ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಯಮುನೆಯ ಪ್ರವಾಹಕ್ಕೆ ತತ್ತರಿಸಿದೆ. ಸಾವಿರಾರು ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ವೇಳೆ ಎನ್ ಡಿಆರ್ ಎಫ್ ಸೇರಿ ಹಲವಾರು ರಕ್ಷಣಾ ತಂಡಗಳು ಪ್ರವಾಹಕ್ಕೆ ಸಿಲುಕಿದವರ ರಕ್ಷಣೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಜಾನುವಾರುಗಳ ರಕ್ಷಣೆಯೂ ಮಾಡಲಾಗುತ್ತಿದೆ.
ಗಾಜಿಯಾಬಾದ್ ಎನ್ ಡಿಆರ್ ಎಫ್ ತಂಡವು ಸುಮಾರು ಒಂದು ಕೋಟಿ ರೂ ಬೆಲೆಬಾಳುವ ಗೂಳಿಯನ್ನು ರಕ್ಷಿಸಿದೆ.
ಇದನ್ನೂ ಓದಿ:Delhi ಪ್ರವಾಹ ಬಿಜೆಪಿ ನಡೆಸಿದ ಪಿತೂರಿಯಿಂದ ಸಂಭವಿಸಿದೆ: ಆಪ್ ಆರೋಪ
ತಂಡವು ಜಾನುವಾರು ಮತ್ತು ಮೇಕೆಗಳನ್ನು ರಕ್ಷಿಸುವ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದು, ಗಾಜಿಯಾಬಾದ್‌ನಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 8 ನೇ ಬೆಟಾಲಿಯನ್ ಟ್ವೀಟ್ ಮಾಡಿ “ಗಾಜಿಯಾಬಾದ್ ತಂಡವು ಭಾರತದ ನಂ.1 ಗೂಳಿ ‘ಪ್ರೀತಮ್’ ಸೇರಿದಂತೆ 3 ಜಾನುವಾರುಗಳನ್ನು ನೋಯ್ಡಾದಲ್ಲಿ ರಕ್ಷಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜೀವ ಉಳಿಸಲು ಎನ್ ಡಿಆರ್ ಎಫ್ ತಂಡಗಳು ಶ್ರಮಿಸುತ್ತಿವೆ” ಎಂದು ಬರೆದಿದೆ.
ಯಮುನಾ ನದಿಯ ನೀರು ನೋಯ್ಡಾದಲ್ಲಿ ನದಿಯ ದಡದಲ್ಲಿ ಸುಮಾರು 550 ಹೆಕ್ಟೇರ್ ಭೂಮಿಯನ್ನು ಆವರಿಸಿದೆ. 5,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ ಮತ್ತು ಎಂಟು ಗ್ರಾಮಗಳ ಮೇಲೆ ಪರಿಣಾಮ ಬೀರಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.