ನವದೆಹಲಿ: ಚೀನಾ ಮೇಲೆ ಡಿಜಿಟಲ್ ಸಮರ ಸಾರಿದ್ದ ಕೇಂದ್ರ ಸರ್ಕಾರ ಮಂಗಳವಾರ (ಸೆ.02, 2020) ಪ್ರಸಿದ್ಧ ಮೊಬೈಲ್ ಗೇಮ್ ಗಳಾದ ಪಬ್ ಜಿ, ಲೂಡೊ ವರ್ಲ್ಡ್ ಸೇರಿದಂತೆ 118 ಆ್ಯಪ್ ಗಳಿಗೆ ನಿಷೇಧ ಹೇರಿರುವುದು ಚೀನಾ ಹೂಡಿಕೆದಾರರ ಮತ್ತು ಸರ್ವೀಸ್ ಪ್ರವೈಡರ್ಸ್ ಗಳ ಕಾನೂನು ಹಿತಾಸಕ್ತಿಯ ಉಲ್ಲಂಘನೆಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಚೀನಾದ ವಾಣಿಜ್ಯ ಸಚಿವಾಲಯದ ವಕ್ತಾರ ಗಾವೋ ಫೆಂಗ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚೀನಾ ಮೊಬೈಲ್ ಆ್ಯಪ್ಸ್ ಗಳನ್ನು ನಿಷೇಧಿಸಿರುವ ಭಾರತದ ಕ್ರಮದ ಬಗ್ಗೆ ಚೀನಾ ಗಂಭೀರ ಕಳವಳ ವ್ಯಕ್ತಪಡಿಸಲಿದ್ದು, ಇದನ್ನು ಪ್ರಬಲವಾಗಿ ವಿರೋಧಿಸುವುದಾಗಿಯೂ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಭದ್ರತೆಗೆ ಧಕ್ಕೆ ಆರೋಪದಲ್ಲಿ ಜನಪ್ರಿಯ ಪಬ್ ಜಿ, ಲೂಡೋ ವರ್ಲ್ಡ್ ಸೇರಿದಂತೆ 118 ಚೀನಾ ಆ್ಯಪ್ಸ್ ಗಳನ್ನು ನಿಷೇಧಿಸಿದ ನಂತರ ಚೀನಾ ಈ ಪ್ರತಿಕ್ರಿಯೆ ನೀಡಿದೆ.
ಇದನ್ನೂ ಓದಿ: ಪಬ್ ಜಿಯೊಂದಿಗೆ ಬ್ಯಾನ್ ಆದ ಇತರೇ ಪ್ರಮುಖ ಚೀನೀ Appಗಳ ಪಟ್ಟಿ ಇಲ್ಲಿದೆ
ಬೈಡೂ, ಬೈಡೂ ಎಕ್ಸ್ ಪ್ರೆಸ್ ಎಡಿಷನ್, ಟೆನ್ಸೆಂಟ್ ವಾಚ್ ಲಿಸ್ಟ್, ಫೇಸ್ ಯು, ವಿ ಚ್ಯಾಟ್ ರೀಡಿಂಗ್ ಮತ್ತು ಟೆನ್ಸೆಂಟ್ ವಿಯೂನ್ ಆ್ಯಪ್ , APUS ಲಾಂಚರ್ ಪ್ರೊ- ಥೀಮ್, ಲೈವ್ ವಾಲ್ ಪೇಪರ್ಸ್, ಸ್ಮಾರ್ಟ್ APUS ಲಾಂಚರ್ – ಥೀಂ, ಕಾಲ್ ಶೋ, ವಾಲ್ ಪೇಪರ್, ಹೈಡ್ ಆ್ಯಪ್ಸ್, APUS ಸೆಕ್ಯುರಿಟಿ – ಆ್ಯಂಟಿ ವೈರಸ್, ಫೊನ್ ಸೆಕ್ಯುರಿಟಿ, ಕ್ಲೀನರ್, APUS ಟರ್ಬೋ ಕ್ಲೀನರ್ 2020 – ಜಂಕ್ ಕ್ಲೀನರ್, ಆ್ಯಂಟಿ ವೈರಸ್ APUS ಫ್ಲ್ಯಾಶ್ ಲೈಟ್ – ಫ್ರೀ ಆ್ಯಂಡ್ ಬ್ರೈಟ್ ಸೇರಿದಂತೆ ಹಲವು ಚೀನಿ ಆ್ಯಪ್ಸ್ ಗಳನ್ನು ನಿಷೇಧಿಸಲಾಗಿದೆ.
ಗಡಿಯಲ್ಲಿ ನಿರಂತರವಾಗಿ ಸಂಘರ್ಷಕ್ಕಿಳಿದಿದ್ದ ಚೀನಾದ ವಿರುದ್ಧ ಡಿಜಿಟಲ್ ಸಮರ ಸಾರಿದ್ದ ಭಾರತ ಈವರೆಗೆ ನಿಷೇಧಿಸಲ್ಪಟ್ಟ ಚೀನಾ ಮೂಲದ ಮೊಬೈಲ್ ಆ್ಯಪ್ಸ್ ಗಳ ಸಂಖ್ಯೆ 224ಕ್ಕೆ ಏರಿದಂತಾಗಿದೆ.