ಹೊಸದಿಲ್ಲಿ: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ “ಅಲೆಕ್ಸಿಸ್ ವ್ಯಾಸ್ಟಿನ್ ಇಂಟರ್‌ನ್ಯಾಶನಲ್ ಬಾಕ್ಸಿಂಗ್’ ಸ್ಪರ್ಧೆಯಲ್ಲಿ ಭಾರತದ ಅಮಿತ್ ಪಂಘಲ್ (52 ಕೆಜಿ), ಸಂಜೀತ್ (91 ಕೆಜಿ) ಮತ್ತು ಆಶಿಷ್ ಕುಮಾರ್ (75 ಕೆಜಿ) ಚಿನ್ನದ ಪದಕ ಜಯಿಸಿದ್ದಾರೆ. ಇದು “ಕೋವಿಡ್ ಬ್ರೇಕ್’ ಬಳಿಕ ಭಾರತದ ಬಾಕ್ಸರ್ ಪಾಲ್ಗೊಂಡ ಮೊದಲ ಕೂಟವಾಗಿದೆ.
ಏಶ್ಯನ್ ಗೇಮ್ಸ್ ಚಾಂಪಿಯನ್ ಹಾಗೂ ವಿಶ್ವ ಬಾಕ್ಸಿಂಗ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಅಮಿತ್ ಪಂಘಲ್ ಅಮೆರಿಕದ ರೆನೆ ಅಬ್ರಹಾಂ ಅವರನ್ನು 3-0 ಅಂತರದಿಂದ ಪರಾಭವಗೊಳಿಸಿದರು.
ಇನ್ನೊಂದು ಸ್ಪರ್ಧೆಯಲ್ಲಿ ಇಂಡಿಯಾ ಓಪನ್ ಕೂಟದ ಚಾಂಪಿಯನ್ ಸಂಜೀತ್ ಫ್ರಾನ್ಸ್‌ನ ಸೊಹೆಬ್ ಬೌಫಿಯ ಅವರನ್ನು ಕೆಡವಿದರು. ಅಮೆರಿಕದ ಸ್ಪರ್ಧಿ ಜೆರೋಮ್ ಹಿಕ್ಸ್ ಗಾಯಾಳಾಗಿ ಫೈನಲ್ ಪಂದ್ಯದಿಂದ ಹಿಂದೆ ಸರಿದ ಕಾರಣ ಆಶಿಷ್ ಕುಮಾರ್‌ಗೆ ಚಿನ್ನ ಒಲಿದು ಬಂತು.
ಕವಿಂದರ್‌ಗೆ ಬೆಳ್ಳಿ
ಕವಿಂದರ್ ಸಿಂಗ್ ಬಿಷ್ಟ್ (57 ಕೆಜಿ) ತವರಿನ ಸಾಮ್ಯುಯೆಲ್ ಕಿಸ್ಟೊಹರ್ರಿ ವಿರುದ್ಧ 1-2ರಿಂದ ಎಡವಿ ಬೆಳ್ಳಿ ಪದಕಕ್ಕೆ ತೃಪ್ತರಾದರು.