Advertisement

Indigo ಪ್ರಯಾಣ ಟೀಕಿಸಿದ ಗ್ರಾಹಕ ಟಿಕೆಟ್‌ ಹಣ ವಾಪಸ್‌ ಕೊಟ್ಟ ಸಂಸ್ಥೆ

12:12 AM Jan 15, 2024 | Team Udayavani |

ನವದೆಹಲಿ: “ಇಂಡಿಗೋ ವಿಮಾನದಲ್ಲಿನ ಪ್ರಯಾಣವು ಅತ್ಯಂತ ಕೆಟ್ಟ ಅನುಭವ ನೀಡಿತು’ ಎಂದು ಗ್ರಾಹಕರೊಬ್ಬರು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ವೈಮಾನಿಕ ಸಂಸ್ಥೆಯು ಆ ಗ್ರಾಹಕನ ಟಿಕೆಟ್‌ನ ಸಂಪೂರ್ಣ ಮೊತ್ತವನ್ನು ಮರುಪಾವತಿ ಮಾಡಿದೆ. “ಕೋಲ್ಕತ್ತಾದಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನ 7 ಗಂಟೆ ವಿಳಂಬವಾಗಿ ಹೊರಟಿತ್ತು. ಇದರಿಂದ ನಾನು ಹೋಗಬೇಕಿದ್ದ ಅಂತಾರಾಷ್ಟ್ರೀಯ ವಿಮಾನವೂ ಮಿಸ್‌ ಆಯಿತು.

Advertisement

ಸಿಬ್ಬಂದಿ ಕೂಡ ಅತ್ಯಂತ ಬೇಜವಾಬ್ದಾರಿ ಹಾಗೂ ಅಗೌರವಯುತವಾಗಿ ವರ್ತಿಸಿದರು. ಒಟ್ಟಿನಲ್ಲಿ ನನ್ನ ಪ್ರಯಾಣ ಅತ್ಯಂತ ಕೆಟ್ಟದಾಗಿತ್ತು’ ಎಂದು ದೇಬರ್ಘ ದಾಸ್‌ ಎಂಬವರು ಆರೋಪಿಸಿದ್ದರು. ಇದಾದ ಬೆನ್ನಲ್ಲೇ ಸಂಸ್ಥೆಯು ಅವರ ಟಿಕೆಟ್‌ ಮೊತ್ತವನ್ನು ಮರುಪಾವತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next