Advertisement
ಸೋಮವಾರ ಕಾರ್ಕಳ ಉತ್ಸವದಲ್ಲಿ ಭಾಗವಹಿಸಿದ ಅವರು ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Related Articles
ಕಾರ್ಕಳ ಉತ್ಸವದ ಮೂಲಕ ಸಂಸ್ಕೃತಿಯನ್ನು ಇನ್ನಷ್ಟು ಸದೃಢಗೊಳಿಸುವ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಸರಕಾರ ಹಾಗೂ ಸಚಿವ ಸುನಿಲ್ ಅವರನ್ನು ಅಭಿನಂದಿಸುತ್ತೇನೆ ಎಂದು ರಾಜ್ಯಪಾಲರು ಹೇಳಿದರು. ಕಾರ್ಕಳ ಉತ್ಸವದ ಶೀರ್ಷಿಕೆ ಗೀತೆಗೆ ಸಂಗೀತ ಸಂಯೋಜಿಸಿದ ಸುನಾದ್ ಗೌತಮ್ ಮತ್ತು ಕಾರ್ಕಳ ಗೀತೆ ಬರೆದ ರಾಜೇಂದ್ರ ಭಟ್ ಅವರನ್ನು ಸಮ್ಮಾನಿಸಿದರು.
Advertisement
ಸ್ವರ್ಣ ಕಲ್ಪನೆಗೆ ಉತ್ಸವ ಮುನ್ನುಡಿಸಚಿವ ಸುನಿಲ್ ಮಾತನಾಡಿ, ಸ್ವರ್ಣ ಕಾರ್ಕಳ ಕಲ್ಪನೆಯ ಮುನ್ನುಡಿಯಾಗಿ ಕಾರ್ಕಳ ಉತ್ಸವವನ್ನು ಆಯೋಜಿಸ ಲಾಗಿದೆ. ಪೂರಕವೆಂಬಂತೆ ಅಭಿವೃದ್ಧಿ ಕಾರ್ಯಗಳು, ಕಾರ್ಲ ಕಜೆ ಅಕ್ಕಿ, ಕಾರ್ಕಳ ಬಿಳಿ ಬೆಂಡೆ ಬ್ರ್ಯಾಂಡ್‌ಗಳು ರೈತರ ಅಭಿಮಾನದ ಪ್ರತೀಕಗಳಾಗಿ ನಾಡಿನಾದ್ಯಂತ ಪ್ರಸಿದ್ಧವಾ ಗಿವೆ ಎಂದರು. ಹಿರಿಯ ಸಾಹಿತಿ ಡಾ| ನಾ. ಮೊಗಸಾಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ| ಎನ್. ಮಂಜಳಾ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ವಕೀಲರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ವೇದಿಕೆಯ ಲ್ಲಿದ್ದರು. ಜಿಲ್ಲಾಧಿಕಾರಿ ಎಂ. ಕೂರ್ಮಾ ರಾವ್ ಸ್ವಾಗತಿಸಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ವಂದಿಸಿದರು. ಸಂಗೀತಾ ನಿರೂಪಿಸಿದರು. ರಾಜ್ಯಪಾಲರ ತುಳು, ಕನ್ನಡ ಮಾತು
ರಾಜ್ಯಪಾಲರು “ತುಳು ಬಾಂಧವರೆಗ್ ಸೊಲ್ಮೆಲು, ನಮಸ್ಕಾರ ತಮಗೆಲ್ಲರಿಗೂ, ಹಾರ್ದಿಕ ಅಭಿನಂದನೆಗಳು’ ಎಂದು ತುಳು, ಕನ್ನಡದಲ್ಲಿ ಮಾತು ಆರಂಭಿಸಿ ಹಿಂದಿಯಲ್ಲಿ ಮುಂದುವರಿಸಿದರು. ಕಾರ್ಕಳ ಉತ್ಸವದ ರೂವಾರಿ ವಿ. ಸುನಿಲ್ ಕುಮಾರ್ ಅವರು ರಾಜ್ಯಪಾಲರಿಗೆ ಶಂಕರಪುರ ಮಲ್ಲಿಗೆ ಹಾರ ತೊಡಿಸಿ, ಕಾರ್ಲ ಕಜೆ ಅಕ್ಕಿ, ಶ್ರೀಕೃಷ್ಣನ ವಿಗ್ರಹ ನೀಡಿ ಸಮ್ಮಾನಿಸಿದರು. ರಾಜ್ಯಪಾಲರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಕೊಂಬು, ವಾದ್ಯ, ವಿವಿಧ ವೇಷಭೂಷಣ,ಕಲಾತಂಡಗಳು, ಪೊಲೀಸ್ ಬ್ಯಾಂಡ್, ರಾಷ್ಟ್ರಗೀತೆಯ ಗೌರವ ನೀಡಲಾಯಿತು. ರಾಜ್ಯಪಾಲರು ಸ್ವಲ್ಪ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ತೆರಳಿದರು.