Advertisement
ಆಸ್ಪತ್ರೆಯ ಮೂಲಗಳು ತಿಳಿಸಿರುವ ಪ್ರಕಾರ ಬಾಲಕನಿಗೆ ಕೊರೊನಾ ಸೋಂಕು ಇರಬಹುದೆಂದು ತರ್ಕಿಸಲಾಗಿತ್ತು. ಆತನಿಗೆ ಸೋಂಕು ಪತ್ತೆ ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್ ಬಂದಿತ್ತು. ಆತನನ್ನು ಇತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಹಕ್ಕಿಜ್ವರ ಇದ್ದದ್ದು ದೃಢವಾಯಿತು ಎಂದು ತಿಳಿಸಿವೆ.
Related Articles
ಅಸುನೀಗಿದ ಬಾಲಕನಿಂದಾಗಿ ಹಕ್ಕಿ ಜ್ವರ ಇತರರಿಗೆ ತಗಲಿದೆಯೇ ಎಂದು ದೃಢಪಡಿಸಲು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು, ದಾದಿಯರು ಮತ್ತು ಕುಟುಂಬ ಸದಸ್ಯರನ್ನು ಐಸೊಲೇಷನ್‌ನಲ್ಲಿ ಇರಿಸಲು ಸೂಚಿಸಲಾಗಿದೆ.
Advertisement
ಭಯ ಬೇಡ: ಡಾ. ಸುರ್ಜೆವಾಲಾಮಾನವನಿಂದ ಮಾನವನಿಗೆ ಹಕ್ಕಿಜ್ವರ ಎಚ್5ಎನ್1 ಹರಡುವುದು ತೀರಾ ಅಪರೂಪ. ಹೀಗಾಗಿ, ಭೀತಿಗೆ ಒಳಗಾಗ ಬೇಕಾದ ಅಗತ್ಯವಿಲ್ಲ ಎಂದು ನವದೆಹಲಿ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ. ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ ಕೂಡ ಬಾಲಕನಿಗೆ ಹಕ್ಕಿಜ್ವರ ತಗಲಿದ್ದನ್ನು ದೃಢಪಡಿಸಿದೆ ಎಂದು ಅವರು ಹೇಳಿದ್ದಾರೆ. ಹಕ್ಕಿಗಳಿಂದ ಮಾನವನಿಗೆ ಜ್ವರ ತಗಲುತ್ತದೆ ಎಂಬ ಅಂಶವನ್ನೂ ಇನ್ನೂ ಅಧ್ಯಯನದ ಮೂಲಕ ಸಾಬೀತುಪಡಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.