Advertisement

 ದೇಶದ ಮೊದಲ ಇ-ಡಬಲ್‌ ಡೆಕ್ಕರ್‌ ಎ.ಸಿ. ಬಸ್‌ ಅನಾವರಣ

08:38 PM Aug 18, 2022 | Team Udayavani |

ಮುಂಬೈ: ದೇಶದ ಮೊದಲ ಎಲೆಕ್ಟ್ರಿಕ್‌ ಡಬಲ್‌ ಡೆಕ್ಕರ್‌ ಹವಾ ನಿಯಂತ್ರಿತ ಬಸ್‌ ಅನ್ನು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಗುರುವಾರ ಅನಾವರಣಗೊಳಿಸಿದ್ದಾರೆ. ಈಗಾಗಲೇ ಇಐವಿ 12 ಹೆಸರಿನ ಎಲೆಕ್ಟ್ರಿಕ್‌ ಬಸ್ಸುಗಳನ್ನು ತಯಾರಿಸಿರುವ ಸ್ವಿಚ್‌ ಸಂಸ್ಥೆ ಈ ಇಐವಿ 22 ಬಸ್ಸನ್ನು ತಯಾರಿಸಿದೆ. ಇದೇ ರೀತಿಯ ಒಟ್ಟು 200 ಬಸ್ಸುಗಳನ್ನು ಮುಂಬೈನ ನಗರ ಸಾರಿಗೆಯಾಗಿರುವ “ಬೆಸ್ಟ್‌’ ಖರೀದಿಸಲಿದೆ.

Advertisement

ಬಸ್ಸನ್ನು ಅನಾವರಣಗೊಳಿಸಿ ಮಾತನಾಡಿದ ಸಚಿವ ಗಡ್ಕರಿ, “ದೇಶದ ಸಾರಿಗೆ ವ್ಯವಸ್ಥೆಯನ್ನು ಬದಲಿಸುವ ಅವಶ್ಯಕತೆಯಿದೆ. ಎಲೆಕ್ಟ್ರಿಕ್‌ ವಾಹನಗಳ ಬಳಕೆ ಹೆಚ್ಚಾಗಬೇಕಿದೆ’ ಎಂದು ತಿಳಿಸಿದರು. ಈ ಡಬಲ್‌ ಡೆಕ್ಕರ್‌ ಬಸ್ಸಿನಲ್ಲಿ 65 ಮಂದಿ ಪ್ರಯಾಣಿಸುವ ಸಾಮರ್ಥ್ಯವಿದ್ದು, ಒಮ್ಮೆ ಸಂಪೂರ್ಣ ಚಾರ್ಜ್‌ ಮಾಡಿದರೆ 250ಕಿ.ಮೀ.ವರೆಗೆ ಪ್ರಯಾಣಿಸಬಲ್ಲದು ಎಂದು ಸ್ವಿಚ್‌ ಸಂಸ್ಥೆ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next