Advertisement

ಮಕ್ಕಳ ಕಳ್ಳಸಾಗಾಟ ಚರ್ಚಿಸದ ರಾಜ್ಯಸಭೆ: ಕೈಲಾಶ್‌ ಸತ್ಯಾರ್ಥಿ ಖಂಡನೆ

11:38 AM Jan 11, 2019 | Team Udayavani |

ಹೊಸದಿಲ್ಲಿ : ‘ಪಶುಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ದೇಶದಲ್ಲಿ  ಮಕ್ಕಳ ಮಾರಾಟ, ಖರೀದಿ ಅವ್ಯಾಹತವಾಗಿ, ರಾಜಾರೋಷದಿಂದ ನಡೆಯುತ್ತಿದ್ದರೂ ರಾಜಕೀಯ ಪಕ್ಷಗಳಿಗೆ ಮಕ್ಕಳ ಬಗ್ಗೆ ಕಿಂಚಿತ್‌ ಕಾಳಜಿಯೂ ಇಲ್ಲ; ಅಂತೆಯೇ ಈ ಬಾರಿಯೂ ಮಕ್ಕಳ ಕಳ್ಳಸಾಗಾಟದ ಬಗ್ಗೆ ರಾಜ್ಯಸಭೆ ಯಾವುದೇ ಚರ್ಚೆ ನಡೆಸದಿರುವ ಮೂಲಕ ದೇಶದ ಲಕ್ಷಾಂತರ ಮಕ್ಕಳನ್ನು ವಂಚಿಸಿದೆ’ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ಹೇಳಿದ್ದಾರೆ.

Advertisement

‘ಈ ದೇಶದಲ್ಲಿ ಮಕ್ಕಳು ಇಂದಿಗೂ ರಾಜಕೀಯ ಆದ್ಯತೆ ಎನಿಸಿಲ್ಲ; ಅದೀಗ ಮತ್ತೆ ಸಾಬೀತಾಗಿರುವುದು ಅಪಾರ ನೋವಿನ ವಿಷಯ. ಆದುದರಿಂದ ಸದನದ ಕನಿಷ್ಠ ಒಂದು ದಿನವನ್ನು ಸಂಪೂರ್ಣವಾಗಿ ಮಕ್ಕಳ ಸಮಸ್ಯೆ, ಸುರಕ್ಷೆ, ಶಿಕ್ಷಣ ಮತ್ತು ಕಲ್ಯಾಣದ ಬಗ್ಗೆ ಚರ್ಚಿಸಲು ನಿಗದಿಸಬೇಕಾಗಿದೆ ಮತ್ತು ಎಲ್ಲ ರಾಜಕೀಯ ಪಕ್ಷಗಳು ಆ ನಿಟ್ಟಿನಲ್ಲಿ  ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ’ ಎಂದು ಸತ್ಯಾರ್ಥಿ ಹೇಳಿದರು. 

‘ಸುರಕ್ಷಿತ ಬಾಲ್ಯ, ಸುರಕ್ಷಿತ ಭಾರತ’ ಎಂಬ ಕುರಿತಾಗಿ 25ನೇ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಸಂಸ್ಮರಣ ಉಪನ್ಯಾಸದ ಸಂದರ್ಭದಲ್ಲಿ  ಈ ಹೇಳಿಕೆ ನೀಡಿದ ಸತ್ಯಾರ್ಥಿ ಅವರು, ‘ರಾಜ್ಯಸಭೆ ಈ ಬಾರಿಯೂ ಮಕ್ಕಳ ಕಳ್ಳಸಾಗಾಟ ನಿಗ್ರಹ ಮಸೂದೆಯನ್ನು ಚರ್ಚಿಸದಿರುವುದು  ದುರದೃಷ್ಟಕರ’ ಎಂದು ಹೇಳಿದರು. 

ಮಕ್ಕಳ ಕಳ್ಳಸಾಗಾಟ ತಡೆ ಮತ್ತು ಪುನರ್‌ ವಸತಿ 2018ರ ಮಸೂದೆಯನ್ನು ಲೋಕಸಭೆ ಕಳೆದ ವರ್ಷ ಜುಲೈನಲ್ಲಿ ನಡೆದಿದ್ದ ಮಳೆಗಾಲದ ಅಧಿವೇಶನದಲ್ಲಿ ಪಾಸು ಮಾಡಿತ್ತು. ಆದರೆ ಅದನ್ನು ಮೇಲ್ಮನೆಯಲ್ಲಿ ಪಾಸು ಮಾಡಬೇಕಿರುವ ರಾಜ್ಯಸಭೆಯು ಈ ಬಾರಿ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸುವುದೆಂದು ಪಟ್ಟಿ ಮಾಡಲಾಗಿತ್ತು. ಆದರೆ ರಾಜ್ಯಸಭೆ ಆ ಬಗ್ಗೆ ಯಾವುದೇ ಚರ್ಚೆ ನಡೆಸಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next