Advertisement

FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ

03:30 PM Nov 22, 2024 | Team Udayavani |

ಗ್ರೇಟರ್ ನೋಯ್ಡಾ: ಬೆನೆಟ್ ವಿಶ್ವವಿದ್ಯಾಲಯದಲ್ಲಿ ಎಫ್ಐಪಿ ಪ್ರೊಮೋಶನ್ ಇಂಡಿಯಾ ಪ್ಯಾಡಲ್ ಭರ್ಜರಿಯಾಗಿ ಪ್ರಾರಂಭವಾಗಿದೆ. ಮೊದಲ ದಿನದ ಪಂದ್ಯಗಳಲ್ಲಿ ದಿಗ್ವಿಜಯ ಪ್ರತಾಪ್ ಸಿಂಗ್, ಮಿಗ್ವೆಲ್ ವೇಗಾ, ಆರ್ಯನ್ ಗೋವಿಯಾಸ್, ರಾಹುಲ್ ಮೋಟ್‌ವಾಣಿ ಮತ್ತು ಮೋಹಿತ್ ದಾಹಿಯಾ ಅವರ ಪ್ರದರ್ಶನ ತೀವ್ರ ಮೆಚ್ಚುಗೆ ಪಡೆದಿದೆ. ಭಾರತದ ಮೊದಲ ಅಂತಾರಾಷ್ಟ್ರೀಯ ಪ್ಯಾಡಲ್ ಟೂರ್ನಮೆಂಟ್ ಇದಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ನಡೆದಿರುವ CUPRA FIP Tour ಇದಾಗಿದೆ. ಈ ಟೂರ್ನಮೆಂಟ್ ನವೆಂಬರ್ 21ರಿಂದ 24ರವರೆಗೆ ಬೆನೆಟ್ ವಿಶ್ವವಿದ್ಯಾಲಯದ ಆಧುನಿಕ ಪ್ಯಾಡಲ್ ಕೋರ್ಟ್‌ಗಳಲ್ಲಿ ನಡೆಯುತ್ತಿದೆ.

Advertisement

ಅಂತರಾಷ್ಟ್ರೀಯ ಪ್ಯಾಡಲ್ ಫೆಡರೇಶನ್ (FIP) ಅನುಮೋದಿಸಿದ ಈ ಟೂರ್ನಮೆಂಟ್ PTL ಸ್ಪೋರ್ಟ್ಸ್ ಗ್ರೂಪ್‌ನ ಅಂಗಸಂಸ್ಥೆ ಪ್ಯಾಡಲ್ ಲೀಗ್ ಪ್ರೈವೇಟ್ ಲಿಮಿಟೆಡ್ ಹಾಗೂ ಟೈಮ್ಸ್ ಗ್ರೂಪ್ ಸಹಯೋಗದಲ್ಲಿ ಆಯೋಜಿಸಲಾಗಿದೆ. ಸ್ಪೇನ್, ಜಪಾನ್, ನೆದರ್‌ಲ್ಯಾಂಡ್ಸ್, ಫ್ರಾನ್ಸ್, ಇಟಲಿ, ಮತ್ತು ಇರಾನ್ ಸೇರಿದಂತೆ ಹಲವು ದೇಶಗಳ ಕ್ರೀಡಾಪಟುಗಳು ಹಾಗೂ ಭಾರತದ ತಾರಾ ಆಟಗಾರರು ಈ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ್ದಾರೆ.

ಟೂರ್ನಮೆಂಟ್ ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಟೈಮ್ಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ವಿನೀತ್ ಜೈನ್, “ಬೆನೆಟ್ ವಿಶ್ವವಿದ್ಯಾಲಯವು ಹೊಸತೆಯ ಕ್ರೀಡೆಗಳ ಕೇಂದ್ರವಾಗಿ ಬೆಳೆಯುತ್ತಿರುವುದು ನಮಗೆ ಹೆಮ್ಮೆಯ ವಿಷಯ. ದೇಶದ ಟಾಪ್ ಪ್ಯಾಡಲ್ ಆಟಗಾರರು ಹಾಗೂ ವಿಶ್ವದ ಶ್ರೇಷ್ಠ ಆಟಗಾರರನ್ನು ಈ ಟೂರ್ನಮೆಂಟ್ ಮೂಲಕ ಸ್ವಾಗತಿಸುತ್ತಿದ್ದೇನೆ. ಬೆನೆಟ್ ವಿಶ್ವವಿದ್ಯಾಲಯ, ತನ್ನ ಶೈಕ್ಷಣಿಕ ಕೌಶಲ್ಯ ಮತ್ತು ಕ್ರೀಡಾ ಅವಕಾಶಗಳ ಮೂಲಕ ಹೊಸತೆಯ ಕ್ರೀಡೆಗಳಿಗೆ ವೇದಿಕೆಯಾಗಿದೆ” ಎಂದರು.

ಮೊದಲ ದಿನದ ಪಂದ್ಯದ ಫಲಿತಾಂಶ

Advertisement

ಕೇಂದ್ರ ಕೋರ್ಟ್:

ಪಂದ್ಯ 1: ಚಂದ್ರಿಲ್ ಸೂದ್ & ಲಕ್ಷಿತ್ ಸೂದ್ (ಭಾರತ) 6-0, 4-6, 6-2 | ಪುಲ್ಕಿತ್ ಮಿಶ್ರಾ & ವಿವೇಕ್ ಶೋಕೀನ್ (ಭಾರತ)

ಪಂದ್ಯ 2: ಚೈತನ್ಯ ಶಾ & ವಿಕ್ರಂ ಶಾ (ಭಾರತ) 6-1, 6-0 | ಕುನಾಲ್ ಚಡ್ಹಾ & ದೀಪಕ್ ಅರೋರಾ (ಭಾರತ)

ಪಂದ್ಯ 3: ಅರ್ಜುನ್ ಉಪ್ಪಲ್ & ರಿಷಿ ಕಪೂರ್ (ಭಾರತ) 6-1, 6-1 | ಶೋನ್ ಜೋಸೆಫ್ & ಅಭಿಜೀತ್ ಡಾಂಗಟ್ (ಭಾರತ)

ಪಂದ್ಯ 4: ಫಮಾಜ್ ಶಾನವಾಸ್ & ಆಸ್ಟಿನ್ ವರ್ಘೀಸ್ (ಭಾರತ) 6-4, 6-1 | ನಿಖಿಲ್ ಸಾಯಿ ಕೊಡಾಲಿ (ಭಾರತ) & ಅಡಿಟ್ ಪಟೇಲ್ (ಗ್ರೇಟ್ ಬ್ರಿಟನ್)

ಕೋರ್ಟ್ 2: ಪಂದ್ಯ 1: ಮೋಹಿತ್ ದಾಹಿಯಾ (ಭಾರತ) & ಮಾರ್ಕ್ ಬೆರ್ನಿಲ್ಸ್ ಗಾರ್ಸಿಯಾ (ಸ್ಪೇನ್) 6-4, 6-1 | ಆದಿತ್ಯ ಜಾಗತಾಪ್ & ಆರ್ಯನ್ ಹೇಮ್‌ದೇವ್ (ಭಾರತ)

ಪಂದ್ಯ 2: ಆರ್ಯನ್ ಗೋವಿಯಾಸ್ & ರಾಹುಲ್ ಮೋಟ್‌ವಾಣಿ (ಭಾರತ) 6-0, 6-0 | ಉತ್ಸವ್ ಬಿರ್ಲಾ & ಹಾರ್ದಿಕ್ ಕಾಶ್ಯಪ್ (ಭಾರತ)

ಪಂದ್ಯ 3: ದಿಗ್ವಿಜಯ ಪ್ರತಾಪ್ ಸಿಂಗ್ (ಭಾರತ) & ಮಿಗ್ವೆಲ್ ವೇಗಾ ಮಾರ್ಟಿನ್ (ಸ್ಪೇನ್) 6-2, 6-1 | ರಕ್ಷಿತ್ ಚೌಹಾನ್ & ಪರಮ್ ಯಾದವ್ (ಭಾರತ)

Advertisement

Udayavani is now on Telegram. Click here to join our channel and stay updated with the latest news.

Next