Advertisement

ತೃತೀಯ ಲಿಂಗಿಗಳಿಗೆ ಅರಮನೆ

06:40 AM Jan 10, 2018 | Team Udayavani |

ನವದೆಹಲಿ: ದೇಶದ ಏಕೈಕ ಸಲಿಂಗಿ ರಾಜಕುಮಾರ ಮಾನವೇಂದ್ರ ಸಿಂಗ್‌ ಗೋಹಿಲ್‌ ಅವರ 15 ಎಕರೆ ಪ್ರದೇಶದಲ್ಲಿರುವ ಅರಮನೆ ಈಗ ತೃತೀಯ ಲಿಂಗಿಗಳ ಸಮುದಾಯಕ್ಕೆ ಮುಕ್ತವಾಗಿದೆ. ಗೋಹಿಲ್‌ ಅವರೇ ಈ ನಿರ್ಧಾರ ಕೈಗೊಂಡಿದ್ದಾರೆ.

Advertisement

ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿರುವ ರಾಜ್‌ಪಿಪ್ಲಾದಲ್ಲಿ ಅವರ ಅರಮನೆ ಇದೆ. ಅಂದ ಹಾಗೆ, ಅರಮನೆಯ ಹೆಸರು “ಹನುಮಂತೇಶ್ವರ’. ಸೋಮವಾರವಷ್ಟೇ ಸುಪ್ರೀಂಕೋರ್ಟ್‌ ಸಲಿಂಗಕಾಮ ಅಪರಾಧ ಎಂಬ ತೀರ್ಪನ್ನು ಪುನರ್‌ ಪರಿಶೀಲಿಸಲು ಒಪ್ಪಿರುವಂತೆಯೇ ಗೋಹಿಲ್‌ ಅವರ ಈ ಘೋಷಣೆ ಗಮನ ಸೆಳೆದಿದೆ. ಈ ಘೋಷಣೆ ಬಳಿಕ ತಮ್ಮ ಅರಮನೆ ಇರುವ ಜಮೀನಿನಲ್ಲಿ ಇನ್ನೂ ಹೆಚ್ಚಿನ ಕಟ್ಟಡ ನಿರ್ಮಿಸುವುದಾಗಿ ಅವರು ಹೇಳಿದ್ದಾರೆ.

ಇವರು ಲಕ್ಷ್ಯ ಟ್ರಸ್ಟ್‌ ಎಂಬ ಸಂಸ್ಥೆಯನ್ನು ಆರಂಭಿಸಿ ತೃತೀಯ ಲಿಂಗಿಗಳ ಏಳ್ಗೆಗಾಗಿ ಕೆಲಸವನ್ನೂ ಮಾಡುತ್ತಿದ್ದಾರೆ. ರಾಜಕುಮಾರ ಮಾನವೇಂದ್ರ ಸಿಂಗ್‌ ಏಡ್ಸ್‌ ಹಲ್ತ್‌ಕೇರ್‌ ಫೌಂಡೇಷನ್‌ನಲ್ಲಿ ಸಲಹೆಗಾರರೂ ಹೌದು. 2006ರಲ್ಲಿ ರಾಜಕುಟುಂಬದಿಂದಲೇ ಬಹಿಷ್ಕಾರಕ್ಕೆ ಒಳಗಾದ ಬಳಿಕ ಅವರು ಲಕ್ಷ್ಯ ಟ್ರಸ್ಟ್‌ ಆರಂಭಿಸಿದರು. ಅದರ ಮೂಲಕ ತೃತೀಯ ಲಿಂಗಿಗಳಿಗೆ ಬೆಂಬಲ, ಎಚ್‌ಐವಿ ಬಗ್ಗೆ ಅರಿವು, ಶಿಕ್ಷಣ ನೀಡುವ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಿದರು. 1991ರಲ್ಲಿ ಅವರು ಬಲವಂತವಾಗಿ ದಾಂಪತ್ಯ ಜೀವನ ಪ್ರವೇಶಿಸುವಂತಾಗಿತ್ತು. 2009ರಲ್ಲಿ ಬಿಬಿಸಿ ಚಾನೆಲ್‌ನಲ್ಲಿ “ಅಂಡರ್‌ ಕವರ್‌ ಪ್ರಿನ್ಸೆಸ್‌’ ಎಂಬ ಸರಣಿಯಡಿ ಅವರ ಬಗ್ಗೆ ವರದಿ ಪ್ರಸಾರವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next