Advertisement

ಮೊದಲ ಮಹಿಳಾ ಐಎಎಸ್‌ ಅಧಿಕಾರಿ ರಾಜಂ ಇನ್ನಿಲ್ಲ

11:13 AM Sep 19, 2018 | Karthik A |

ಮುಂಬಯಿ: ಸ್ವತಂತ್ರ ಭಾರತದಲ್ಲಿ ಐಎಎಸ್‌ನ ಮೊದಲ ಮಹಿಳಾ ಅಧಿಕಾರಿಯೆಂಬ ಹೆಗ್ಗಳಿಕೆ ಪಡೆದಿದ್ದ ಅಣ್ಣಾ ರಾಜಂ ಮಲ್ಹೋತ್ರಾ (91) ಅಂಧೇರಿಯಲ್ಲಿನ ತಮ್ಮ ಸ್ವಗೃಹದಲ್ಲಿ ವಿಧಿವಶರಾದರು. ಕೇರಳದ ಎರ್ನಾಕುಳಂನಲ್ಲಿ 1927ರಲ್ಲಿ ಹುಟ್ಟಿದ್ದ ಅಣ್ಣಾ  ರಾಜಂ ಜಾರ್ಜ್‌, ಮದ್ರಾಸ್‌ ವಿವಿಯಿಂದ ಪದವಿ ಪಡೆದಿದ್ದರು. 1951ರಲ್ಲಿ ನಾಗರಿಕ ಸೇವೆಗೆ ಸೇರ್ಪಡೆಗೊಂಡ ಅವರು, ತಮಿಳುನಾಡು ಸರಕಾರದಲ್ಲಿ ಅನೇಕ ಜವಾಬ್ದಾರಿ ನಿಭಾಯಿಸಿದ್ದರು. ಜವಾಹರಲಾಲ್‌ ನೆಹರೂ ಪೋರ್ಟ್‌ ಟ್ರಸ್ಟ್‌  ಸ್ಥಾಪನೆ ಹಿಂದೆ ಇವರ ಪರಿಶ್ರಮವಿತ್ತು. 1985ರಿಂದ 1990ರವರೆಗೆ ಆರ್‌ಬಿಐ ಗವರ್ನರ್‌ ಆಗಿದ್ದ ಆರ್‌.ಎನ್‌. ಮಲ್ಹೋತ್ರಾರನ್ನು ವರಿಸಿದ್ದ ಅಣ್ಣಾ ರಾಜಂಗೆ 1989ರಲ್ಲಿ ಪದ್ಮಭೂಷಣ ಸಂದಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next