Advertisement

ಇ-ಟಿಕೆಟ್‌ ಬುಕಿಂಗ್‌ ಲೋಪ ಪತ್ತೆ ಹಚ್ಚಿದ ಬಾಲಕ!

08:24 PM Sep 21, 2021 | Team Udayavani |

ಚೆನ್ನೈ: ರೈಲ್ವೆ ಟಿಕೆಟ್‌ಗಳನ್ನು ಅಂತರ್ಜಾಲದ ಮೂಲಕ ಬುಕಿಂಗ್‌ ಮಾಡುವ ವ್ಯವಸ್ಥೆಯಲ್ಲಿ ಇದ್ದ ಲೋಪವನ್ನು ಸರಿಪಡಿಸಲಾಗಿದೆ ಎಂದು ರೈಲ್ವೆ ಕೇಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಷನ್‌ ಲಿಮಿಟೆಡ್‌ (ಐಆರ್‌ಸಿಟಿಸಿ) ತಿಳಿಸಿದೆ.

Advertisement

ಐಆರ್‌ಟಿಸಿ ವೆಬ್‌ಸೈಟ್‌ಗೆ ಪ್ರವೇಶ ಪಡೆಯುವ ಗ್ರಾಹಕರು ಅದರಲ್ಲಿನ ಇನ್‌ಸೆಕ್ಯೂರ್‌ ಡೈರೆಕ್ಟ್ ಆಬೆಕ್ಟ್ ರೆಫ‌ರೆನ್ಸ್‌ (ಐಡಿಒಆರ್‌) ಹಂತವು ಸುಲಭ ಭೇದ್ಯ ವ್ಯವಸ್ಥೆಯಾಗಿದ್ದು, ಅದು ಹ್ಯಾಕರ್‌ಗಳಿಗೆ ಅಥವಾ ಅಂತರ್ಜಾಲ ಮೋಸಗಾರರು ಅನಧಿಕೃತವಾಗಿ ವೆಬ್‌ಸೈಟ್‌ ಪ್ರವೇಶಿಸುವ ಎಲ್ಲಾ ಸಾಧ್ಯತೆಗಳನ್ನು ಒಳಗೊಂಡಿದೆ ಎಂದು 12ನೇ ತರಗತಿಯಲ್ಲಿ ಓದುತ್ತಿರುವ ಶಾಲಾ ಬಾಲಕನೊಬ್ಬ ಪತ್ತೆ ಹಚ್ಚಿದ್ದ.

ಇದನ್ನೂ ಓದಿ:ನ್ಯಾಯಾಲಯಗಳಲ್ಲಿ ಕನ್ನಡದ ಬಳಕೆ ಹೆಚ್ಚಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಆ. 30ರಂದು ಈ ಕುರಿತಂತೆ ದೂರು ದಾಖಲಾಗಿತ್ತು. ತಕ್ಷಣವೇ ಜಾಗೃತರಾದ ಐಆರ್‌ಸಿಟಿಸಿಯ ಮಾಹಿತಿ ತಂತ್ರಜ್ಞಾನ ವಿಭಾಗದ ತಜ್ಞರು, ಸೆ. 2ರಂದು ಸಮಸ್ಯೆಯನ್ನು ಸರಿಪಡಿಸಿದ್ದಾರೆ ಎಂದು ಐಆರ್‌ಟಿಸಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next