Advertisement

ಭಾರತ ಬಾಕ್ಸಿಂಗ್‌ನಲ್ಲಿ ವಿವಾದ: ಒಂದೇ ತಿಂಗಳಿಗೆ ಕೋಚ್‌ ರಾಜೀನಾಮೆ

09:22 AM Sep 15, 2017 | Team Udayavani |

ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ಮಹಿಳಾ ಬಾಕ್ಸಿಂಗ್‌ ತಂಡಕ್ಕೆ ನೇಮಕವಾಗಿದ್ದ ವಿದೇಶಿ ಕೋಚ್‌ ಸ್ಟೀಫ‌ನ್‌ ಕೊಟ್ಟಲೊರ್ಡಾ ಅವಧಿ ಒಂದೇ ತಿಂಗಳಲ್ಲಿ ಮುಗಿದುಹೋಗಿದೆ. ಸಂಬಳ ಸರಿಯಾಗಿ ನೀಡಿಲ್ಲ, ಎಷ್ಟು ಸಂಬಳವೆಂದು ತಿಳಿಸಿಯೂ ಇಲ್ಲ, ವೃತ್ತಿಪರ ವಾತಾವರಣವೇ ಅಲ್ಲಿಲ್ಲ ಎಂದು ಆರೋಪಿಸಿರುವ ಕೊಟ್ಟಲೊರ್ಡಾ ತಮ್ಮ ತವರು ಫ್ರಾನ್ಸ್‌ಗೆ ದಿಢೀರ್‌ ವಾಪಸಾಗಿದ್ದಾರೆ.

Advertisement

ಕುಟುಂಬ ಸದಸ್ಯರನ್ನು ಯಾವುದೇ ದೇಶಕ್ಕೆ ಕರೆದುಕೊಂಡು ಬಂದಾಗ ಪರಿಸ್ಥಿತಿ ಕಷ್ಟವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಸಂಸ್ಥೆ ನಿರ್ದಿಷ್ಟವಾಗಿ ಏನೂ ಹೇಳದಿದ್ದರೆ ಭವಿಷ್ಯ ಅತಂತ್ರವಾಗುತ್ತದೆ. ಆದ್ದರಿಂದ ಫ್ರಾನ್ಸ್‌ಗೆ ಹಿಂತಿರುಗುವ ನಿರ್ಧಾರ ಕೈಗೊಂಡಿದ್ದೇನೆಂದು ಅವರು ಇ-ಮೇಲ್‌ನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಭಾರತೀಯ ಬಾಕ್ಸಿಂಗ್‌ ಒಕ್ಕೂಟದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಅವರಿಗೆ ನೀಡಬೇಕಾಗಿರುವ ಸಂಬಳದಲ್ಲಿ ಶೇ.70ರಷ್ಟು ನೀಡಲಾಗಿದೆ. ಅವರು ಕೇಳಿರುವಂತಹ ಸೌಲಭ್ಯಗಳಲ್ಲಿ ಬಹುಪಾಲು ಪೂರೈಸಿದ್ದೇವೆ. ಅವರು ಪ್ಯಾನ್‌ ಕಾರ್ಡ್‌ ನೀಡಲು ವಿಳಂಬ ಮಾಡಿದ್ದಾರೆ.

ಹೀಗಾಗಿ ಸಂಬಳ ನೀಡುವಲ್ಲಿ ವಿಳಂಬವಾಗಿದೆ. ಅವರ ನಿರ್ಧಾರ ಬದಲಿಸುವಂತೆ ಕೇಳಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next