Advertisement

ಸಗಟು ಹಣದುಬ್ಬರ ಇಳಿಕೆ

09:30 AM Apr 17, 2018 | Team Udayavani |

ಹೊಸದಿಲ್ಲಿ: ಸಗಟು ಬೆಲೆ ಆಧರಿಸಿದ ಹಣದುಬ್ಬರ ಮಾರ್ಚ್‌ನಲ್ಲಿ ಶೇ. 2.74 ಕ್ಕೆ ಇಳಿಕೆಯಾಗಿದೆ. ತರಕಾರಿಗಳು, ಧಾನ್ಯಗಳು ಮತ್ತು ಇತರ ಆಹಾರ ಧಾನ್ಯಗಳಲ್ಲಿ ಇಳಿಕೆಯಾಗಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಸಗಟು ಬೆಲೆ ಸೂಚ್ಯಂಕದ ಆಧಾರದಲ್ಲಿ ಹಣದುಬ್ಬರವು ಫೆಬ್ರವರಿಯಲ್ಲಿ ಶೇ. 2.48 ಹಾಗೂ ಮಾರ್ಚ್‌ನಲ್ಲಿ ಶೇ. 5.11 ಆಗಿತ್ತು. ಕಳೆದ ಎಂಟು ತಿಂಗಳ ನಂತರದಲ್ಲಿ ಇದೇ ಮೊದಲ ಬಾರಿಗೆ ತರಕಾರಿ ಮತ್ತು ಧಾನ್ಯಗಳ ಬೆಲೆ ಇಳಿಕೆ ಕಂಡಿದೆ. ಆಹಾರ ಸಾಮಗ್ರಿಗಳ ಬೆಲೆಯು ಮಾರ್ಚ್‌ನಲ್ಲಿ ಶೇ. 0.29ರಷ್ಟು ಇಳಿಕೆಯಾಗಿದೆ. ಇದೇ ವೇಳೆ, ಡಾಲರ್‌ ಎದುರು ರೂಪಾಯಿ ಮೌಲ್ಯ ಕಳೆದ 5 ತಿಂಗಳಲ್ಲೇ ಅತ್ಯಧಿಕ ಕುಸಿತ ದಾಖಲಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next