ನವ ದೆಹಲಿ : ದೇಶದಲ್ಲಿ ಚಿನ್ನದ ಆಮದು ಪ್ರಮಾಣವು ಆಗಸ್ಟ್ ತಿಂಗಳಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
ಇದು ಐದು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ ೆಂದು ಕೂಡ ಸರ್ಕಾರದ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಭೂಮಿ ನೀಡುವಂತೆ ಒತ್ತಾಯಿಸಿ ಮಾಜಿ ಸೈನಿಕರ ಒಕ್ಕೂಟದ ವತಿಯಿಂದ ಪ್ರತಿಭಟನೆ
ಭಾರತವು 2020ರ ಆಗಸ್ಟ್‌ನಲ್ಲಿ 63 ಟನ್ ಚಿನ್ನ ಆಮದು ಮಾಡಿಕೊಂಡಿತ್ತು. ಹಬ್ಬದ ಋತುವಿನ ಬೇಡಿಕೆಯನ್ನು ಪೂರೈಸಲು ವ್ಯಾಪಾರಿಗಳು ಹೆಚ್ಚಿನ ಖರೀದಿ ನಡೆಸಿದ್ದಾರೆ. ಆಮದು ಪ್ರಮಾಣವು 2021ರ ಆಗಸ್ಟ್‌ನಲ್ಲಿ 121 ಟನ್‌ಗೆ ಏರಿಕೆ ಆಗಿದೆ. ಮೌಲ್ಯದ ಲೆಕ್ಕದಲ್ಲಿ ₹27,047 ಕೋಟಿಗಳಿಂದ ₹48,977 ಕೋಟಿಗಳಿಗೆ ಹೆಚ್ಚಳವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ತಿಂಗಳಿನಲ್ಲಿ ಚಿನ್ನದ ಆಮದಿನಲ್ಲಿ ಆದ ಏರಿಕೆಯಿಂದಾಗಿ ದೇಶದ ವ್ಯಾಪಾರ ಕೊರತೆಯ ಅಂತರ ಹಾಗೂ ರೂಪಾಯಿ ಮೇಲೆ ಒತ್ತಡ ಹೆಚ್ಚುವ ಅಂದಾಜು ಮಾಡಲಾಗಿದೆ.
ಇದನ್ನೂ ಓದಿ : ಚುನಾವಣೆ ಸಂಭ್ರಮಾಚರಣೆ ಬದಿಗಿಟ್ಟು ಅನಾಥ ಶವಸಂಸ್ಕಾರಕ್ಕೆ ಮುಂದಾದ ಶಂಕರ ಪಾಟೀಲ್