Advertisement

India’s First Water Metro; ಹೈಟೆಕ್‌ ಇಂಡಿಯಾ-ಇದು ದೇಶದ ಮೊದಲ ತೇಲುವ ಮೆಟ್ರೋ

10:16 AM Apr 25, 2023 | Team Udayavani |

ಕೋಲ್ಕತಾದ ಹೂಗ್ಲಿ ನದಿಯ ಕೆಳಭಾಗದಲ್ಲಿ ನಿರ್ಮಾಣವಾದ ಮೆಟ್ರೋಗೆ “ನದಿಯಡಿ ಸಂಚರಿಸುವ ದೇಶದ ಮೊದಲ ಮೆಟ್ರೋ
ರೈಲು’ ಎಂಬ ಹೆಗ್ಗಳಿಕೆ ಇದೆ. ಈಗ ಕೇರಳದ ಕೊಚ್ಚಿಯಲ್ಲಿ ನೀರಿನ ಮೇಲೆ ಸಾಗುವ ದೇಶದ ಮೊದಲ ಮೆಟ್ರೋ (ವಾಟರ್‌ ಮೆಟ್ರೋ) ವನ್ನು ಪ್ರಧಾನಿ ಮೋದಿ ಮಂಗಳವಾರ ಲೋಕಾರ್ಪಣೆಗೊಳಿಸಲಿದ್ದಾರೆ. ದೇವರೊಲಿದ ರಾಜ್ಯದ ಪ್ರಧಾನ ಆರ್ಥಿಕ ನಗರ ಕೊಚ್ಚಿಯ ಹತ್ತು ದ್ವೀಪಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ.

Advertisement

ಕೇರಳ ಸರ್ಕಾರದ ಯೋಜನೆ 2ನೇ ಬಾರಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್ ಸರ್ಕಾರ “ವಾಟರ್‌ ಮೆಟ್ರೋ ಯೋಜನೆ’ ಜಾರಿಗೊಳಿಸುವ ವಾಗ್ಧಾನ ನೀಡಿತ್ತು. ಜರ್ಮನಿಯ ಕೆಎಫ್ ಡಬ್ಲ್ಯೂ ಬ್ಯಾಂಕ್‌ನ ಹಣಕಾಸು ನೆರವಿನಿಂದ ಕೇರಳ ಸರ್ಕಾರ ಇದನ್ನು ಕಾರ್ಯಾನುಷ್ಠಾನ ಮಾಡಿದೆ. ಇದಕ್ಕೆ 1,136.83 ಕೋಟಿ ರೂ. ವೆಚ್ಚವಾಗಿದೆ.

ಮೊದಲ ಹಂತದಲ್ಲಿ ಎಲ್ಲಿಗೆ?
ಹೈಕೋರ್ಟ್‌-ವಿಪಿನ್‌ ಟರ್ಮಿನಲ್‌ನಿಂದ ವ್ಯತ್ತಿಲ-ಕಕ್ಕನಾಡ್‌ ಟರ್ಮಿನಲ್‌ಗೆ ಸಂಚಾರ ಶುರು ಆಗಲಿದೆ. ಈ ಎರಡು ಸ್ಥಳಗಳಿಗೆ ಕೊಚ್ಚಿ ಮೆಟ್ರೋ ಮತ್ತು ವಾಟರ್‌ ಮೆಟ್ರೋ ಮೂಲಕ ತೆರಳಲೂ ಅವಕಾಶ ಇದೆ. ನಂತರದ ಹಂತಗಳಲ್ಲಿಹತ್ತೂ ದ್ವೀಪಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ.

ಡಿಜಿಟಲ್‌, ಹವಾನಿಯಂತ್ರಿತ
ವಾಟರ್‌ ಮೆಟ್ರೋ ಕೋಚ್‌ಗಳು ಸಂಪೂರ್ಣ ಹವಾನಿಯಂತ್ರಿತವಾಗಿಯೂ, ವಿದ್ಯುತ್‌ ಚಾಲಿತವಾಗಿಯೂ ಇರಲಿವೆ. ದಿವ್ಯಾಂಗರಿಗೂ ಅನುಕೂಲವಾಗುವಂತೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಕೊಚ್ಚಿ ವನ್‌ ಕಾರ್ಡ್‌ ಮೂಲಕ ಎರಡೂ ರೈಲುಗಳಲ್ಲಿ ಪ್ರಯಾಣಿಕರಿಗೆ ಸಂಚರಿಸಲು ಅವಕಾಶವಿದೆ.

*ಯೋಜನೆ ವೆಚ್ಚ;1,136.83ಕೋಟಿ ರೂ.

Advertisement

*10 ದ್ವೀಪಗಳಿಗೆ ಸಂಪರ್ಕ

*ಮುಂದಿನ ಹಂತಗಳಲಿ 78 ಇಲೆಕ್ಟ್ರಿಕ್‌ ಹೈಬ್ರಿಡ್‌ ಬೋಟ್‌ಗಳು.

*ಸದ್ಯ ಲಭ್ಯವಾಗಿರುವುದು 08 ಇಲೆಕ್ಟ್ರಿಕ್‌ ಹೈಬ್ರಿಡ್‌ ಬೋಟ್‌ಗಳು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next