Advertisement

GDP; ಈ ವರ್ಷ ಭಾರತದ ಜಿಡಿಪಿ ಶೇ. 6.8 ದರದಲ್ಲಿ ಅಭಿವೃದ್ಧಿ: ಮೂಡೀಸ್‌

01:14 AM Mar 05, 2024 | Team Udayavani |

ಹೊಸದಿಲ್ಲಿ: 2024ನೇ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ.6.8ರಷ್ಟು ಇರಲಿದೆ. ಇದು ಜಿ20 ರಾಷ್ಟ್ರಗಳಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದು ತ್ತಿರುವ ರಾಷ್ಟ್ರವಾಗಿರಲಿದೆ ಎಂದು ಮೂಡೀಸ್‌ ತನ್ನ ವರದಿಯಲ್ಲಿ ತಿಳಿಸಿದೆ.

Advertisement

2024ರಲ್ಲಿ ಭಾರತದ ಜಿಡಿಪಿ ಶೇ.6.1ರ ದರದಲ್ಲಿ ಅಭಿವೃದ್ಧಿ ಕಾಣಲಿದೆ ಎಂದು ಈ ಹಿಂದೆ ಮೂಡೀಸ್‌ ಹೇಳಿತ್ತು. ಆದರೆ ಇದೀಗ ಅಂದಾಜು ಮಾಡಿದ್ದಕ್ಕಿಂತ ವೇಗವಾಗಿ ಭಾರತ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದೆ.

2024ನೇ ಸಾಲಿನ ಸಮಗ್ರ ಆರ್ಥಿಕ ವರದಿಯನ್ನು ಬಿಡುಗಡೆ ಮಾಡಿರುವ ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವಿಸ್‌, ಜಾಗತಿಕ ಆರ್ಥಿಕತೆ ಕುಸಿತ ಕಾಣುತ್ತಿದ್ದರೂ ಸಹ ಭಾರತದ ಆರ್ಥಿಕತೆ ಶೇ.6ರಿಂದ 7ರಷ್ಟು ದರದಲ್ಲಿ ಅಭಿವೃದ್ಧಿ ಸಾಧಿಸಲಿದೆ. 2025ರಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.6.4ರಷ್ಟಿರಲಿದೆ ಎಂದಿದೆ. 2023ರ ಕೊನೆಯಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.8.4ಕ್ಕೆ ಏರಿಕೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next