Advertisement
ರಾಷ್ಟ್ರೀಯ ಗ್ರಾಹಕರ ಮೇಳವು ದಕ್ಷಿಣ ಭಾರತಾದ್ಯಂತ ಮೂರು ದಶಕಗಳಿಂದ ಗ್ರಾಹಕರ ಮೇಳಗಳನ್ನು ಸಂಘಟಿಸುವಲ್ಲಿ ಧ್ರುವತಾರೆಯಾಗಿ ಗುರುತಿಸಿಕೊಂಡಿರುವ ನ್ಯಾಶನಲ್ ಕನ್ ಸ್ಯೂಮರ್ ಫೇರ್‌ನಿಂದ ಸಂಘಟಿಸಲ್ಪಡುತ್ತಿದೆ.
Related Articles
Advertisement
ಮೇಳವು ಹಲವು ಮಳಿಗೆಗಳೊಂದಿಗೆ, ವಿಶೇಷ, ಅತ್ಯಧಿಕ ರಿಯಾಯಿತಿ ದರದಲ್ಲಿ ಗ್ರಾಹಕರನ್ನು ಆಕರ್ಷಿಸಲಿದೆ. ಗೃಹ ಬಳಕೆ ಉತ್ಪನ್ನಗಳು, ಆಟೋಮೊಬೈಲ್ಸ್, ಅಡುಗೆ ಮನೆ ಉತ್ಪನ್ನಗಳು, ಕೈಮಗ್ಗದ ಉತ್ಪನ್ನಗಳು, ಕರಕುಶಲ ಉತ್ಪನ್ನಗಳು, ಡ್ರೆಸ್ ಮೆಟೀರಿಯಲ್ಸ್, ಫ್ಯಾಶನ್ ಪಾದರಕ್ಷೆಗಳು, ಆರೋಗ್ಯ, ಆಟಿಕೆಗಳು, ಆಹಾರೋತ್ಪನ್ನಗಳು, ಇನ್ನೂ ಹಲವಾರು ಉತ್ಪನ್ನಗಳು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಲಭ್ಯವಾಗಲಿವೆ.
ಪ್ರಮುಖ ಆಕರ್ಷಣೆ
ಮೇಳದ ಅಂಗವಾಗಿ ರೊಬೊಟ್ ಯಂತ್ರಗಳಿಂದ ನಿರ್ಮಿ ಸಲಾದ ವನ್ಯಮೃಗಗಳ ಮೃಗಾಲಯವನ್ನು ನಿರ್ಮಿಸಲಾಗಿದೆ. ಆಫ್ರಿಕಾದ ದಟ್ಟ ಕಾಡಿನ ಆನೆಗಳಿಂದ ಹಿಡಿದು ಚೈನೀಸ್ ಪಾಂಡಾ, ಅಸ್ಸಾಂನ ಖಡ್ಗಮೃಗ, ಅಟ್ಲಾಂಟಿಕ್ ಸಾಗರದ ಶಾರ್ಕ್, ಬಂಗಾಲದ ಬಿಳಿ ಹುಲಿ, ನೀರಾನೆ, ಕಿಂಗ್‌ಕಾಂಗ್, ಗುಜರಾತಿನ ಸಿಂಹ, ಕೆಂಪು ಸಮುದ್ರದ ಡಾಲ್ಫಿನ್, ಕರಡಿ, ಹಾವು, ಮೊಸಳೆ, ಪಶ್ಚಿಮಬಂಗಾಲದ ಆನೆಗಳ ಪರಿವಾರ ಈ ಪ್ರದರ್ಶನದ ಮುಖ್ಯ ಆಕರ್ಷಣೆ.
ಮನೋರಂಜನ ವಿಭಾಗದಲ್ಲಿ ಮೆರ್ರಿ ಕೊಲಂಬಸ್, ಡ್ಯಾಶಿಂಗ್ ಕಾರ್, ಟೋರ್ರಾ ಟೋರ್ರಾ, ಮಿನಿ ಟ್ರೇನ್… ಹಾಗೂ ಮಂಗಳೂರಿನಲ್ಲಿ ವಿನೂತನ ಮಾದರಿಯ ಅಮ್ಯೂಸ್ ಮೆಂಟ್‌ಗಳಾದ ಸ್ಪೇಸ್ ಜೆಟ್ (ಸ್ವಯಂ ನಿಯಂತ್ರಣ ವಿಮಾನ), ಮಿನಿ ಶಟ್ಲ ಗ್ರಾಹಕರ ಮನತಣಿಸಲಿವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.