Advertisement

ಸಮುದ್ರದ ನೀರನ್ನು ಬಳಸಿ ಭಾರತದಲ್ಲಿ ಮೊದಲ ಬಾರಿಗೆ ಉರಿಯುವ ಎಲ್‌ಇಡಿ ಲ್ಯಾಂಪ್‌ ಬಿಡುಗಡೆ

08:32 PM Aug 13, 2022 | Team Udayavani |

ಚೆನ್ನೈ: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಹಾಯಕ ಸಚಿವ ಡಾ.ಜಿತೇಂದ್ರ ಸಿಂಗ್‌, ಸಮುದ್ರದ ನೀರನ್ನು ಬಳಸಿ ಉರಿಯುವ ಭಾರತದ ಮೊದಲ ಎಲ್‌ಇಡಿ ಲ್ಯಾಂಪ್‌ ಅನ್ನು ಬಿಡುಗಡೆ ಮಾಡಿದ್ದಾರೆ. ಅವರು ಚೆನ್ನೈನಲ್ಲಿರುವ ಎನ್‌ಐಒಟಿ ಅಧೀನದ ಸಾಗರ ಅನ್ವೇಷಿಕ ಎಂಬ ಹಡಗಿಗೆ ಭೇಟಿ ನೀಡಿದ ವೇಳೆ ರೋಶಿನಿ ಹೆಸರಿನ ಲ್ಯಾಂಪ್‌ ಬಿಡುಗಡೆ ಮಾಡಿದರು.

Advertisement

ಸಮುದ್ರದ ಉಪ್ಪು ನೀರೇ ಈ ಎಲ್‌ಇಡಿ ಲ್ಯಾಂಪ್‌ಗೆ ಇಂಧನದಂತೆ ಕೆಲಸ ಮಾಡುತ್ತದೆ. ಇದರಿಂದ ಭಾರತದ 7,500 ಕಿ.ಮೀ. ಉದ್ದದ ಕರಾವಳಿ ತೀರದ ಜನರಿಗೆ ಬಹಳ ಉಪಯೋಗವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಬಡ ಮೀನುಗಾರರ ಕುಟುಂಬಗಳಿಗೆ ಬಹಳ ನೆರವು ನೀಡುತ್ತದೆ ಎಂದು ಸಚಿವರು ಹೇಳಿದ್ದಾರೆ.

2015ರಲ್ಲೇ ಪ್ರಧಾನಿ ಮೋದಿ ಉಜಾಲ ಯೋಜನೆಯನ್ನು ಬಿಡುಗಡೆ ಮಾಡಿದ್ದರು. ಅದರ ಮೂಲಕ ಎಲ್‌ಇಡಿ ಬಲ್ಬ್ಗಳನ್ನು ದೇಶಾದ್ಯಂತ ಹಂಚಲು ಆರಂಭಿಸಲಾಗಿತ್ತು. ಸಮುದ್ರದ ನೀರಿನ ಈ ಲ್ಯಾಂಪ್‌ ಉಜಾಲ ಯೋಜನೆಗೆ ಪೂರಕ ಎನ್ನುವುದು ಜಿತೇಂದ್ರ ಸಿಂಗ್‌ ಅಭಿಮತ.

Advertisement

Udayavani is now on Telegram. Click here to join our channel and stay updated with the latest news.

Next