Advertisement
ಆದರೆ ಕಾಲ ಬದಲಾಗಿದೆ. ಸ್ಪಿನ್ ತವರಾದ ಭಾರತದಲ್ಲಿ ಈಗ ವೇಗಿಗಳೇ ಬಹುಸಂಖ್ಯಾತ ರಾಗಿದ್ದಾರೆ. ಇದಕ್ಕೆ ಕಳೆದ ಆಸ್ಟ್ರೇಲಿಯ ಪ್ರವಾಸದಲ್ಲಿ ಅತ್ಯುತ್ತಮ ನಿದರ್ಶನ ಸಿಕ್ಕಿತು.
Related Articles
Advertisement
ಏಶ್ಯದ ಆಚೆ ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾದರೆ ತಂಡದ ವೇಗದ ಬೌಲಿಂಗ್ ವಿಭಾಗ ಸಮರ್ಥವಾಗಿ ರಬೇಕು ಹಾಗೂ ಇದರಲ್ಲಿ ವೆರೈಟಿ ಇರಬೇಕು ಎಂಬುದೊಂದು ಸಾಮಾನ್ಯ ಅನಿಸಿಕೆ. ಎಲ್ಲಕ್ಕಿಂತ ಮಿಗಿಲಾದದ್ದು, ಎದುರಾಳಿಯ 20 ವಿಕೆಟ್‌ಗಳನ್ನು ಉರುಳಿಸುವ ಸಾಮರ್ಥ್ಯ. ಪ್ರಧಾನ ವೇಗಿಗಳ ಗೈರಲ್ಲಿ ಭಾರತದ ಯುವ ಬೌಲರ್ ಕಾಂಗರೂ ನಾಡಿನಲ್ಲಿ ಇದನ್ನು ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸಿದ್ದು ಈಗ ಇತಿಹಾಸ.
ಹೀಗೆ ಟೀಮ್ ಇಂಡಿಯಾದ ವೇಗಿಗಳ ಸಂಖ್ಯೆ ಯಲ್ಲಿ ದಿಢೀರ್ ಏರಿಕೆಯಾಗಿದೆ. ಒಬ್ಬಿಬ್ಬರಲ್ಲ, ಒಟ್ಟು 9 ಮಂದಿ ಬೌಲರ್ ಏಕಕಾಲದಲ್ಲಿ ತಂಡವನ್ನು ಪ್ರತಿನಿಧಿಸಬಹುದಾದಷ್ಟು ಹೆಚ್ಚಳ ಇದಾಗಿದೆ. ಭಾರ ತದ ಪೇಸ್ ಬ್ಯಾಟರಿ ಈಗ ಫುಲ್ ಚಾರ್ಜ್ ಆಗಿದೆ!
ವೇಗಿಗಳೇಕೆ ಹೆಚ್ಚಿದರು? :
ಭಾರತದಲ್ಲಿ ವೇಗಿಗಳ ಸಂಖ್ಯೆ ದಿಢೀರ್ ಹೆಚ್ಚಲು ಮುಖ್ಯ ಕಾರಣ ಕಿರಿಯರ ವಿಶ್ವ ಮಟ್ಟದ ಕೂಟಗಳು. ಮುಖ್ಯವಾಗಿ ಅಂಡರ್-19 ಸರಣಿ, ವಿಶ್ವಕಪ್ ಇತ್ಯಾದಿ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯ, ವಿಂಡೀಸ್ ಮೊದಲಾದ ಫಾಸ್ಟ್ ಟ್ರ್ಯಾಕ್ ನಾಡಿನಲ್ಲಿ ಆಡಲಾದ ಸರಣಿಗಳ ಪಾಲೂ ದೊಡ್ಡದಿದೆ. ಸಿಕ್ಕಿದ ಅವಕಾಶವನ್ನು ಎಲ್ಲರೂ ಸಮರ್ಥ ರೀತಿಯಲ್ಲಿ ಬಳಸಿಕೊಂಡರು. ತಮ್ಮ ಸಾಮರ್ಥ್ಯವನ್ನು ಸೀನಿಯರ್ ತಂಡದೊಂದಿಗೂ ಸಾಬೀತು ಪಡಿಸಿದರು. ಈ ಟ್ರೆಂಡ್ ಮುಂದುವರಿಯಬೇಕಿದೆ.
ಏಶ್ಯದ ಆಚೆ ಬೇಕಿತ್ತು ಗೆಲುವು :
“ಇದೊಂದು ಆರೋಗ್ಯಕರ ಬೆಳವಣಿಗೆ. ಇದಕ್ಕಾಗಿ ನಾವು ಕಳೆದ ಮೂರು ವರ್ಷಗಳಿಂದ ಯೋಜನೆ ರೂಪಿಸುತ್ತಲೇ ಇದ್ದೆವು. ಏಶ್ಯದ ಆಚೆ ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದು ನಮಗೆ ಮುಖ್ಯವಾಗಿತ್ತು. ಇದೀಗ ಸಾಕಾರಗೊಂಡಿದೆ. ನಮ್ಮ ಮೀಸಲು ಸಾಮರ್ಥ್ಯ ದೊಡ್ಡ ಮಟ್ಟದಲ್ಲಿ ವಿಸ್ತಾರಗೊಂಡಿದೆ. ಆವರ್ತನ ಪದ್ಧತಿಗಂತೂ ಇದು ಬಹಳ ಪ್ರಯೋಜನಕಾರಿ’ ಎಂಬುದು ಬೌಲಿಂಗ್ ಕೋಚ್ ಬಿ. ಅರುಣ್ ಹೇಳಿಕೆ.