ಕೊಪ್ಪಳ: ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡ ಜನರಿಗೆ ನಗರ ಪ್ರದೇಶದಲ್ಲಿ ಕಡಿಮೆ ಬೆಲೆಗೆ ಊಟ, ಉಪಹಾರ ದೊರೆಯಲಿ ಎಂಬ ಸದುದ್ದೇಶದಿಂದ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿ ಮಾಡಿದೆ. ಕೊಪ್ಪಳ ಜಿಲ್ಲೆಗೆ 5 ಕ್ಯಾಂಟೀನ್ ಮಂಜೂರಾಗಿದ್ದರೂ ಈವರೆಗೆ ಎರಡು ಕ್ಯಾಂಟೀನ್ ಮಾತ್ರ ಬಡವರ ಹಸಿಅವು ನೀಗಿಸುತ್ತಿವೆ. ಉಳಿದ ಮೂರು ಕ್ಯಾಂಟೀನ್ ಆರಂಭವಾಗಿಲ್ಲ.
ಹೌದು. ಕೊಪ್ಪಳ ನಗರ ಹಾಗೂ ಯಲಬುರ್ಗಾ ಪಟ್ಟಣದಲ್ಲಿ ಮಾತ್ರ ತಲಾ ಒಂದೊಂದು ಕ್ಯಾಂಟೀನ್ ವರ್ಷದ ಹಿಂದೆ ಆರಂಭವಾಗಿವೆ.ಕುಷ್ಟಗಿ ತಾಲೂಕಿನಲ್ಲಿ ಇನ್ನೂ ಕ್ಯಾಂಟೀನ್‌ಗೆ ಜಾಗಹುಡುಕಾಟ ನಡೆದಿದೆ. ಗಂಗಾವತಿಯಲ್ಲಿ ಎರಡುಕೇಂದ್ರ ಆರಂಭಿಸಬೇಕಿದೆ. ಒಂದು ಈಗಾಗಲೇ ಕಟ್ಟಡ ಕಾಮಗಾರಿ ಪೂರ್ಣ ಗೊಂಡಿದ್ದು,ಉದ್ಘಾಟನೆ ಮಾಡೋದು ಮಾತ್ರ ಬಾಕಿಯಿದೆ.ಮತ್ತೂಂದಕ್ಕೂ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆದಿದೆ.
ಅಚ್ಚರಿಯೆಂದರೆ, ಎಲ್ಲ ಕ್ಯಾಂಟೀನ್‌ಗಳು ಆರಂಭವಾಗಿ ಜನರಿಗೆ ಸೇವೆ ಕೊಡಬೇಕಿತ್ತು.ಆದರೆ ಎರಡು ಮಾತ್ರ ಸೇವೆ ನೀಡುತ್ತಿದ್ದು, ಇನ್ನುಮೂರು ಕಾರ್ಯಾರಂಭಗೊಳ್ಳದೇ ಇರುವುದುನಿಜಕ್ಕೂ ಜನರಲ್ಲೂ ಬೇಸರ ತರಿಸಿದೆ.
ಹಸಿವು ನೀಗಿಸುತ್ತಿವೆ ಕ್ಯಾಂಟೀನ್:ಕೊಪ್ಪಳ-ಯಲಬುರ್ಗಾದಲ್ಲಿ ಆರಂಭವಾಗಿರುವಕ್ಯಾಂಟೀನ್‌ಗಳು ಬಡವರ, ಕೂಲಿ ಕೆಲಸಕ್ಕೆ ನಗರಕ್ಕೆಆಗಮಿಸಿದ ಜನರ, ಆಸ್ಪತ್ರೆಯಲ್ಲಿರುವ ರೋಗಿಗಳ ಸಂಬಂಧಿಗಳ, ಮನೆಯಲ್ಲಿ ಉಪಹಾರ ಸೇವನೆ ಮಾಡದೇ ಬರುವ ವಿದ್ಯಾರ್ಥಿಗಳ ಹಸಿವುನೀಗಿಸುತ್ತಿವೆ. ಕಡಿಮೆ ಬೆಲೆಯಲ್ಲಿ ಒಂದೊತ್ತಿನಉಪಹಾರ, ಊಟ ಸಿಗುತ್ತಿರುವುದಕ್ಕೆ ಜನರು ಖುಷಿಯಾಗಿದ್ದಾರೆ.
ಇಚ್ಛಾಶಕ್ತಿ ಕೊರತೆಯೋ? ರಾಜಕೀಯವೋ? ಕ್ಯಾಂಟೀನ್ ಆರಂಭಕ್ಕೆ ಇಲ್ಲಿನ ಅಧಿಕಾರಿಗಳನಿರ್ಲಕ್ಷ್ಯವೋ? ಅಥವಾ ಸರ್ಕಾರದ ಇಚ್ಛಾಶಕ್ತಿ ಕೊರತೆಯೋ? ಎನ್ನುವುದೇ ತಿಳಿಯುತ್ತಿಲ್ಲ.ಜನರಿಗೆ ಉಪಯುಕ್ತವಾಗುವ ಕ್ಯಾಂಟೀನ್‌ಗಳಲ್ಲೂರಾಜಕೀಯ ಬೆರೆಸುವ ಕೆಲಸ ಮಾಡುತ್ತಿರುವುದುನಿಜಕ್ಕೂ ವಿಪರ್ಯಾಸದ ಸಂಗತಿ. ಅಲ್ಲದೇಮೂರು ವರ್ಷದ ಅವಧಿ ಗೆ ಕ್ಯಾಂಟೀನ್ ಗಳು ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಅವ ಧಿ ಮುಗಿಯುತ್ತಾ ಬಂದಿದೆ. ಆದರೆ ಕಟ್ಟಡಗಳು ನಿರ್ಮಾಣವಾಗುತ್ತಿಲ್ಲ. ಸಿದ್ಧವಾಗಿ ನಿಂತಿರುವ ಕಟ್ಟಡವೂ ಉದ್ಘಾಟನೆಗೊಳ್ಳುತ್ತಿಲ್ಲ. ಸರ್ಕಾರ ಹಾಗೂ ಅಧಿಕಾರಿಗಳು ಇನ್ನಾದರೂ ಕಾಳಜಿ ವಹಿಸಿ ಕ್ಯಾಂಟೀನ್‌ಗಳನ್ನು ಆರಂಭ ಮಾಡಬೇಕಿದೆ.
ಜಿಲ್ಲೆಗೆ ಐದು ಇಂದಿರಾ ಕ್ಯಾಂಟೀನ್‌ಗಳು ಮಂಜೂರಾಗಿವೆ. ಈ ಪೈಕಿ ಕೊಪ್ಪಳ ಹಾಗೂ ಯಲಬುರ್ಗಾದಲ್ಲಿ ಕ್ಯಾಂಟೀನ್ ಆರಂಭಿಸಲಾಗಿದೆ. ಜನರಿಗೆ ಊಟ, ಉಪಹಾರ ದೊರೆಯುತ್ತಿದೆ. ಕುಷ್ಟಗಿಯಲ್ಲಿ ಒಂದು ಹಾಗೂಗಂಗಾವತಿಯಲ್ಲಿ ಎರಡು ಕ್ಯಾಂಟೀನ್ ಆರಂಭಮಾಡಬೇಕಿದೆ. ಎರಡು ಕಡೆ ಸ್ಥಳ ಗುರುತಿಸುವ ಕಾರ್ಯ ನಡೆದಿದೆ. ಗಂಗಾವತಿಯಲ್ಲಿ ಒಂದುಕ್ಯಾಂಟೀನ್ ಕಟ್ಟಡ ಪೂರ್ಣಗೊಂಡಿದ್ದು ಉದ್ಘಾಟನೆ ವೊಂದೇ ಬಾಕಿ ಇದೆ.
– ಗಂಗಪ್ಪ, ಕೊಪ್ಪಳ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ
-ದತ್ತು ಕಮ್ಮಾರ