Advertisement

ಇಂದಿರಾ ಕ್ಯಾಂಟೀನ್‌ಗೆ ಚಾಲನೆ

07:20 AM Feb 10, 2019 | Team Udayavani |

ದೇವನಹಳ್ಳಿ: ಅತ್ಯಂತ ಕಡಿಮೆ ದರದಲ್ಲಿ ಸ್ವಚ್ಛ, ಗುಣಮಟ್ಟದ ಆಹಾರ ಪೂರೈಸಲಿರುವ ಇಂದಿರಾ ಕ್ಯಾಂಟೀನ್‌ ಬಡವರು, ವಿದ್ಯಾರ್ಥಿ ಗಳು, ದುಡಿಯುವ ವರ್ಗದ ಜನರ ಆರ್ಥಿಕ ಹೊರೆ ತಗ್ಗಿಸಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ತಿಳಿದರು. ನಗರದ ಹಳೇ ಬಸ್‌ ನಿಲ್ದಾಣದ ಬಳಿ ಪುರಸಭೆ ಮತ್ತು ನಗರ ಯೋಜನೆಯಡಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟಿನ್‌ ಅನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಹಸಿವು ಮುಕ್ತ ರಾಜ್ಯ ಉದ್ದೇಶ: ಸಿದ್ಧರಾ ಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕಾರ್ಮಿಕ ವರ್ಗ ಮತ್ತು ಬಡಜನರಿಗೆ 5 ರೂ. ನ‌ಲ್ಲಿ ಬೆಳಗ್ಗಿನ ಉಪಹಾರ ಹಾಗೂ ಮಧ್ಯಾಹ್ನ 10 ರೂ.ಗೆ ಬಿಸಿಯೂಟ ನೀಡುವ ಮಹ ತ್ವಾಂಕ್ಷೆಯ ಯೋಜನೆಯನ್ನು ಜಾರಿಗೊಳಿಸ ಲಾಗಿತ್ತು. ಸಾಕಷ್ಟು ಜನರು ಇದರ ಉಪ ಯೋಗವನ್ನು ಪಡೆಯುತ್ತಿದ್ದಾರೆ.

ಮೊದಲು ಬೆಂಗಳೂರಿನಲ್ಲಿ ಪ್ರಾರಂಭಿಸಿದ ನಂತರ ಗ್ರಾಮೀಣ ವ್ಯಾಪ್ತಿಯ ನಗರ ಪ್ರದೇಶಗಳಿಗೆ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಯಾರೂ ಸಹ ಹಸಿವಿ ನಿಂದ ಇರಬಾರದೆಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಮೈತ್ರಿ ಸರ್ಕಾರದಲ್ಲೂ ಈ ಯೋಜನೆಯನ್ನು ಮುಂದುವರಿಸಲಾಗಿದೆ ಎಂದರು.

ಬಡವರಿಗೆ ಅನುಕೂಲ: ಸಂಸದ ವೀರಪ್ಪ ಮೊಯ್ಲಿ ಮಾತನಾಡಿ, ದೇವನಹಳ್ಳಿ ನಗರದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಮಾಡಿರು ವುದರಿಂದ ಬಡಜನರಿಗೆ ಕಡಿಮೆ ದರದಲ್ಲಿ ಉಪಹಾರ ಮತ್ತು ಊಟ ನೀಡಲಾಗುವುದು. ಇದು ಸಾರ್ವಜನಿಕರಿಗೆ ಹತ್ತಿರವಾಗಿದ್ದು, ಹೆಚ್ಚಿನ ಜನರು ಬರುವಂತಾಗಿದೆ. ಸರ್ಕಾರ ಈ ಉತ್ತಮ ಯೋಜನೆ ಮಾಡಿ ಬಡಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ 4 ತಾಲೂಕು ಗಳಲ್ಲಿ ಈಗಾಗಲೇ ಇಂದಿರಾ ಕ್ಯಾಂಟೀನ್‌ ನಿರ್ಮಾಣವಾಗಿವೆ. ಕಾರ್ಮಿಕ ವರ್ಗ, ರೈತಾಪಿ ವರ್ಗ ಬೆಳಗ್ಗೆ ಕೆಲಸಕ್ಕೆ ಹೋಗುವ ವೇಳೆ ಅಡುಗೆ ತಯಾರಿಸಲು ಕಷ್ಟವಾಗು ವುದರಿಂದ ಅವರಿಗೆ ಇಂದಿರಾ ಕ್ಯಾಂಟೀನ್‌ನಿಂದ ಹೆಚ್ಚಿನ ಅನುಕೂಲವಾಗಿದೆ ಎಂದು ಹೇಳಿದರು.

Advertisement

ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ: ಪುರ ಸಭಾ ಅಧ್ಯಕ್ಷ ಎಂ.ಮೂರ್ತಿ ಮಾತನಾಡಿ, ಇಂದಿರಾ ಕ್ಯಾಂಟೀನ್‌ಗೆ ಡಿಎಂಡಿ ನಿಧಿ 72 ಲಕ್ಷ ರೂ. ಹಾಗೂ ಪುರಸಭೆಯ ನಿಧಿ 20 ಲಕ್ಷ ರೂ. ಸೇರಿಸಿ ಒಟ್ಟು 92 ಲಕ್ಷ ರೂ.ನಲ್ಲಿ 50×60 ಅಡಿ ಅಳತೆಯಲ್ಲಿ ಕ್ಯಾಂಟೀನ್‌ ನಿರ್ಮಾಣ ಮಾಡಲಾಗಿದೆ. ಹೊಸ ಬಸ್‌ ನಿಲ್ದಾಣದಲ್ಲಿ ಪುರಸಭೆಯ ನಿಧಿಯಲ್ಲಿ 9 ಅಂಗಡಿ, ಮಳಿಗೆ ಗಳಿಗೆ 42 ಲಕ್ಷ ರೂ. ಹಾಗೂ ವಿನಾಯಕ ಹಳೇ ಚಿತ್ರಮಂದಿರದ ಬಳಿ 1 ಲಕ್ಷ ಲೀ. ಸಾಮರ್ಥ್ಯದ ಎಸ್‌ಎಫ್ಸಿಯ 14 ಲಕ್ಷ ರೂ.ವೆಚ್ಚದಲ್ಲಿ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಈ ವೇಳೆಯಲ್ಲಿ ಮಾಜಿ ಪುರಸಭಾ ಅಧ್ಯಕ್ಷರಾದ ಲಕ್ಷ್ಮೀನಾರಾಯಣಪ್ಪ, ಸಿ.ಜಗ ನ್ನಾಥ್‌, ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷೆ ಜಯಮ್ಮ, ಸದಸ್ಯರಾದ ಕೆ.ಸಿ. ಮಂಜುನಾಥ್‌, ಲಕ್ಷ್ಮೀನಾರಾಯಣ್‌, ರಾಧಮ್ಮ, ಅನಂತ ಕುಮಾರಿ, ಜಿಲ್ಲಾಧಿಕಾರಿ ಕರೀಗೌಡ, ಪುರ ಸಭಾ ಉಪಾಧ್ಯಕ್ಷೆ ಆಶಾ ರಾಣಿ, ಸ್ಥಾಯಿ ಸಮಿ ತಿ ಅಧ್ಯಕ್ಷ ಗೋಪಾಲ ಕೃಷ್ಣ, ಪುರಸಭಾ ಸದಸ್ಯ ರಾದ ವೈ.ಸಿ.ಸತೀಶ್‌ ಕುಮಾರ್‌, ವೇಣುಗೋ ಪಾಲ್‌, ಎನ್‌.ರಘು, ಜಿ.ಎ.ರವೀಂದ್ರ,

ವಿ.ಗೋಪಾಲ್‌, ಪದ್ಮಾವತಿ, ಶಾರದಮ್ಮ, ರತ್ನಮ್ಮ, ಬೇಕರಿ ಮಂಜುನಾಥ್‌, ಎನ್‌ ಶಶಿ ಕುಮಾರ್‌, ಎಂ.ನಾರಾಯಣ ಸ್ವಾಮಿ, ನರಸಿಂಹಮೂರ್ತಿ, ಎಂ.ಕುಮಾರ್‌, ಭಾಗ್ಯಮ್ಮ, ಶಾಂತಮ್ಮ, ಲಕ್ಷ್ಮೀ, ಪುಷ್ಪಾ, ಪುರ ಸಭಾ ಮುಖ್ಯಾಧಿಕಾರಿ ಹನು ಮಂತೇಗೌಡ, ಜಿಲ್ಲಾ ನಗರಾಭಿವೃದ್ಧಿ ಯೋಜ ನಾ ನಿರ್ದೇಶಕ ಹೇಮಂತ್‌, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್‌.ಆರ್‌.ರವಿಕುಮಾರ್‌,

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ ಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಎಸ್‌ಸಿ ವಿಭಾಗದ ಮಾಜಿ ಅಧ್ಯಕ್ಷ ಎ.ಚಿನ್ನಪ್ಪ, ಟೌನ್‌ ಜೆಡಿಎಸ್‌ ಅಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ಸಾಯಿ ಕುಮಾರ್‌ ಬಾಬು ಮುಂತಾದವರು ಹಾಜರಿ ದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರೆ ಲ್ಲರೂ ಕ್ಯಾಂಟೀನ್‌ನಲ್ಲಿ ಬೆಳಗಿನ ಉಪಾಹಾರ ವಾಗಿ ಉಪ್ಪಿಟ್ಟು, ಕೇಸರಿ ಬಾತ್‌ ಸವಿದರು.

Advertisement

Udayavani is now on Telegram. Click here to join our channel and stay updated with the latest news.

Next