ಪುಣೆ: ಭಾರತದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ರಘುನಾಥ್ ಚಂದೋರ್ಕರ್ ಶನಿವಾರ ಬದುಕಿನ “ಶತಕ’ವನ್ನು ಪೂರ್ತಿಗೊಳಿಸಿದರು. ನ. 21ಕ್ಕೆ ಅವರಿಗೆ ಭರ್ತಿ 100 ವರ್ಷ ತುಂಬಿತು.
ಚಂದೋರ್ಕರ್ ಬದುಕಿನ 100 ವಸಂತಗಳನ್ನು ಪೂರೈಸಿದ ಭಾರತದ ಕೇವಲ 3ನೇ ಕ್ರಿಕೆಟಿಗ. ಉಳಿದಿಬ್ಬರೆಂದರೆ ಪ್ರೊ| ಡಿ.ಬಿ. ದೇವಧರ್ (1892-1993) ಮತ್ತು ವಸಂತ್ ರಾಯ್‌ಜಿ (1920-2020).
1920ರ ನವೆಂಬರ್ 21ರಂದು ಮಹಾರಾಷ್ಟ್ರದ ಕರ್ಜತ್‌ನಲ್ಲಿ ಜನಿಸಿದ ಚಂದೋರ್ಕರ್, 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇವರು ಮೊದಲು ಪ್ರತಿನಿಧಿಸಿದ ತಂಡ ಮಹಾರಾಷ್ಟ್ರ (1943-1947). ಬಳಿಕ ಅಂದಿನ ಬಾಂಬೆ ತಂಡದ ಪರ ಆಡಿದರು (1950-51).
ಇದನ್ನೂ ಓದಿ:ಜನವರಿಯಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯನ್ ಓಪನ್ ಮುಂದೂಡುವ ಸಾಧ್ಯತೆ!
ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಆಗಿದ್ದ ಚಂದೋರ್ಕರ್ 7 ಪಂದ್ಯಗಳಿಂದ 155 ರನ್ ಗಳಿಸಿದ್ದಾರೆ. ಜತೆಗೆ 3 ಕ್ಯಾಚ್ ಮತ್ತು 2 ಸ್ಟಂಪಿಂಗ್ ಕೂಡ ಮಾಡಿದ್ದಾರೆ.
100 ವರ್ಷಗಳನ್ನು ಪೂರ್ತಿ ಗೊಳಿಸಿದ ರಘುನಾಥ್ ಚಂದೋರ್ಕರ್ ಅವರಿಗೆ ಬಿಸಿಸಿಐ ಶುಭಾಶಯ ಸಲ್ಲಿಸಿದೆ.