್ಲಿ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಕ್ಷ (ಆರ್ ಎಸ್ ಸಿ)ವನ್ನು ಸ್ಥಾಪಿಸಿದ್ದರು.

Advertisement

1998ರಿಂದ 99ರವರೆಗೆ ಎಐಸಿಸಿಯ ಜನರಲ್ ಸೆಕ್ರೆಟರಿಯಾಗಿದ್ದರು. ನಂತರ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. 2000ನೇ ಇಸವಿಯಲ್ಲಿ ಪಶ್ಚಿಮಬಂಗಾಳದ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಲೋಕಸಭೆಯ ನಾಯಕರಾಗಿದ್ದರು. 2009ರಲ್ಲಿ ನಡೆದ ಲೋಕಸಭಾ (ಪಶ್ಚಿಮಬಂಗಾಳದ ಜಾಂಗಿಪುರ್) ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ನಂತರ ಮೂರು ವರ್ಷಗಳ ಬಳಿಕ ಆರ್ ಎಸ್ ಸಿ ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಜತೆ ವಿಲೀನವಾಗಿತ್ತು.

ರಾಜೀವ್ ಗಾಂಧಿ ಅವರು ಪ್ರಣಬ್ ಮುಖರ್ಜಿ ಅವರ ಜತೆ ರಾಜಿ ಸಂಧಾನ ಮಾಡಿಕೊಂಡಿದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದರು. ಯಾಕೆಂದರೆ 1987ರಲ್ಲಿ ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಆರ್ ಎಸ್ ಸಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಪೈಪೋಟಿ ನೀಡಲಿದೆ ಎಂಬ ಸುದ್ದಿ ರಾಜೀವ್ ಗಾಂಧಿ ಕಿವಿಗೆ ತಲುಪಿತ್ತು. ಹೀಗೆ ಕಾಂಗ್ರೆಸ್ ಜತೆ ಕೈಜೋಡಿಸಿದ್ದ ಮುಖರ್ಜಿ ಅವರೊಬ್ಬ ನತದೃಷ್ಟ ನಾಯಕ ಎಂದೇ ವಿಶ್ಲೇಷಿಸಲಾಗುತ್ತಿದೆ. 1991ರಲ್ಲಿ ರಾಜೀವ್ ಗಾಂಧಿ ಹತ್ಯೆಯ ನಂತರ ಮುಖರ್ಜಿ ಅವರ ರಾಜಕೀಯ ಬದುಕು ಮತ್ತೊಂದು ಮಜಲು ಕಂಡಿತ್ತು. ಅದು ಸಾಧ್ಯವಾಗಿದ್ದು, ಪ್ರಧಾನಿ ಪಿವಿ ನರಸಿಂಹ ರಾವ್ ಅವರಿಂದಾಗಿ!

Advertisement

Udayavani is now on Telegram. Click here to join our channel and stay updated with the latest news.

Next