Advertisement

ಚುನಾವಣ ಸುಧಾರಣೆಗೆ ಅನ್ವರ್ಥರಾಗಿದ್ದ ಶೇಷನ್‌

09:50 AM Nov 12, 2019 | Hari Prasad |

ಚೆನ್ನೈ: ಕೇಂದ್ರದಲ್ಲಿ ಪಿ.ವಿ. ನರಸಿಂಹ ರಾವ್‌ ಸರಕಾರವಿದ್ದಾಗ ಭಾರತದ ಮುಖ್ಯ ಚುನಾವಣ ಆಯುಕ್ತರ ಹುದ್ದೆಗೆ ನೇಮಕವಾದರು. ಅವರ ಅವಧಿಯಲ್ಲಿಯೇ ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಚುನಾವಣೆ ವೇಳೆ, ರಾಜಕೀಯ ನೇತಾರರು, ಪಕ್ಷಗಳು, ಪೋಸ್ಟರ್‌, ಬ್ಯಾನರ್‌ ಮುಂತಾದ ಪ್ರಚಾರ ಕೈಗೊಳ್ಳುವುದನ್ನು ನಿಷೇಧಿಸಿದ ಹೆಗ್ಗಳಿಕೆ ಅವರದ್ದು.

Advertisement

1932ರಲ್ಲಿ ಕೇರಳದ ಪಾಲಕ್ಕಾಡ್‌ನ‌ಲ್ಲಿ ಡಿ. 15ರಂದು ಜನಿಸಿದ್ದ ಅವರು, ಭಾರತೀಯ ಆಡಳಿತ ಸೇವೆಗೆ ತಮಿಳುನಾಡು ಕೇಡರ್‌ನಿಂದ 1955ರಲ್ಲಿ ಸೇರ್ಪಡೆಗೊಂಡಿದ್ದರು. ತಮಿಳು ನಾಡು ಸರಕಾರದ ನಾನಾ ಇಲಾಖೆಗಳಲ್ಲಿ ಉನ್ನತ ಜವಾಬ್ದಾರಿಗಳನ್ನು ನಿಭಾಯಿಸಿದ ಅವರು, ಆನಂತರ ಕೇಂದ್ರದಲ್ಲಿ ಕೆಲವಾರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಕರ್ನಾಟಕದಲ್ಲಿ ರಾಜ್ಯಪಾಲರಾಗಿದ್ದ ವಿ.ಎಸ್‌. ರಮಾದೇವಿಯವರ ಅನಂತರ, ಕೇಂದ್ರದಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದರು.

ಖದರ್‌ ತೋರಿಸಿದ್ದರು: ಶೇಷನ್ ಅವರ ಅವಧಿಯಲ್ಲಿಯೇ ಅರ್ಹ ಮತದಾರರಿಗೆ ಗುರುತಿನ ಚೀಟಿ ಜಾರಿಗೊಳಿಸಲಾಯಿತು. ಚುನಾವಣೆ ನಾಮಪತ್ರ ಸಲ್ಲಿಕೆಯ ವೇಳೆ ಅಭ್ಯರ್ಥಿಗಳು, ಪಕ್ಷಗಳು ಪಾಲಿಸಬೇಕಾದ ನಿಬಂಧನೆಗಳು ಸೇರಿದಂತೆ, ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಿಂದ ಹಿಡಿದು, ನಾಯಕರ ಬಹಿರಂಗ ಪ್ರಚಾರಗಳು, ಅವರ ಭಾಷಣಗಳು, ನಡೆ- ನುಡಿಗಳು, ಖರ್ಚು-ವೆಚ್ಚಗಳು ಮುಂತಾದ ವಿಚಾರಗಳಲ್ಲಿ ಬಿಗಿ ನಿಯಮಗಳನ್ನು ಜಾರಿಗೊಳಿಸಿದರು. ಜತೆಗೆ ಮತದಾನದ ದಿನದಂದು ಕೈಗೊಳ್ಳಬೇಕಾದ ಭದ್ರತೆಗಳು ಹಾಗೂ ಪಾಲಿಸಬೇಕಾದ ನಿಯಮಗಳ ಬಗ್ಗೆಯೂ ಮಾರ್ಗಸೂಚಿಗಳನ್ನು ಜಾರಿಗೊಳಿಸಿ, ಚುನಾವಣಾ ಆಕ್ರಮಗಳಿಗೆ ಕಡಿವಾಣ ಹಾಕಿದರು.

ಈ ಮೂಲಕ ದೇಶದೆಲ್ಲೆಡೆ, ಶಾಂತಿಯುತ, ಸ್ವಚ್ಛವಾದ ಮತದಾನ ನಡೆಯುವಂಥ ವಾತಾವರಣ ಸೃಷ್ಟಿಸಿದರು. ಹಾಗಾಗಿಯೇ ಅವರು ‘ಪ್ರಜಾತಂತ್ರ ವ್ಯವಸ್ಥೆಯ ಸ್ತಂಭ’ ಎಂಬ ಮೆಚ್ಚುಗೆಗೂ ಪಾತ್ರರಾಗಿದ್ದರು. ಅವರ ಬಳಿಕ ದೇಶದ ಚುನಾವಣಾ ವ್ಯವಸ್ಥೆಯ ಅಧ್ಯಯನಕ್ಕೆ ವಿದೇಶಗಳಿಂದ ಆಗಮಿಸಿ, ಅವರು ಜಾರಿ ಮಾಡಿದ್ದ ಸುಧಾರಣೆಗಳನ್ನು ತಮ್ಮ ದೇಶದಲ್ಲಿಯೂ ಜಾರಿಗೊಳಿಸಿದ್ದರು.

1997ರಲ್ಲಿ ನಡೆದಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್‌ನಿಂದ ಕೆ.ಆರ್‌. ನಾರಾಯಣನ್‌ ಸ್ಪರ್ಧಿಸಿದ್ದರು. ಬೆಂಬಲ ಕೋರಿ ಶೇಷನ್‌ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನಾಯಕರಿಗೆ ಔತಣಕೂಟ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಅವರೇ ಬಡಿಸಲು ನಿಂತಿದ್ದ ಫೋಟೋ ಪ್ರಮುಖವಾಗಿ ಪ್ರಕಟವಾಗಿತ್ತು.

Advertisement

ಚುನಾವಣೆಯೇ ರದ್ದಾಗಿತ್ತು!
ಅತ್ಯಂತ ಜಾಣ್ಮೆಯ ಆಡಳಿತಗಾರರಾಗಿದ್ದ ಅವರು, ಚುನಾವಣಾ ಆಯುಕ್ತರಾಗಿ ಹೊಸದರಲ್ಲೇ ಆಯುಕ್ತರ ಖದರ್‌ ಹೇಗಿರುತ್ತದೆ ಎಂದು ತೋರ್ಪಡಿಸಿದ್ದರು. ಮಧ್ಯಪ್ರದೇಶದ ಆಗಿನ ರಾಜ್ಯಪಾಲರೊಬ್ಬರು, ತಮ್ಮ ಪುತ್ರನ ಪರ ಪ್ರಚಾರಕ್ಕೆ ಇಳಿದಿದ್ದ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಚುನಾವಣೆಯನ್ನು ರದ್ದುಗೊಳಿಸುವ ಮೂಲಕ ಬಿಸಿ ಮುಟ್ಟಿಸಿದ್ದರು ಶೇಷನ್‌. ಉತ್ತರ ಪ್ರದೇಶದಲ್ಲಿ ಚುನಾವಣಾ ಬಹಿರಂಗ ಪ್ರಚಾರ ಅಂತ್ಯಗೊಂಡ ಅನಂತರವೂ ಪ್ರಚಾರ ರ್ಯಾಲಿಯೊಂದರಲ್ಲಿ ಭಾಗವಹಿಸಿದ್ದ ಅಲ್ಲಿನ ಸಚಿವರೊಬ್ಬರನ್ನು ಬಲವಂತವಾಗಿ ವೇದಿಕೆಯಿಂದ ಕೆಳಗಿಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next