Advertisement

India ಆರ್ಥಿಕತೆಯು ಬೆಳೆಯುತ್ತಿದೆ ಆದರೆ… : ರಾಹುಲ್ ಗಾಂಧಿ

05:35 PM Dec 23, 2023 | Team Udayavani |

ಹೊಸದಿಲ್ಲಿ: ಭಾರತದ ಆರ್ಥಿಕತೆಯು ಬೆಳೆಯುತ್ತಿದೆ ಆದರೆ ಸಂಪತ್ತು ಕೆಲವೇ ಕೈಯಲ್ಲಿ ಕೇಂದ್ರೀಕೃತವಾಗುತ್ತಿದೆ ಮತ್ತು ನಿರುದ್ಯೋಗದ ಸವಾಲು ಮುಂದುವರೆದಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯ ಹೊರ ಹಾಕಿದ್ದಾರೆ.

Advertisement

ಡಿಸೆಂಬರ್ 15 ರಂದು ನಡೆದ ಸಂವಾದದ ವಿಡಿಯೋವನ್ನು ಶನಿವಾರ ಎಕ್ಸ್ ನಲ್ಲಿ ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ಕೇಳಿದಾಗ, ಕಾಂಗ್ರೆಸ್ ನಾಯಕ ಉತ್ತರಿಸಿಸಿ “ಎಲ್ಲಾ ವಿದ್ಯಾರ್ಥಿಗಳಿಗೆ ನನ್ನ ಸಲಹೆ – ನಿಜವಾದ ಶಕ್ತಿಯು ಜನರೊಂದಿಗೆ ಸಂಪರ್ಕ ಹೊಂದುವುದು, ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಆಳವಾಗಿ ಆಲಿಸುವುದು ಮತ್ತು ಜನರ ಬಗ್ಗೆ ದಯೆ ತೋರುವುದರಿಂದ ಬರುತ್ತದೆ.” ಎಂದು ಪರೋಕ್ಷವಾಗಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ.

“ನೀವು ಆರ್ಥಿಕ ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ ಆ ಆರ್ಥಿಕ ಅಭಿವೃದ್ಧಿ ಯಾರ ಹಿತಾಸಕ್ತಿಯಲ್ಲಿದೆ ಎಂಬ ಪ್ರಶ್ನೆಯನ್ನು ನೀವು ಕೇಳಬೇಕು.ಆ ಬೆಳವಣಿಗೆಯ ಸ್ವರೂಪ ಏನು ಮತ್ತು ಅದರಿಂದ ಯಾರು ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದು ಕೇಳಬೇಕಾದ ಪ್ರಶ್ನೆ. ಭಾರತದಲ್ಲಿನ ಬೆಳವಣಿಗೆಯ ಅಂಕಿ ಅಂಶದ ಜತೆಯಲ್ಲೇ ಭಾರತದಲ್ಲಿ ನಿರುದ್ಯೋಗದ ಅಂಕಿಅಂಶವಿದೆ. ಭಾರತವು ಸಂಪತ್ತನ್ನು ಕೆಲವೇ ಜನರ ಕಡೆಗೆ ಕೇಂದ್ರೀಕರಿಸುವ ಮೂಲಕ ಬೆಳೆಯುತ್ತಿದೆ, ”ಎಂದು ಹೇಳಿದ್ದಾರೆ.

“ನಮ್ಮಲ್ಲಿ ಅದಾನಿ ಇದ್ದಾರೆ, ಅವರು ಪ್ರಧಾನ ಮಂತ್ರಿಯೊಂದಿಗೆ ನೇರವಾದ ಸಂಪರ್ಕ ಹೊಂದಿದ್ದಾರೆಂದು ಎಲ್ಲರಿಗೂ ತಿಳಿದಿದೆ. ನಮ್ಮ ದೇಶದ ಎಲ್ಲಾ ಬಂದರುಗಳು, ವಿಮಾನ ನಿಲ್ದಾಣಗಳು, ನಮ್ಮ ಮೂಲಸೌಕರ್ಯಗಳನ್ನು ಹೊಂದಿದ್ದಾರೆ. ಆ ರೀತಿಯ ಏಕಸಾಮ್ಯತೆಯಿಂದ ಬೆಳವಣಿಗೆಯನ್ನು ಪಡೆಯುತ್ತೀರಿ ಎಂದಾದರೆ ಯಾವುದೇ ಹಂಚಿಕೆಯನ್ನು ಪಡೆಯುವುದಿಲ್ಲ”ಎಂದರು.

Advertisement

“ನ್ಯಾಯಯುತ ಮಾಧ್ಯಮ, ನ್ಯಾಯಯುತ ಕಾನೂನು ವ್ಯವಸ್ಥೆ, ನ್ಯಾಯಯುತ ಚುನಾವಣ ಆಯೋಗ, ಹಣಕಾಸು ಪ್ರವೇಶ, ತಟಸ್ಥ ಸಂಸ್ಥೆಗಳ ಅಗತ್ಯವಿದೆ. ಐಆರ್‌ಎಸ್, ಎಫ್‌ಬಿಐನ ಪೂರ್ಣ ಸಮಯದ ಕೆಲಸವು ಪ್ರತಿಪಕ್ಷಗಳ ಜೀವನವನ್ನು ನಾಶಪಡಿಸುತ್ತಿರುವ ಯುನೈಟೆಡ್ ಸ್ಟೇಟ್ಸ್ ಅನ್ನು ಕಲ್ಪಿಸಿಕೊಳ್ಳಿ” ಎಂದರು.

ನಾನು 4,000 ಕಿಲೋಮೀಟರ್ ನಡೆದೆ ಏಕೆಂದರೆ,  ನಮ್ಮ ಸಂದೇಶ ತಲುಪಲು ಬೇರೆ ಮಾರ್ಗವಿಲ್ಲದ ಕಾರಣ ನಾನು 4,000 ಕಿಲೋಮೀಟರ್ ನಡೆದಿದ್ದೇನೆ, ”ಎಂದು ಭಾರತ್ ಜೋಡೋ ಯಾತ್ರೆಯನ್ನು ಉಲ್ಲೇಖಿಸಿದರು.

“ನನ್ನ ಸಾಮಾಜಿಕ ಮಾಧ್ಯಮವನ್ನು ಸಹ ಸಂಪೂರ್ಣವಾಗಿ ಮುಚ್ಚಲಾಗಿದೆ. ಯಾವುದೇ ಮುನ್ಸೂಚನೆಯೇ ಇಲ್ಲದೆ 24/7 ನಿಷೇಧವನ್ನು ಹೇರಲಾಗಿದೆ.ನನ್ನ ಟ್ವಿಟರ್ ನಿಯಂತ್ರಣದಲ್ಲಿದ್ದು, ಯೂಟ್ಯೂಬ್ ಕೂಡ ನಿಯಂತ್ರಣದಲ್ಲಿದೆ. ಆದರೂ ನಾನು ಒಬ್ಬಂಟಿಯಾಗಿಲ್ಲ. ಭಾರತವು ಇನ್ನು ಮುಂದೆ ಮುಕ್ತ ಮತ್ತು ನ್ಯಾಯಯುತ ಪ್ರಜಾಪ್ರಭುತ್ವವನ್ನು ನಡೆಸುತ್ತಿದೆ ಎಂದು ನಾನು ಭಾವಿಸುವುದಿಲ್ಲ. ದೇಶದಲ್ಲಿ ಜಾತಿ ಎಂಬುದು ನಿಜವಾದ ಸಮಸ್ಯೆಯಾಗಿದೆ ಎಂದು ಅದನ್ನು ವರ್ಣಭೇದ ನೀತಿಗೆ ಹೋಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next