Advertisement

ಮೂರು ಬಾರಿ ಪದಕಗಿಟ್ಟಿಸಿಕೊಂಡ ವ್ಹೀಲ್‌ ಚೇರ್‌ ಬಾಡಿ ಬಿಲ್ಡರ್

07:58 PM Sep 10, 2020 | Karthik A |

ಬದುಕಿನಲ್ಲಿ ಕಷ್ಟಗಳು ಯಾರಿಗೆ ಬರುವುದಿಲ್ಲ ಹೇಳಿ. ಆದರೆ ಬಂದ ಕಷ್ಟಗಳಿಗೆ ಹೆದರಿ ಸೋಲೊಪ್ಪಿಕೊಳ್ಳುವುದು ನಿಜವಾದ ಜೀವನವಲ್ಲ.

Advertisement

ಕಷ್ಟಗಳೇ ನಾಚುವಂತೆ ಬದುಕು ಕಟ್ಟಿಕೊಳ್ಳುವ ಪರಿ ಇದೆಯಲ್ಲ ಅದು ಒಂದು ಉತ್ತಮ ಜೀವನ ಎನ್ನಲಿಕ್ಕೆ ಲಾಯಕ್ಕು.

ನಾವು ಬದುಕುವ ರೀತಿ ಸಮಾಜಕ್ಕೆ ಸ್ಫೂರ್ತಿ ನೀಡುವಂತಿರಬೇಕು. ನಾವು ಅಂದುಕೊಳ್ಳುವುದೇ ಒಂದು ಬದುಕಿನಲ್ಲಿ ನಡೆಯುವುದೇ ಒಂದು.

ಇದ್ದಕ್ಕಿದ್ದಂತೆ ದುತ್ತೆಂದು ಎದುರಾಗುವ ಕಷ್ಟಗಳು ನಮ್ಮ ಕನಸುಗಳೆಲ್ಲವನ್ನೂ ಪುಡಿ ಮಾಡಿಬಿಡುತ್ತವೆ. ಆಗ ನಮ್ಮಲ್ಲಿ ಚಲ, ಹುಮ್ಮಸ್ಸು ಇದ್ದರೆ ಮಾತ್ರ ಮತ್ತೆ ಎದ್ದು ನಿಲ್ಲಲು ಸಾಧ್ಯ ಎಂಬ ಪಾಠ ಕಲಿಸಿದವರು ಆನಂದ್‌ ಅರ್ನಾಲ್ಡ್‌. ಭಾರತದ ಅರ್ನಾಲ್ಡ್‌ ಎಂತಲೇ ಇವರು ಪ್ರಸಿದ್ಧಿ ಪಡೆದಿದ್ದಾರೆ.

3 ಬಾರಿ ಮಿಸ್ಟರ್‌ ಇಂಡಿಯಾ ಪದಕ ಗೆದ್ದಿರುವ‌ ಆನಂದ್‌ ಅರ್ನಾಲ್ಡ್‌ ಅವರು ಕ್ರಮಿಸಿದ ಹಾದಿಯನ್ನೊಮ್ಮೆ ನೋಡಿದರೆ ಎಂಥವರಿಗೂ ಸ್ಫೂರ್ತಿಯ ಸೆಲೆಯೊಡೆಯತ್ತದೆ. ತಮ್ಮ ಎರಡೂ ಕಾಲು ಕಳೆದುಕೊಂಡರು ಚಲ ಬಿಡದೇ ಸಾಧಿಸಿದ ವ್ಯಕ್ತಿ. ಪಂಜಾಬ್‌ ರಾಜ್ಯದ ಲುದಿಯಾನದವರಾದ ಆನಂದ್‌ ತನ್ನ 13 ನೇ ವಯಸ್ಸಿನಲ್ಲೇ ಒಬ್ಬ ವೃತ್ತಿಪರ ದೇಹದಾಢ್ಯ ಪಟು ಆಗಬೇಕೆಂದು ಕನಸು ಕಟ್ಟಿಕೊಂಡವರು. ಅದರಂತೆ ತನ್ನ ದೇಹಾರೋಗ್ಯ, ಉತ್ತಮ ಆಹಾರ, ಅದಕ್ಕೆ ತಕ್ಕಂತೆ ತಾಲೀಮನ್ನೂ ನಡೆಸುತ್ತಿದ್ದವರು.

Advertisement

ಇದ್ದಕ್ಕಿದ್ದಂತೆ 15ನೇ ವಯಸ್ಸಿಗೆ ಆನಂದ ಅವರಿಗೆ ಕೇಳ ಬೆನ್ನು ಹುರಿಯಲ್ಲಿ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಶಸ್ತ್ರ ಚಿಕಿತ್ಸೆ ಮಾಡುವಾಗ ಅವರು ತಮ್ಮ ಎರಡೂ ಕಾಲುಗಳನ್ನು ಕಳೆದುಕೊಳ್ಳಬೇಕಾಯಿತು. ಅಲ್ಲಿಂದ ಒಡಾಡುವುದೆಲ್ಲವೂ ಗಾಲಿ ಕುರ್ಚಿಯ ಸಹಾಯದಿಂದಲೇ. ಆದರೆ ಸಮಸ್ಯೆಗೆ ಹೆದರಿ ಇವರು ಎದೆಗುಂದಲಿಲ್ಲ. ಮನೋಸ್ಥೈರ್ಯವನ್ನು ಹೆಚ್ಚಿಸಿಕೊಂಡು ಮತ್ತೆ ಮೊದಲಿನಂತೆ ದೇಹವನ್ನು ಹುರಿಗೊಳಿಸಲು ತಯಾರಾದರು. ನಿರಂತರ ಶ್ರಮದಿಂದಾಗಿ ತನ್ನೇಲ್ಲ ನ್ಯೂನ್ಯತೆಗಳನ್ನು ಪಕ್ಕಕ್ಕಿಟ್ಟು ತಮ್ಮ 28ನೇ ವಯಸ್ಸಿನಲ್ಲಿ ಅಂದರೆ 2014ರಲ್ಲಿ ಇಂಡಿಯಾದ ಮೊದಲ ವ್ಹೀಲ್‌ ಚೇರ್‌ ಬಾಡಿ ಬಿಲ್ಡರ್‌ ಎಂಬ ಖ್ಯಾತಿಗೆ ಪಾತ್ರರಾದವರು. ಇದಕ್ಕೆಲ್ಲ ಅವರಿಗೆ ಬೆನ್ನೆಲುಬಾಗಿ ನಿಂತಿದ್ದು ಅವರ ಸಹೋದರಿಯರು. ಮತ್ತೆ ಜಿಮ್‌ಗೆ ಮರಳಿ ಬಾಡಿ ಬಿಲ್ಡಿಂಗ್‌ನಲ್ಲಿ ತೊಡಗಿದ ಆನಂದ, ದಿನೇ ದಿನೆ ಹುರಿಗೊಳ್ಳತೊಡಗಿದ ದೇಹ ಕಂಡು ಮತ್ತಷ್ಟು ಮನೋಬಲ ಹೆಚ್ಚಿತು.

ಮುಂದೇ ಅನೇಕ ಬಾಡಿ ಬಿಲ್ಡಿಂಗ್‌ ಸ್ಫರ್ಧೆಗಳಲ್ಲಿ ಭಾಗವಹಿಸಿ 3 ಬಾರಿ ಮಿಸ್ಟರ್‌ ಇಂಡಿಯಾ, 12 ಬಾರಿ ಮಿಸ್ಟರ್‌ ಪಂಜಾಬ್‌ ಮತ್ತು 7 ಬಾರಿ ಮಿಸ್ಟರ್‌ ನಾರ್ತ ಇಂಡಿಯಾ ಅಲ್ಲದೇ 271ಕ್ಕೂ ಹೆಚ್ಚು ಪದಕಗಳಿಗೆ ಕೊರಳೊಡ್ಡಿದ್ದಾರೆ. ಇವರು ಒಂದು ತೆಲುಗೂ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಇಂಡಿಯಾಸ್‌ ಗಾಟ್‌ ಟ್ಯಾಲೆಂಟ್‌ ಶೋದಲ್ಲಿಯೂ ತಮ್ಮ ಪ್ರತಿಭೆ ತೋರಿಸಿರುವ ಇವರು ಐಎಮ್‌ಸಿ ಕಂಪೆನಿಯ ಬ್ರ್ಯಾಂಡ್‌ ಅಂಬ್ಯಾಸಿಡರ್‌ ಕೂಡ ಹೌದು.
ತಮ್ಮಂತೆ ಇತರ ವಿಕಲ ಚೇತನರಿಗೂ ಸಹಾಯ ಮಾಡುತ್ತಿದ್ದಾರೆ.

ಇವತ್ತು ನನಗೆ ಸಿಕ್ಕಿರುವ ಗೌರವ, ಮಾಡಿರುವ ಸಾಧನೆ ಮತ್ತು ಸ್ವಾವಲಂಬಿ ಬದುಕು ನನ್ನಂತೆಯೇ ಇರುವ ಇತರರಿಗೂ ಸಿಗುವಂತಾಗಬೇಕು ಎಂದು ಅವರ ನೆರವಿಗೆ ನಿಂತಿದ್ದಾರೆ. ಇಂದಿನ ಯುವಕರಿಗೆ ಇವರೊಂದು ಸ್ಪೂರ್ತಿ. ಸದೃಢ ದೇಹವಿದ್ದರೂ ನಮ್ಮಿಂದ ಸಾಧನೆ ಮಾಡಲಾಗಿಲ್ಲ ಎಂದಾದರೆ ಅದಕ್ಕೆ ಕಾರಣ ಆತ್ಮಸ್ಥೈರ್ಯ ಕೊರತೆ ನಮ್ಮಲ್ಲಿದೆ ಎಂದರ್ಥ. ನಾವು ನಮ್ಮಲ್ಲಿರುವ ಶಕ್ತಿ, ಸೃಜನಶೀಲತೆಯುನ್ನು ಸದುಪಯೋಗ ಮಾಡಿಕೊಳ್ಳಬೇಕು.

ಪರಿಶ್ರಮದಿಂದ ಮುನ್ನಡೆದಾಗ ಇತರರಿಗೆ ಸ್ಫೂರ್ತಿದಾಯಕವಾದ ಬದುಕನ್ನು ನಾವೂ ಕಟ್ಟಿಕೊಳ್ಳಬಹುದು. ಎಲ್ಲವೂ ನಮ್ಮೊಳಗೆಯೇ ಇದೆ. ಸೋಲೋ ಅಥವಾ ಗೆಲುವೋ ನೀವೇ ಯೋಚಿಸಿ.

ಶಿವಾನಂದ ಎಚ್‌., ಗದಗ

Advertisement

Udayavani is now on Telegram. Click here to join our channel and stay updated with the latest news.

Next