Advertisement

ಸ್ಮತಿ ಠಕ್ಕರ್‌ ದೇಶದ ಮೊದಲ ಪ್ಲಾಸ್ಮಾ ದಾನಿ

11:50 PM Apr 25, 2020 | Sriram |

ಕೋವಿಡ್-19 ಸೋಂಕಿತರನ್ನು ಗುಣಪಡಿಸಲು ಪ್ಲಾಸ್ಮಾ ಥೆರಪಿ ಪರಿಣಾಮಕಾರಿ ಎಂಬುದು ಈಗ ಸಾಬೀತಾಗಿದೆ. ಗುಣಮುಖ ರಾದ ಅಹಮದಾಬಾದ್‌ನ ಸ್ಮತಿ ಠಕ್ಕರ್‌ ದೇಶದ ಮೊದಲ ಪ್ಲಾಸ್ಮಾ ದಾನಿ ಎನಿಸಿಕೊಂಡಿದ್ದಾರೆ.

Advertisement

ಈ ಬಗ್ಗೆ ಮಾತನಾಡಿರುವ ಅವರು, ಡಿಸಾcರ್ಜ್‌ ಬಳಿಕ 14 ದಿನಗಳ ಕ್ವಾರಂಟೈನ್‌ನಲ್ಲಿದ್ದೆ. ಬಳಿಕ ಇತರ ರೋಗಿಗಳ ಚಿಕಿತ್ಸೆಗೆ ತಮ್ಮ ರಕ್ತದಿಂದ ಪ್ಲಾಸ್ಮಾ ಕಣಗಳನ್ನು ನೀಡುವ ಬಗ್ಗೆ ಆಸಕ್ತಿ ಹೊಂದಿದ್ದೀರಾ ಎಂಬ ಬಗ್ಗೆ ಆಸ್ಪತ್ರೆಯಿಂದ ಫೋನ್‌ ಬಂದಿತ್ತು. ಅದಕ್ಕೆ ಸಮ್ಮತಿಸಿದ್ದಾಗಿ ಸ್ಮತಿ ಠಕ್ಕರ್‌ ಹೇಳಿದ್ದಾರೆ. 2 ಗಂಟೆಗಳ ಅವಧಿಯಲ್ಲಿ ಪ್ರಕ್ರಿಯೆ ಮುಗಿಯಿತು. ರೋಗದಿಂದ ಗುಣ ಮುಖರಾದವರ ದೇಹದಲ್ಲಿ ಕೋವಿಡ್-19 ವೈರಸ್‌ ವಿರುದ್ಧ ಹೋರಾಡುವ ಜೀವ ನಿರೋಧಕಗಳು ಅಭಿವೃದ್ಧಿಯಾಗಿರುತ್ತವೆ ಇವನ್ನು ಸೋಂಕಿತ ವ್ಯಕ್ತಿಯ ದೇಹಕ್ಕೆ ವರ್ಗಾಯಿಸಲಾಗುತ್ತದೆ. ಸೋಂಕಿನಿಂದ ಗುಣಮುಖರಾದವರೆಲ್ಲರೂ ಪ್ಲಾಸ್ಮಾ ಕಣಗಳನ್ನು ದಾನ ಮಾಡಿ ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next