Advertisement

2019ರಲ್ಲಿ ಭಾರತದ ಆರ್ಥಿಕತೆ ವೃದ್ಧಿ: ಐಎಂಎಫ್

02:33 AM Jan 22, 2019 | Team Udayavani |

ವಾಷಿಂಗ್ಟನ್‌: ತೈಲ ಬೆಲೆ ಇಳಿಕೆ ಮತ್ತು ದೇಶೀಯ ಆರ್ಥಿಕ ನೀತಿಯಿಂದಾಗಿ ಭಾರತವು 2019ರಲ್ಲಿ ಶೇ.7.5 ರಲ್ಲಿ ಬೆಳವಣಿಗೆ ಕಾಣಲಿದ್ದು, 2020ರಲ್ಲಿ ಶೇ. 7.7ರಲ್ಲಿ ಪ್ರಗತಿ ಸಾಧಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಿರೀಕ್ಷಿಸಿದೆ. ಇದು ಚೀನದ ಶೇ. 6.2ರ ಅಭಿವೃದ್ಧಿಗಿಂತ ಶೇ.1ರಷ್ಟು ಹೆಚ್ಚಿರಲಿದೆ. ಅಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ದೇಶವಾಗಿರಲಿದೆ ಎಂದು ಜನವರಿ ವಿಶ್ವ ಆರ್ಥಿಕ ಮುನ್ನೋಟದಲ್ಲಿ ಅದು ವಿವರಿಸಿದೆ.

Advertisement

ಅಮೆರಿಕದೊಂದಿಗಿನ ವ್ಯಾಪಾರ ಸಂಬಂಧ ಕ್ಷೀಣಿಸಿದರೂ ಈ ವಿತ್ತ ಪ್ರಗತಿ ನಿರೀಕ್ಷೆಯಂತೆಯೇ ಸಾಗಲಿದೆ. ಆದರೆ ಚೀನದ ಆರ್ಥಿಕತೆ ಕುಸಿಯುತ್ತಿದೆ. ಇದೇ ವೇಳೆ ಏಷ್ಯಾದ ಇತರ ದೇಶಗಳ ಆರ್ಥಿಕತೆಯೂ 2018ರ ಶೇ. 6.5ರಿಂದ 2019ರಲ್ಲಿ ಶೇ. 6.4ಕ್ಕೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಐಎಂಎಫ್ ನಿರೀಕ್ಷೆ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next