Advertisement

ಸಿಗ್ನಲ್ ಸಿಗದೆ ಒಂದು ಗಂಟೆಗೂ ಹೆಚ್ಚು ಕಾಲ ಆಗಸದಲ್ಲೇ ಸುತ್ತಿದ ಅನಂತ್ ಹೆಗಡೆ ಇದ್ದ ವಿಮಾನ

10:40 AM Aug 16, 2020 | keerthan |

ಹುಬ್ಬಳ್ಳಿ: ಸಂಸದ ಅನಂತ್ ಕುಮಾರ್ ಹೆಗಡೆ ಸೇರಿದಂತೆ 49 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ಹವಾಮಾನ ವೈಪರಿತ್ಯದಿಂದಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಎಟಿಸಿ ಸಿಗ್ನಲ್ ಸಿಗದ ಕಾರಣ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಆಗಸದಲ್ಲಿಯೆ ಸುತ್ತಿ ಆತಂಕ ಸೃಷ್ಟಿಸಿತ್ತು.

Advertisement

ಬೆಂಗಳೂರಿನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ವಿಮಾನ ಬೆಳಗ್ಗೆ 8:55 ಗಂಟೆಗೆ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ವಿಮಾನವು ಟವರ್ ಸಿಗ್ನಲ್ ದೊರೆಯದ್ದಕ್ಕೆ ಆಕಾಶದಲ್ಲಿ ಸುತ್ತಾಟ ನಡೆಸಿತು. ಕೊನೆಗೆ 10.25ರ ವೇಳೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯಿತು.

ಸಂಸದ ಅನಂತಕುಮಾರ ಹೆಗಡೆ ಸೇರಿ 49 ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಸದ್ಯ ಎಲ್ಲರೂ ಸುರಕ್ಷಿತವಾಗಿ ವಿಮಾನದಿಂದ ಕೆಳಕ್ಕಿಳಿದಿದ್ದಾರೆ.  ಹುಬ್ಬಳ್ಳಿಯಿಂದ 46 ಜನರು ಇದೇ ವಿಮಾನ ಮೂಲಕ ಇಂದು ಬೆಂಗಳೂರಿಗೆ ತೆರಳಬೇಕಿದೆ.

ಒಂದು ವೇಳೆ ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್ ಸಾಧ್ಯವಾಗದೇ ಹೋದಲ್ಲಿ ಗೋವಾ ಅಥವಾ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡುವ ಬಗ್ಗೆ ಯೋಚನೆ ಮಾಡಲಾಗಿತ್ತು. ಆದರೆ ಸಿಗ್ನಲ್ ದೊರೆತ ಕಾರಣ 10.25ರ ವೇಳೆ ಸುರಕ್ಷಿತ ಲ್ಯಾಂಡಿಂಗ್ ಸಾಧ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next