Advertisement

Bullet Train; ಬೆಂಗಳೂರಿನಲ್ಲೇ ತಯಾರಾಗಲಿದೆ ದೇಶದ ಮೊದಲ ಬುಲೆಟ್‌ ರೈಲು?

10:11 AM Sep 22, 2024 | Team Udayavani |

ನವದೆಹಲಿ: ದೇಶದ ಮೊದಲ ಬುಲೆಟ್‌ ರೈಲು ಬೆಂಗಳೂರಿನಲ್ಲಿ ತಯಾರಾಗುವ ಸಾಧ್ಯತೆಗಳಿವೆ. ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ ಕರೆದಿದ್ದ ಟೆಂಡರ್‌ನಲ್ಲಿ ಬೆಮೆಲ್‌ ಮಾತ್ರ ಭಾಗಿಯಾಗಿದ್ದು, ಇದು ಅಂತಿಮಗೊಳ್ಳುವ ಸಾಧ್ಯತೆ ಇದೆ. ಮುಂಬೈ-ಅಹಮದಾಬಾದ್‌ ನಡುವಿನ ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸಲಿದ್ದು, ಬೆಮೆಲ್‌ನ ಬೆಂಗಳೂರಿನ ಘಟಕದಲ್ಲೇ ರೈಲು ತಯಾರಾಗಲಿದೆ ಎನ್ನಲಾಗಿದೆ.

Advertisement

“8 ಬೋಗಿಗಳನ್ನು ಒಳಗೊಂಡಿರುವ 2 ಬುಲೆಟ್‌ ರೈಲುಗಳ ನಿರ್ಮಾಣಕ್ಕೆ ಬೆಮೆಲ್‌ ಮಾತ್ರ ಅರ್ಜಿ ಸಲ್ಲಿಸಿದೆ, 1 ವಾರದಲ್ಲಿ ಟೆಂಡರ್‌ ಅಂತಿಮಗೊಳ್ಳಲಿದೆ’ ಎಂದು ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿಯ ಮುಖ್ಯಸ್ಥ ಸುಬ್ಟಾ ರಾವ್‌ ಹೇಳಿದ್ದಾರೆ. ಸದ್ಯಕ್ಕೆ 2 ರೈಲು ನಿರ್ಮಾಣಕ್ಕೆ ಮಾತ್ರ ಟೆಂಡರ್‌ ಕರೆಯಲಾಗಿದ್ದು, ಮುಂದಿನ 2.5 ವರ್ಷಗಳಲ್ಲಿ ಪೂರ್ಣ ಗೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ.

ರೈಲಿನ ವಿಶೇಷತೆ‌: ಒಟ್ಟು 8 ಬೋಗಿಗಳನ್ನು ಹೊಂದಿರುವ ಬುಲೆಟ್‌ ರೈಲು ಗಂಟೆಗೆ 280ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, 250 ಕಿ.ಮೀ. ವೇಗದಲ್ಲಿ ಕಾರ್ಯನಿರ್ವಹಿಸಲಿದೆ. 8ರ ಪೈಕಿ 7 ಬೋಗಿಗಳಲ್ಲಿ 3+2 ಚೇರ್‌ ಇರಲಿದ್ದು, 1 ಬೋಗಿಯಲ್ಲಿ 2+2 ಚೇರ್‌ ಇರಲಿದೆ. ಒಂದು ರೈಲಿನ ನಿರ್ಮಾಣಕ್ಕೆ 200ರಿಂದ 250 ಕೋಟಿ ರೂ. ವೆಚ್ಚವಾಗಲಿದೆ ಎಂದು ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next