Advertisement

IndiGo fined: ರನ್‌ವೇಯಲ್ಲೇ ಪ್ರಯಾಣಿಕರಿಂದ ಆಹಾರ ಸೇವನೆ, ಇಂಡಿಗೋಗೆ ಬಿತ್ತು 1.2 ಕೋಟಿ ದಂಡ

09:48 AM Jan 18, 2024 | Team Udayavani |

ಮುಂಬಯಿ: ರನ್‌ವೇ ಬಳಿ ಪ್ರಯಾಣಿಕರು ಕುಳಿತು ಆಹಾರ ಸೇವಿಸಿದ ಘಟನೆಗೆ ಸಂಬಂಧಿಸಿದಂತೆ ಇಂಡಿಗೋ ಮತ್ತು ಮುಂಬೈ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (MIAL) ಗೆ ವಿಮಾನಯಾನ ಸುರಕ್ಷತಾ ನಿಯಂತ್ರಕ (BCAS) ಬುಧವಾರ ಒಟ್ಟು 1.80 ಕೋಟಿ ರೂಪಾಯಿ ದಂಡ ವಿಧಿಸಿದೆ.

Advertisement

ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​​​ಸೆಕ್ಯುರಿಟಿ (ಬಿಸಿಎಎಸ್) ಆದೇಶದಂತೆ ಇಂಡಿಗೋಗೆ 1.20 ಕೋಟಿ ರೂಪಾಯಿ ದಂಡ ವಿಧಿಸಲಾಗಿದ್ದು, ಎಂಐಎಎಲ್‌ಗೆ 60 ಲಕ್ಷ ರೂಪಾಯಿ ವಿಧಿಸಲಾಗಿದೆ. ಭಾನುವಾರ ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ವಿಮಾನ ಮುಂಬೈಗೆ ಬಂದಿಳಿದ ಕೂಡಲೇ ಹಲವು ಪ್ರಯಾಣಿಕರು ಇಂಡಿಗೋ ವಿಮಾನದಿಂದ ಹೊರಬಂದು ಏರ್‌ಸ್ಟ್ರಿಪ್‌ನಲ್ಲಿ ಕುಳಿತಿದ್ದರು. ಕೆಲವು ಪ್ರಯಾಣಿಕರು ಅಲ್ಲಿಯೇ ಆಹಾರ ಸೇವಿಸುತ್ತಿರುವುದು ಕಂಡುಬಂದಿತು ಅಲ್ಲದೆ ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ನಿಯಂತ್ರಕರು ಇಂಡಿಗೋ ಮತ್ತು ಎಂಐಎಎಲ್‌ಗೆ ಶೋಕಾಸ್ ನೋಟಿಸ್‌ ನೀಡಿದ್ದು, ಇದರಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸರಿಯಾದ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದೆ. ಈ ಪ್ರಕರಣದಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಕೂಡ ಮುಂಬೈ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ ಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next