ಕುಂದಾಪುರ: ರಾಜ್ಯ ಸರಕಾರದ ಇಂದಿರಾ ಕ್ಯಾಂಟೀನ್ ನಗರದಲ್ಲೂ ಆರಂಭವಾಗಲಿದೆ. ಶಾಸ್ತ್ರಿ ಸರ್ಕಲ್ ಬಳಿಯ ಪಶು ವೈದ್ಯ ಆಸ್ಪತ್ರೆಯ ಜಾಗದಲ್ಲಿ ಕ್ಯಾಂಟೀನ್‌ಗೆ ಕಟ್ಟಡ ನಿರ್ಮಿಸುತ್ತಿದ್ದು, ತಳಪಾಯ (ಪಂಚಾಂಗ) ಪೂರ್ಣಗೊಂಡಿದೆ. ಮೆಟಲ್ ಫ್ಲೈವುಡ್, ಸ್ಲ್ಯಾಬ್ ಗೋಡೆಗಳನ್ನು ಜೋಡಿಸಬೇಕಿದ್ದು, 20 ದಿನದೊಳಗೆ ಮುಕ್ತಾಯವಾಗಲಿದೆ. ಜಿಲ್ಲೆಗೆ 4 ಇಂದಿರಾ ಕ್ಯಾಂಟೀನ್ ಮಂಜೂರಾಗಿದ್ದು, ಮಣಿಪಾಲದಲ್ಲಿ ಈಗಾಗಲೇ ಶುರುವಾಗಿದೆ. ಇದೇ ವಾರ ಉಡುಪಿಯಲ್ಲೂ ಕ್ಯಾಂಟೀನ್‌ಆರಂಭಗೊಳ್ಳಲಿದೆ. ಕಾರ್ಕಳದಲ್ಲಿ ಇನ್ನಷ್ಟೇ ಆಗಬೇಕಾಗಿದೆ. ಕುಂದಾಪುರದಲ್ಲಿ ಜಾಗದ ಸಮಸ್ಯೆಯಿಂದ ವಿಳಂಬವಾಗಿದೆ. ಪಶು ಆಸ್ಪತ್ರೆಯ ಜಾಗಕ್ಕೆ ಹೋಗುವ ದಾರಿ ಸಮಸ್ಯೆ ಇದ್ದು, ಅಲ್ಲಿ ಗೂಡಂಗಡಿ ಇದ್ದುದರಿಂದ ಅದರ ತೆರವು ಕಾರ್ಯ ನಡೆದಿದೆ.
ಪುರಸಭೆಯಿಂದ 13.5 ಲಕ್ಷ ರೂ.
ಜಾಗಕ್ಕೆ ಕಂಪೌಂಡ್, ಬೋರ್ಡ್‌ಗಳು, ಟೋಕನ್, ಮೆನು ಬೋರ್ಡ್, ನೀರಿನ ಸೌಲಭ್ಯ, ರಸ್ತೆ ಸಂಪರ್ಕ, ಎಲ್ಲ ಸೇರಿದಂತೆ ಸುಮಾರು 13.5 ಲಕ್ಷ ರೂ. ಅನ್ನು ಪುರಸಭೆ ಭರಿಸಲಿದೆ. ಕೆಇಎಫ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಗೆ ಕಟ್ಟಡ ನಿರ್ಮಾಣ ಕಾಮಗಾರಿ ವಹಿಸಿಕೊಡಲಾಗಿದೆ.