Advertisement

ಇಂಡಿ ಆಸ್ಪತ್ರೆಗೆ ಬೇಕಿದೆ ಚಿಕಿತ್ಸೆ

11:15 AM Aug 25, 2018 | |

ಇಂಡಿ: ನೂತನ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಗೆ ಆರೋಗ್ಯ ಖಾತೆ ನೀಡಿದರೂ ಆರೋಗ್ಯ ಇಲಾಖೆಯಲ್ಲಿನ ವೈದ್ಯರು, ಸಿಬ್ಬಂದಿ ಕೊರತೆ ಮತ್ತು ವೈದ್ಯರ ನಿರ್ಲಕ್ಷ್ಯ ಮಾತ್ರ ಇದುವರೆಗೂ ಬಗೆಹರಿದಿಲ್ಲ. ಇದಕ್ಕೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯೇ ಉತ್ತಮ ನಿದರ್ಶನ. ವೈದ್ಯರು, ಸಿಬ್ಬಂದಿ ಕೊರತೆಯಿಂದ ರಾತ್ರಿ ಸಮಯದಲ್ಲಿ ರೋಗಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ.

Advertisement

ತೀವ್ರ ನಿಗಾ ಘಟಕ ಇಲ್ಲ. ಇದರಿಂದ ಗರ್ಭಿಣಿಯರು ಹೆರಿಗೆಗಾಗಿ ವಿಜಯಪುರ, ಸೊಲ್ಲಾಪುರಕ್ಕೆ ಹೋಗುವ ಅನಿವಾರ್ಯತೆ ಇದೆ. ಆಕಸ್ಮಾರ ಸರ್ಕಾರಿ ಆಸ್ಪತ್ರೆಯಲ್ಲೇ ಹೆರಿಗೆಯಾದರೆ ಬಾಣಂತಿಯರಿಗೆ ಬಿಸಿ ನೀರಿನ ಸೌಲಭ್ಯವಿಲ್ಲ. ಇತ್ತೀಚೆಗೆ ಶಾಸಕ ಯಶವಂತರಾಯಗೌಡ ಪಾಟೀಲರ ಶ್ರಮದಿಂದ ರೋಗಿಗಳು, ಸಾರ್ವಜನಿಕರ ಅನುಕೂಲಕ್ಕಾಗಿ ಆಸ್ಪತ್ರೆ ಆವರಣದಲ್ಲಿ ನಾಗರಿಕ ಸೌಲಭ್ಯಗಳ ಸಂಕೀರ್ಣ ನಿಮಾಣವಾಗಿದೆ. ಆದರೆ, ದುರದೃಷ್ಟವಶಾತ್‌ ಅದು ಇದುವರೆಗೆ ಕಾರ್ಯ ಆರಂಭಿಸಿಲ್ಲ.

100 ಹಾಸಿಗೆ ಆಸ್ಪತ್ರೆ ಇದಾಗಿದ್ದು, ಸುತ್ತಲಿನ ಸುಮಾರು 20 ವರ್ಷಗಳೇ ಕಳೆದರೂ ಆಸ್ಪತ್ರೆಯ ಒಳ ಹಾಗೂ ಹೊರ ಗೋಡೆಗಳಿಗೆ ಸುಣ್ಣ ಬಣ್ಣ ಬಳಿದಿಲ್ಲ. ಹಳೆಯ ವಿದ್ಯುತ್‌ ವ್ಯವಸ್ಥೆ ಇದ್ದು, ಸರಿಯಾದ ಸಂಪರ್ಕವಿಲ್ಲ.

ಸಿಬ್ಬಂದಿಗಿಲ್ಲ ವಸತಿಗೃಹ: ಈ ಹಿಂದೆ ಹಳೆಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 14 ಹಳೆಯ ವಸತಿ ಗೃಹಗಳಿದ್ದು ಅವುಗಳಿಗೆ ದುರಸ್ತಿಯೇ ಇಲ್ಲ. ಮೇಲಿನ ಹಂಚುಗಳು ಬೀಳುತ್ತಿವೆ. ಅಂತಹ ಮನೆಗಳಲ್ಲಿಯೇ ಸಿಬ್ಬಂದಿ ವಾಸವಿದ್ದಾರೆ. ಹೆರಿಗೆಗೆ ಸಂಬಂಧಿಸಿದಂತೆ ಮೂವರು ನರ್ಸ್‌ಗಳು ಹೆರಿಗೆ ಮಾಡಿಕೊಳ್ಳುತ್ತಾರೆ.ಆಸ್ಪತ್ರೆಗೆ ಅವಶ್ಯವಿರುವಷ್ಟು ನರ್ಸ್‌ಗಳಿದ್ದರೂ ರಾತ್ರಿ ಸಮಯದಲ್ಲಿ ಬಂದ ರೋಗಿಗಳು, ಗರ್ಭಿಯಣಿಯರಿಂದ ದುಡ್ಡು ಪಡೆಯುತ್ತಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.

ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಆವರಣವನ್ನು ಸಾರ್ವಜನಿಕರು ಶೌಚಾಲಯವನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಈಗ ಅರಣ್ಯ ಇಲಾಖೆ ವತಿಯಿಂದ ಆಸ್ಪತ್ರೆ ಮುಂಭಾಗದಲ್ಲಿ ಸಸಿ ನೆಟ್ಟಿದ್ದಾರೆ. ಆಸ್ಪತ್ರೆ ಹೊರಗಡೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯಿಲ್ಲ, ಸರಿಯಾದ ಔಷಧ ವ್ಯವಸ್ಥೆಯಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಾರೆ.

Advertisement

ಆಸ್ಪತ್ರೆಯ ಖಾಲಿ ಹುದ್ದೆಗಳು: ಜನರಲ್‌ ಮೆಡಿಸಿಯನ್‌, ಎಎನ್‌ಟಿ ತಜ್ಞರು, ಸೈಕಿ ಆರ್ಕಿಯಾರ್ಟಿಕ್‌, ಹಿರಿಯ ವೈದ್ಯಾಧಿಕಾರಿ, ಹಾಗೂ ಇಬ್ಬರು ಕಿರಿಯ ಔಷಧ ಸಂಯೋಜಕರು, ಹೆಚ್ಚುವರಿಯಾಗಿ ಇಬ್ಬರು ಲ್ಯಾಬ್‌ ಟೆಕ್ನಿಷಿಯನ್‌ ತುರ್ತು ಅಗತ್ಯವಿದೆ

ಆಸ್ಪತ್ರೆಗೆ ಕೆಲ ಸಿಬ್ಬಂದಿಗಳ ಕೊರತೆ ಇದೆ. ಬಾಣಂತಿಯರಿಗೆ ಬಿಸಿ ನೀರಿನ ಸಲುವಾಗಿ ಸೋಲಾರ್‌ ವ್ಯವಸ್ಥೆ ಇದೆ. ಆದರೆ
ಈಗ ಮಳೆಗಾಲವಾದ್ದರಿಂದ ಸೋಲಾರ್‌ನಲ್ಲಿ ನೀರು ಸರಿಯಾಗಿ ಬರುತ್ತಿಲ್ಲ. ಸಿಜೇರಿಯನ್‌ ವೈದ್ಯರು ಕೆಲವೇ ದಿನಗಳಲ್ಲಿ ಆಸ್ಪತ್ರೆಗೆ ಸೇವೆಗೆ ಹಾಜರಾಗಲಿದ್ದಾರೆ. ಶೀಘ್ರ ಎಲ್ಲವೂ ಸರಿಯಾಗಲಿದೆ.  ಡಾ| ಆರ್‌.ಟಿ. ಕೋಳೆಕರ ಮುಖ್ಯವೈದ್ಯಾಧಿಕಾರಿ ವೈದ್ಯರ ಕೊರತೆ ಅಥವಾ ಮತ್ಯಾವ ಕಾರಣದಿಂದಲೋ ರಾತ್ರಿ ಸಮಯದಲ್ಲಿ ಆಸ್ಪತ್ರೆಯಲ್ಲಿ ಯಾರೂ ಇರುವುದಿಲ್ಲ.  ರಾತ್ರಿ ರೋಗಿಗಳು ಆಸ್ಪತ್ರೆಗೆ ಬಂದರೆ ಉಚಿತ ಚಿಕಿತ್ಸೆ; ಖಚಿತ ಸಾವು ಎಂಬಂತಾಗಿದೆ. ಆರೋಗ್ಯ ಖಾತೆ ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು. 
 ಅನಿಲ ಜಮಾದಾರ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ

ಉಮೇಶ ಬಳಬಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next