ನವದೆಹಲಿ: ಭಾರತದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಕಳೆದ 24 ಗಂಟೆಯಲ್ಲಿ 25, 153 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಶನಿವಾರ(ಡಿಸೆಂಬರ್ 19, 2020) ಒಟ್ಟು ಸೋಂಕಿತರ ಸಂಖ್ಯೆ ಬರೋಬ್ಬರಿ 1,00,04,599ಕ್ಕೆ ಏರಿಕೆಯಾಗಿದೆ. ಅಲ್ಲದೇ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 1,45, 136ಕ್ಕೆ ತಲುಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶ ತಿಳಿಸಿದೆ.
ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಒಂದು ಕೋಟಿಗೆ ತಲುಪಿದ್ದು, ಈವರೆಗೆ ಸೋಂಕಿನಿಂದ 95,50, 712 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ದೇಶದಲ್ಲಿ 3,08,751 ಸಕ್ರಿಯ ಕೋವಿಡ್ ಸೋಂಕು ಪ್ರಕರಣ ಇದ್ದಿರುವುದಾಗಿ ತಿಳಿಸಿದೆ.
ಕಳೆದ ಮೇ ತಿಂಗಳಿನಲ್ಲಿ 50 ಸಾವಿರ ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, ಡಿಸೆಂಬರ್ ನಲ್ಲಿ 95ಲಕ್ಷಕ್ಕೆ ಏರಿಕೆಯಾಗಿತ್ತು. ಇದರೊಂದಿಗೆ ಭಾರತ ಕೋವಿಡ್ ಸೋಂಕಿತರ ಗುಣಮುಖರಾಗುವ ಪ್ರಮಾಣವು ಹೆಚ್ಚಳವಾಗಿರುವುದಕ್ಕೆ ಸಾಕ್ಷಿಯಾಗಿದೆ. ಒಟ್ಟು ಸಕ್ರಿಯ ಪ್ರಕರಣಕ್ಕಿಂತ 30 ಪಟ್ಟು ಅಧಿಕ ಚೇತರಿಕೆ ಪ್ರಮಾಣ ಹೆಚ್ಚಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಆರಾಮವಾಗಿದ್ದೇನೆ ಅಜ್ಜ.. ಕೋಲಾರದಿಂದ ಅಜ್ಜನೊಂದಿಗೆ ಮಾತನಾಡಿದ ಅನುಭವ್
ಐಸಿಎಂಆರ್ ಪ್ರಕಾರ, ಡಿಸೆಂಬರ್ ವರೆಗೆ 16,00,90,514 ಮಂದಿ ಸ್ಯಾಂಪಲ್ಸ್ ಪರೀಕ್ಷೆಗೊಳಪಡಿಸಲಾಗಿದ್ದು, ಡಿಸೆಂಬರ್ 1ರಿಂದ 18ರವರೆಗೆ 11,71, 868 ಸ್ಯಾಂಪಲ್ಸ್ ಪರೀಕ್ಷಿಸಲಾಗಿದೆ ಎಂದು ತಿಳಿಸಿದೆ.