Advertisement

ಆರ್ಚರಿ: ಅವಳಿ ಬಂಗಾರ ಸಂಭ್ರಮದಲ್ಲಿ ಭಾರತ

10:36 PM Aug 14, 2021 | Team Udayavani |

ವ್ರೋಕ್ಲಾ (ಪೋಲೆಂಡ್‌): ಇಲ್ಲಿ ನಡೆಯುತ್ತಿರುವ ವರ್ಲ್ಡ್ ಆರ್ಚರಿ ಯೂತ್ ತ್‌ ಚಾಂಪಿಯನ್‌ ಶಿಪ್‌ನಲ್ಲಿ ಭಾರತದ ಕಂಪೌಂಡ್‌ ಕ್ಯಾಡೆಟ್‌ ಪುರುಷರ ಹಾಗೂ ವನಿತಾ ತಂಡಗಳೆರಡೂ ಬಂಗಾರದ ಪದಕ ಗೆದ್ದು ಸಂಭ್ರಮಿಸಿವೆ.

Advertisement

ಮೊದಲು ವನಿತಾ ತಂಡ ಬಂಗಾರದ ಸಾಧನೆಗೈದಿತು. ಪರ್ಣೀತ್‌ ಕೌರ್‌, ಪ್ರಿಯಾ ಗುರ್ಜಾರ್‌ ಮತ್ತು ರಿಧಿ ವರ್ಷಿಣಿ ಅವರನ್ನೊಳಗೊಂಡ ತಂಡ ಫೈನಲ್‌ನಲ್ಲಿ ಟರ್ಕಿಯನ್ನು 228-216 ಅಂತರದಿಂದ ಪರಾಭವಗೊಳಿಸಿತು.

ಅನಂತರ ಪುರುಷರ ತಂಡ ಅತ್ಯಂತ ರೋಚಕ ಕಾದಾಟದಲ್ಲಿ ಅಗ್ರ ಶ್ರೇಯಾಂಕದ ಅಮೆರಿಕವನ್ನು 233-231 ಅಂತರದಿಂದ ಮಣಿಸಿತು. ಕುಶಲ್‌ ದಲಾಲ್‌, ಸಾಹಿಲ್‌ ಚೌಧರಿ ಮತ್ತು ನಿತಿನ್‌ ಅಪಾರ್‌ ವಿಜೇತ ತಂಡದ ಸದಸ್ಯರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next