Advertisement
ಮೈಸೂರಿನಲ್ಲಿ ಭಾನುವಾರ ಕರಾಮುವಿ ಘಟಿಕೋತ್ಸವ ಭವನದಲ್ಲಿ ನಡೆದ ‘ಪ್ರಾಜೆಕ್ಟ್ ಟೈಗರ್’ 50 ವರ್ಷಗಳನ್ನು ಪೂರೈಸಿದ ಸಮಾರಂಭದಲ್ಲಿ 2022 ರಲ್ಲಿ ಭಾರತದ ಹುಲಿಗಳ ಸಂಖ್ಯೆ 3,167 ಎಂದು ಪ್ರಧಾನಿ ಮೋದಿ ಘೋಷಿಸಿದರು.
Related Articles
Advertisement
“ನಾವೆಲ್ಲರೂ ಬಹಳ ಮುಖ್ಯವಾದ ಮೈಲಿಗಲ್ಲು, 50 ವರ್ಷಗಳ ಪ್ರಾಜೆಕ್ಟ್ ಟೈಗರ್ ಅನ್ನು ನೋಡುತ್ತಿದ್ದೇವೆ. ಭಾರತವು ಹುಲಿಗಳನ್ನು ಉಳಿಸಿದೆ ಮಾತ್ರವಲ್ಲದೆ ಅದು ಪ್ರವರ್ಧಮಾನಕ್ಕೆ ಬರಲು ಅತ್ಯುತ್ತಮ ಪರಿಸರ ವ್ಯವಸ್ಥೆಯನ್ನು ನೀಡಿದೆ ಎಂದರು.
“ನಾವು ಪರಿಸರ ಮತ್ತು ಆರ್ಥಿಕತೆಯ ನಡುವಿನ ಸಂಘರ್ಷವನ್ನು ನಂಬುವುದಿಲ್ಲ, ಆದರೆ ಪ್ರಾಣಿಗಳ ಸಹ-ಅಸ್ತಿತ್ವಕ್ಕೆ ಪ್ರಾಮುಖ್ಯತೆ ನೀಡುತ್ತೇವೆ” ಎಂದರು.
ಪ್ರಧಾನಿ ಬಂಡೀಪುರದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಮೈಸೂರಿನ ಓವಲ್ ಮೈದಾನದ ಹೆಲಿಪ್ಯಾಡ್ ಗೆ ಆಗಮಿಸಿ, ಬಳಿಕ ರಸ್ತೆ ಮೂಲಕ ಕೆಎಸ್ಓಯು ಘಟಿಕೋತ್ಸವ ಭವನಕ್ಕೆ ತೆರಳಿದರು.
ಸಮಾರಂಭದಲ್ಲಿ ಕೇಂದ್ರ ಅರಣ್ಯ ಸಚಿವರಾದ ಭೂಪೇಂದ್ರ ಯಾದವ್, ಕೇಂದ್ರದ ಪರಿಸರ ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವರಾದ ಅಶ್ವಿನಿ ಕುಮಾರ್ ಚೌಬೆ ಪ್ರಧಾನ ಮಂತ್ರಿಯವರನ್ನು ಸ್ವಾಗತಿಸಿದರು.