Advertisement
ಭೂಮಿ ಬಳಗ ಹಾಗೂ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರಗೌಡ ಅವರ ಭೂಮಿ ಮತ್ತು ಬೀಜ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಭೂಮಿ ಪ್ರಕೃತಿ-ಬೀಜ ಸಂಸ್ಕೃತಿ ಇದ್ದಂತೆ. ನಾವು ಬಿತ್ತಿದಂತೆ ಬೀಜ ಬೆಳೆಯುತ್ತದೆ. ನಿಸರ್ಗಕ್ಕೆ ಪೂರಕವಾಗುವ ರೀತಿಯಲ್ಲಿ ಕಲ್ಪಿಸಿಕೊಡುವ ಬಿತ್ತನೆಯ ಬೀಜವೇ ಸಂಸ್ಕೃತಿ ಎಂದರು.
Related Articles
Advertisement
ಅವಕಾಶಗಳು ಹೆಚ್ಚಿದೆ: ಕೃತಿಯ ಲೇಖಕ ಡಾ.ಹಿ.ಶಿ.ರಾಮಚಂದ್ರಗೌಡ ಮಾತನಾಡಿ, ಇಂದಿನ ಜಾಗತೀಕರಣ ಯುಗದಲ್ಲಿ ಸೌಲಭ್ಯಗಳು ಹಾಗೂ ಅವಕಾಶಗಳು ಹೆಚ್ಚಿದೆ. ಬಡತನ ಕಡಿಮೆಯಾಗುತ್ತಿದೆ. ಸಿಗುವ ಅನುಕೂಲಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ನೈಪುಣ್ಯತೆಯ ಜ್ಞಾನಕ್ಕೆ ಪ್ರಾಮುಖ್ಯತೆ: ಭೂಮಿ, ಸ್ತ್ರೀ ಮತ್ತು ನಮ್ಮತನವನ್ನು ಬಿಟ್ಟುಕೊಡಬೇಡಿ. ವಿದ್ಯಾರ್ಥಿಗಳು ಪಠ್ಯವನ್ನಷ್ಟೇ ಓದದೆ, ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಕೌಶಲ್ಯ ಮತ್ತು ನೈಪುಣ್ಯತೆಯ ಜ್ಞಾನಕ್ಕೆ ಪ್ರಾಮುಖ್ಯತೆ ನೀಡಿ, ಇದು ನಿಮ್ಮ ಮುಂದಿನ ಬೆಳವಣಿಗೆಗೆ ನಾಂದಿಯಾಗುತ್ತದೆ ಎಂದರು.
ಚಿಂತಕಿ ಡಾ.ಧರಣಿದೇವಿ ಮಾಲಗತ್ತಿ ಮಾತನಾಡಿ, ನಮ್ಮ ಇಂದಿನ ಯುವ ಪೀಳಿಗೆಗೆ ಐಕ್ಯತೆ ಬೇಕು. ಏಕಾಧಿಪತ್ಯ ಬೇಡ. ಬಹುತ್ವ ಬೇಕು. ಬೇದ ಬೇಡ, ಜಾತಿವಾದ ಸಲ್ಲದು ಎಂದರು. ವಾದಿ, ವಿಚಾರವಾದಿ, ಸಂಪ್ರದಾಯವಾದಿ, ಸ್ತ್ರೀವಾದಿ ಯಾರಿಗೂ ಇಷ್ಟವಾಗುವುದಿಲ್ಲ.
ಈ ನಿಟ್ಟಿನಲ್ಲಿ ಈ ಕೃತಿಯ ಲೇಖನಗಳು ಎಲ್ಲರ ಮನಸ್ಸನ್ನೂ ಗೆಲ್ಲುತ್ತವೆ ಹಾಗೂ ಸಂಶೋಧನಾ ಪ್ರಬಂಧಕ್ಕೆ ಅನುಕೂಲವಾಗಿದೆ ಎಂದು ಹೇಳಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಬಿ.ಆರ್.ಜಯಕುಮಾರಿ ಮಾತನಾಡಿದರು. ಮಹಾಜನ ಕಾಲೇಜಿನ ಸಿಇಒ ಡಾ.ಎಸ್.ಆರ್.ರಮೇಶ್, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ ಉಪಸ್ಥಿತರಿದ್ದರು.