Advertisement

ಸ್ವದೇಶಿ ನಿರ್ಮಿತ ‘ಧನುಷ್‌’ ಸೇನೆಗೆ ಸೇರ್ಪಡೆ

09:15 AM Apr 09, 2019 | Team Udayavani |

ನವದೆಹಲಿ: ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ‘ಮೇಕ್‌ ಇನ್‌ ಇಂಡಿಯಾ’ ಅಡಿಯಲ್ಲಿ ಸ್ವದೇಶಿ ನಿರ್ಮಿತ ಧನುಶ್‌ ಫಿರಂಗಿ ತೋಪುಗಳನ್ನು ಸೋಮವಾರದಂದು ಜಬಲ್ಪುರದಲ್ಲಿ ಭಾರತೀಯ ಸೇನೆಗೆ ಹಸ್ತಾಂತರಿಸಲಾಯಿತು. ಧನುಶ್‌ ಫಿರಂಗಿಗಳನ್ನು ಎಲ್ಲಾ ಪ್ರದೇಶಗಳಲ್ಲೂ ಬಳಸಬಹುದಾಗಿದ್ದು ಮತ್ತು ಸ್ವದೇಶಿ ನಿರ್ಮಿತ ಫಿರಂಗಿಗಳಲ್ಲಿ ದೂರಗಾಮಿ ಸಾಮರ್ಥ್ಯವಿರುವ ಫಿರಂಗಿ ಇದಾಗಿದೆ. ತನ್ನ ಈ ವಿಶೇಷ ಸಾಮರ್ಥ್ಯಕ್ಕಾಗಿ ಇದನ್ನು ‘ದೇಶೀ ಬೋಫೋರ್ಸ್‌’ ಎಂದೇ ಕರೆಯಲಾಗುತ್ತದೆ, ಮತ್ತು ಇದರ ಗುರಿ ಸಾಮರ್ಥ್ಯ ವಿದೇಶಿ ಬೋಫೋರ್ಸ್‌ ಫಿರಂಗಿಗಿಂತ 11 ಕಿಲೋ ಮೀಟರ್‌ ಗಳಷ್ಟು ಹೆಚ್ಚಾಗಿದೆ.

Advertisement

80ರ ದಶಕದಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡ ಬೋಫೋರ್ಸ್‌ ಫಿರಂಗಿ ತಂತ್ರಜ್ಞಾನವನ್ನು ಬಳಸಿಕೊಂಡು ದೇಶೀಯವಾಗಿ ಧನುಶ್‌ ಅನ್ನು ನಿರ್ಮಿಸಲಾಗಿದೆ. ಕೆ-9 ವಜ್ರ ಮತ್ತು ಎಂ-777 ಅಲ್ಟ್ರಾ ಲೈಟ್‌ ಫಿರಂಗಿಗಳ ಬಳಿಕ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುತ್ತಿರುವ ಮೂರನೇ ವಿಧದ ಫಿರಂಗಿ ಎಂಬ ಹೆಗ್ಗಳಿಕೆಗೆ ಧನುಶ್‌ ಪಾತ್ರವಾಗುತ್ತಿದೆ. ಆಂತರಿಕ ನ್ಯಾವಿಗೇಷನ್‌ ಆಧಾರಿತ ದೂರದರ್ಶಿ ವ್ಯವಸ್ಥೆ, ಸ್ವಯಂಚಾಲಿತ ಸ್ವ-ಸ್ಥಿತಿ ಮರಳುವಿಕೆ ವ್ಯವಸ್ಥೆ, ಸ್ವಯಂ ಅಳವಡಿತ ತೋಪು ಲೆಕ್ಕಾಚಾರ ವ್ಯವಸ್ಥೆ ಹಾಗೂ ಆಧುನಿಕ ಸುಧಾರಿತ ತಂತ್ರಜ್ಞಾನದ ಹಗಲು ರಾತ್ರಿ ನೇರ ಫೈರಿಂಗ್‌ ವ್ಯವಸ್ಥೆ ಸೇರಿದಂತೆ ಹಲವಾರು ಸುಧಾರಿತ ತಂತ್ರಜ್ಞಾನಗಳನ್ನು ‘ಧನುಷ್‌’ ಹೊಂದಿದೆ.

ಡಿ.ಆರ್‌.ಡಿ.ಒ., ಡಿ.ಜಿ.ಕ್ಯು.ಎ., ಭಾರತ್‌ ಎಲೆಕ್ಟ್ರಾನಿಕ್ಸ್‌ ನಂತಹ ಡಿ.ಪಿ.ಎಸ್‌.ಯು., ಸೈಲ್‌ ನಂತಹ ಪಿ.ಎಸ್‌.ಯು.ಗಳು ಮತ್ತು ಹಲವಾರು ಖಾಸಗಿ ಉದ್ಯಮಗಳ ಸಹಯೋಗದೊಂದಿಗೆ ‘ಧನುಷ್‌’ ದೇಶೀಯವಾಗಿ ರೂಪುಗೊಂಡಿರುವುದು ವಿಶೇಷ. ಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಳ್ಳುವುದಕ್ಕೂ ಮುಂಚಿತವಾಗಿ ಧನುಷ್‌ ಫಿರಂಗಿಯನ್ನು ಹಲವಾರು ವ್ಯತಿರಿಕ್ತ ಸನ್ನಿವೇಶಗಳಲ್ಲಿ ತೀವ್ರ ಪರೀಕ್ಷೆಗೆ ಒಳಪಡಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next