Advertisement

ಭಾರತದ ವಲಸೆ ಇಳಿಮುಖ

12:30 AM Jan 13, 2019 | Team Udayavani |

ಮುಂಬಯಿ: ಐದು ವರ್ಷಗಳ ಒಪ್ಪಂದದೊಂದಿಗೆ ಕೊಲ್ಲಿ ರಾಷ್ಟ್ರಗಳಿಗೆ ಗುಳೆ ಹೋಗುತ್ತಿದ್ದ ಭಾರತೀಯ ಕಾರ್ಮಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಇಳಿಮುಖವಾಗುತ್ತಿದೆ ಎಂದು ವರದಿಯೊಂದು ಹೇಳಿದೆ. “ಇಮಿಗ್ರೇಷನ್‌ ಕ್ಲಿಯರೆನ್ಸ್‌’ ದತ್ತಾಂಶದ ಪ್ರಕಾರ, “ವಲಸೆ ತಪಾಸಣಾ ಕಡ್ಡಾಯ’ ಮಾದರಿಯ (ಇಸಿಆರ್‌) ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಭಾರತೀಯ ಕಾರ್ಮಿಕರು ಕೊಲ್ಲಿ ರಾಷ್ಟ್ರಗಳಿಗೆ ಹೋಗು ತ್ತಿದ್ದು, 2017ಕ್ಕೆ ಹೋಲಿಸಿದರೆ 2018ರಲ್ಲಿ ಇವರ ಸಂಖ್ಯೆ ಶೇ. 21ರಷ್ಟು ಕುಸಿತ ಕಂಡಿದೆ ಎಂದು ಹೇಳಲಾಗಿದೆ. 

Advertisement

ಕೊಲ್ಲಿ ರಾಷ್ಟ್ರಗಳಿಗೆ ಹೋಗುವ ಭಾರತೀಯ ಕಾರ್ಮಿಕ ಸಂಖ್ಯೆ 2014ರಲ್ಲಿ ಅತಿ ಹೆಚ್ಚಿತ್ತು. ಆ ವರ್ಷ 7,75,845ರಷ್ಟು ಮಂದಿ ಅಲ್ಲಿನ ರಾಷ್ಟ್ರ ಗಳಿಗೆ ಉದ್ಯೋಗಗಳನ್ನರಸಿ ಹೋಗಿದ್ದರು. ಆದರೆ, 2017ರಲ್ಲಿ ಇಂಥವರ ಸಂಖ್ಯೆ ಅರ್ಧಕ್ಕರ್ಧ (3,74,324) ಇಳಿದಿತ್ತು. ಇನ್ನು, 2018ರಲ್ಲಿ 2,94,837ಕ್ಕೆ ಇಳಿದಿದೆ. 2014ರ ದತ್ತಾಂಶ ಹಾಗೂ 2018ರ ದತ್ತಾಂಶಕ್ಕೆ ಹೋಲಿಸಿದರೆ ಶೇ. 62ರಷ್ಟು ಇಳಿಮುಖ ವಾಗಿದೆ. 2017ರಲ್ಲಿ ಸೌದಿ ಅರೇಬಿಯಾ ಸರ್ಕಾರ, ತನ್ನ ರಾಷ್ಟ್ರದ ಕಾಮಗಾರಿಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡುವ ನಿಯಮಗಳನ್ನು ಜಾರಿಗೊಳಿಸಿದ್ದು, ಜಾಗತಿಕ ತೈಲ ಬೆಲೆ ಇಳಿದಿದ್ದು ಕೊಲ್ಲಿ ರಾಷ್ಟ್ರಗಳ ಆರ್ಥಿಕ ಸಂಕಟಕ್ಕೆ ಕಾರಣವಾಗಿದ್ದು ಸೇರಿದಂತೆ ಅನೇಕ ಸಾಮಾಜಿಕ-ಆರ್ಥಿಕ-ರಾಜಕೀಯ ಕಾರಣಗಳು ಈ ಇಳಿಮುಖದ ಹಿಂದಿವೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಇತ್ತೀಚೆಗೆ ಸಂಸತ್ತಿಗೆ ತಿಳಿಸಿತ್ತು. 

2014ರ ಅಂಕಿ ಅಂಶಗಳಿಗೆ ಹೋಲಿ ಸಿದರೆ 2018ರಲ್ಲಿ ಶೇ.62ರಷ್ಟು ಕುಸಿತ
2017ಕ್ಕೆ ಹೋಲಿಸಿದರೆ 2018ರಲ್ಲಿ ಇವರ ಸಂಖ್ಯೆ ಶೇ.27ರಷ್ಟು ಇಳಿಕೆ
ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಕೊಲ್ಲಿ ರಾಷ್ಟ್ರಗಳಿಂದ ವಿಮುಖರಾಗುತ್ತಿರುವವರ ಸಂಖ್ಯೆ

Advertisement

Udayavani is now on Telegram. Click here to join our channel and stay updated with the latest news.

Next