Advertisement

ಅಮೇರಿಕನ್ ಓಪನ್: ಎರಡನೇ ಸುತ್ತಿನಲ್ಲಿ ಅಂತ್ಯವಾದ ಭಾರತದ ಸುಮಿತ್ ನಾಗಲ್ ಓಟ

11:30 AM Sep 04, 2020 | keerthan |

ನ್ಯೂಯಾರ್ಕ್: ಭಾರತದ ಯುವ ಪ್ರತಿಭಾನ್ವಿತ ಟೆನ್ನಿಸ್ ಆಟಗಾರ ಸುಮಿತ್ ನಾಗಲ್ ಅವರ ಯುಎಸ್ ಓಪನ್ ಓಟ ಎರಡನೇ ಸುತ್ತಿಗೆ ಅಂತ್ಯವಾಗಿದೆ. ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ ಡೊಮಿನಿಕ್ ತೀಮ್ ವಿರುದ್ಧ ನಡೆದ ಪಂದ್ಯದಲ್ಲಿ ನಾಗಲ್ ಸೋಲನುಭವಿಸಿದರು.

Advertisement

ಮೊದಲ ಪಂದ್ಯ ಗೆದ್ದು ಭರವಸೆ ಮೂಡಿಸಿದ್ದ ಸುಮಿತ್ ನಾಗಲ್ ಎರಡನೇ ಪಂದ್ಯದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದರು. ಆದರೆ ಡೊಮಿನಿಕ್ ಥೀಮ್ ವಿರುದ್ಧ ನಾಗಲ್ 3-6, 3-6, 2-6 ಅಂತರದಿಂದ ಸೋಲನುಭವಿಸಿದರು.

ಕಳೆದ ಮಂಗಳವಾರ ರಾತ್ರಿ ನಡೆದ ಮೊದಲ ಪಂದ್ಯದಲ್ಲಿ ಸುಮಿತ್ ನಾಗಲ್ ಅಮೇರಿಕಾದ ಬ್ರಾಡ್ಲಿ ಕ್ಲಾನ್ ವಿರುದ್ಧ 6-1, 6-3, 3-6, 6-1 ಅಂತರದ ಜಯ ಸಾಧಿಸಿದ್ದರು. ಈ ಮೂಲಕ ಏಳು ವರ್ಷಗಳ ಬಳಿಕ ಗ್ರ್ಯಾ್ನ್ ಸ್ಲ್ಯಾಮ್ ಸಿಂಗಲ್ಸ್ ಪಂದ್ಯವೊಂದನ್ನು ಗೆದ್ದ ಭಾರತೀಯ ಎಂಬ ಹಿರಿಮೆಗೆ ಪಾತ್ರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next