Advertisement
ಒಂದೆಡೆ ಜನರ ನಿರಾಸಕ್ತಿಯಾದರೆ, ಇನ್ನೊಂದೆಡೆ ಆರಂಭದಲ್ಲಿ ನೀಡುತ್ತಿದ್ದಗುಣಮಟ್ಟ ಹಾಗೂ ಪ್ರಮಾಣದಲ್ಲಿಇಳಿಕೆಯಾಗಿದೆ. ಇದರಿಂದ ಜನರುಸಹ ಕ್ಯಾಂಟೀನ್ ಬಳಿ ಸುಳಿಯುತ್ತಿಲ್ಲ.ನಗರದಲ್ಲಿ 7 ಇಂದಿರಾ ಕ್ಯಾಂಟೀನ್‌ಗಳುಇದ್ದು, ಬೆಳಗ್ಗೆಯಿಂದ ರಾತ್ರಿಯವರೆಗೆಕೇವಲ 2 ಕ್ಯಾಂಟೀನ್‌ಗಳು ಮಾತ್ರ ಕೆಲಸನಿರ್ವಹಿಸುತ್ತಿವೆ. ಇನ್ನುಳಿದ ಕ್ಯಾಂಟೀನ್‌ಗಳು ಸಂಜೆಯಾಗುತ್ತಿದ್ದಂತೆ ಬಾಗಿಲು ಹಾಕುತ್ತಿವೆ.
Related Articles
Advertisement
ಕ್ಯಾಂಟೀನ್‌ಗಳ ಸದ್ಯದ ಸ್ಥಿತಿ :
ನ್ಯೂ ಇಂಗ್ಲಿಷ್ ಸ್ಕೂಲ್ ಬಳಿ: ಬೆಳಗ್ಗೆ 100ಪ್ಲೇಟ್ ಉಪಾಹಾರ, ಮಧ್ಯಾಹ್ನ 30ರಿಂದ35 ಊಟ, ರಾತ್ರಿ ಊಟ ಇಲ್ಲ, ಆರೇಳು ತಿಂಗಳಿಂದ ವಿದ್ಯುತ್ ಸಂಪರ್ಕ ಕಡಿತ.ಎಸ್.ಎಂ. ಕೃಷ್ಣ ನಗರ: ಬೆಳಗ್ಗೆ 100ಪ್ಲೇಟ್ ಉಪಾಹಾರ, ಮಧ್ಯಾಹ್ನ 100 ಊಟ, ರಾತ್ರಿ ಊಟ ಇಲ್ಲ. ಆರೇಳುತಿಂಗಳಿಂದ ವಿದ್ಯುತ್ ಸಂಪರ್ಕ ಕಡಿತ.
ಸೋನಿಯಾ ಗಾಂಧಿ ನಗರ: ಬೆಳಗ್ಗೆ 100 ಪ್ಲೇಟ್ ಉಪಾಹಾರ, ಮಧ್ಯಾಹ್ನ 30ರಿಂದ50 ಊಟ, ರಾತ್ರಿ ಊಟ ಇಲ್ಲ.
ಬೆಂಗೇರಿ: ಬೆಳಗ್ಗೆ 150 ಪ್ಲೇಟ್ ಉಪಾಹಾರ, ಮಧ್ಯಾಹ್ನ 30 ಊಟ, ರಾತ್ರಿಊಟ ಇಲ್ಲ. ಶನಿವಾರದಂದು ಹೆಚ್ಚಿನಉಪಾಹಾರ ಹಾಗೂ ಊಟ ವಿತರಣೆ. ಹೊಸ ಬಸ್ ನಿಲ್ದಾಣ: ಬೆಳಗ್ಗೆ 300ರಿಂದ350 ಉಪಾಹಾರ, ಮಧ್ಯಾಹ್ನ 400ರಿಂದ 500 ಊಟ, ರಾತ್ರಿ ಅಲ್ಪ ಪ್ರಮಾಣದಲ್ಲಿ ಊಟ ವಿತರಣೆ.
ಕಿಮ್ಸ್ ಆವರಣ: ಬೆಳಗ್ಗೆ 450ರಿಂದ 500 ಉಪಾಹಾರ, ಮಧ್ಯಾಹ್ನ 300ರಿಂದ 400 ಊಟ, ರಾತ್ರಿ 100ರಿಂದ 150 ಊಟ ವಿತರಣೆ.
ಉಣಕಲ್ಲ ಕೆರೆ ಉದ್ಯಾನ: ಬೆಳಗ್ಗೆ 100 ಉಪಾಹಾರ, ಮಧ್ಯಾಹ್ನ 50 ಊಟ, ರಾತ್ರಿ ಊಟ ಇಲ್ಲ.
ನಗರದ ಕೆಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಜನರು ಇಲ್ಲದೇ ಇರುವುದರಿಂದಮಧ್ಯಾಹ್ನವೇ ಮುಚ್ಚಿರುವುದು ಗಮನಕ್ಕೆ ಬಂದಿದೆ. ಕ್ಯಾಂಟೀನ್‌ಗಳಲ್ಲಿವಿದ್ಯುತ್ ಸಂಪರ್ಕ ಇಲ್ಲದಿರುವುದು, ಕುಡಿಯುವ ನೀರು ಇಲ್ಲದಿರುವುದರ ಕುರಿತು ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. – ಡಾI ಸುರೇಶ ಇಟ್ನಾಳ, ಹು ಧಾ ಪಾಲಿಕೆ ಆಯುಕ್ತ
ಇಂದಿರಾ ಕ್ಯಾಂಟೀನ್‌ಗಳಲ್ಲಿ ಆರಂಭದಲ್ಲಿ ನೀಡುತ್ತಿದ್ದ ಕ್ವಾಂಟಿಟಿ ಹಾಗೂ ಕ್ವಾಲಿಟಿ ಈಗ ಇಲ್ಲವಾಗಿದೆ. ಆರಂಭದಲ್ಲಿ ಉತ್ತಮವಾಗಿ ಹಾಗೂ ವಿವಿಧ ಬಗೆಯ ಉಪಾಹಾರ ನೀಡಲಾಗುತ್ತಿತ್ತು. ಆದರೆ ಇದೀಗ ಇಡ್ಲಿ, ಗುರುವಾರ ಪಲಾವ್ ಹಾಗೂರವಿವಾರ ಉಪ್ಪಿಟ್ಟು ಶಿರಾ ಮಾತ್ರ ನೀಡಲಾಗುತ್ತಿದೆ. ಮೊದಲಿನಂತೆ ಪೊಂಗಲ್,ಬಿಸಿಬೇಳೆಬಾತ್, ಪುಳಿಯೋಗರೆ ಯಾವುದನ್ನು ನೀಡಲಾಗುತ್ತಿಲ್ಲ. – ಜಾಫರ್ ಮೊರಬ, ಗ್ರಾಹಕ
-ಬಸವರಾಜ ಹೂಗಾರ