Advertisement

ರಾಧಾನಗರ ಬೀಚ್‌ ವಿಶ್ವದಲ್ಲಿ ವಿಶ್ವದ ನಂ.8, ಏಶ್ಯದ ನಂ.1:TripAdvisor

07:50 PM Feb 27, 2017 | Team Udayavani |

ಮುಂಬಯಿ : ಅಂಡಮಾನ್‌ನ ಹ್ಯಾವೆಲಾಕ್‌ ದ್ವೀಪದ ರಾಧಾನಗರ ಬೀಚ್‌, ವಿಶ್ವದ ಅತ್ಯುತ್ತಮ ಬೀಚ್‌ಗಳ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದುಕೊಂಡಿದೆ.

Advertisement

TripAdvisor ನ “ವಿಶ್ವ ಪ್ರವಾಸಿಕರ ಆಯ್ಕೆ ಪ್ರಶಸ್ತಿಗೆ ಪಾತ್ರವಾಗಿರುವ ಅಗ್ರ ಹತ್ತು ಬೀಚ್‌ಗಳಲ್ಲಿ ರಾಧಾನಗರ ಬೀಚ್‌ಗೆ ಎಂಟನೇ ಸ್ಥಾನ ಲಭಿಸಿದೆ ಮತ್ತು ಏಶ್ಯದ ಬೀಚ್‌ಗಳ ಪೈಕಿ ಪ್ರಥಮ ಸ್ಥಾನವನ್ನು ಅದು ಪಡೆದಿದೆ.

TripAdvisor ವಿಶ್ವದ 343 ಬೀಚ್‌ಗಳನ್ನು ಪುರಸ್ಕರಿಸಿದೆ. ಇವುಗಳಲ್ಲಿ ಆಫ್ರಿಕ, ಏಶ್ಯ, ಆಸ್ಟ್ರೇಲಿಯ, ಕೆರಿಬ್ಬಿಯನ್‌, ಸೆಂಟ್ರಲ್‌ ಅಮೆರಿಕ, ಯುರೋಪ್‌, ದಕ್ಷಿಣ ಅಮೆರಿಕ, ದಿ ಸೌತ್‌ ಪೆಸಿಫಿಕ್‌, ಬ್ರಿಟನ್‌ ಮತ್ತು ಅಮೆರಿಕದ 25 ಅಗ್ರ ಬೀಚುಗಳು ಸೇರಿವೆ. 

12 ತಿಂಗಳ ಅವಧಿಯಲ್ಲಿ  ಈ ಬೀಚುಗಳನ್ನು ಸಂದರ್ಶಿಸುವ ಪ್ರವಾಸಿಗರ ಗುಣಾತ್ಮಕ ಮತ್ತು ಪ್ರಮಾಣಾತ್ಮಕ ಅವಲೋಕನಗಳು ಹಾಗೂ ಕ್ರಮಾಂಕಗಳನ್ನು ಆಧರಿಸಿ ಅವುಗಳ ಶ್ರೇಷ್ಠತೆಯನ್ನು ನಿರ್ಧರಿಸಲಾಗಿದೆ ಎಂದು TripAdvisor ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next