Advertisement

ಪಾಕ್‌ನಲ್ಲಿರುವ ಭಾರತೀಯರು ಸದ್ಯದಲ್ಲೇ ಸ್ವದೇಶಕ್ಕೆ?

01:15 PM Jun 14, 2020 | sudhir |

ಹೊಸದಿಲ್ಲಿ: ಲಾಕ್‌ಡೌನ್‌ನಿಂದಾಗಿ ವಿಮಾನ ಯಾನ ನಿಷೇಧಿಸಿರುವುದರಿಂದ ಪಾಕಿಸ್ಥಾನದಲ್ಲಿರುವ ಸುಮಾರು 693 ಭಾರತೀಯರನ್ನು ಜೂನ್‌ 23ರಂದು ತವರಿಗೆ ಕರೆತರುವ ನಿರೀಕ್ಷೆ ಇದೆ.

Advertisement

ಮೂಲಗಳ ಪ್ರಕಾರ, ಭಾರತೀಯರನ್ನು ಕರೆತರುವ ವಿಚಾರವಾಗಿ ಶಿಷ್ಟಾಚಾರ ಪಾಲನೆ ಆರಂಭವಾಗಿದೆ. ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ದೂತಾ ವಾಸ ಅಧಿಕಾರಿಗಳು ಅಲ್ಲಿನ ಸರಕಾರದ ಜೊತೆ ಮಾತುಕತೆ ನಡೆಸಿದ್ದಾರೆ.

ಪಾಕಿಸ್ಥಾನದಲ್ಲಿರುವ ಭಾರತೀಯರಲ್ಲಿ ಕಾಶ್ಮೀರ, ಪಂಜಾಬ್‌, ಮಹಾರಾಷ್ಟ್ರ ಹಾಗೂ ಗುಜರಾತ್‌ ಪ್ರಾಂತ್ಯಗಳಿಗೆ ಸೇರಿದ ಪ್ರಜೆಗಳೂ ಇದ್ದು, ಇವರನ್ನು ವಾಘಾ- ಅಠಾರಿ ಗಡಿಯ ಮೂಲಕ ರಸ್ತೆ ಮಾರ್ಗದಲ್ಲಿ ಕರೆತರುವ ಸಾಧ್ಯತೆಗಳಿವೆ.

ಪಾಕಿಸ್ಥಾನದಿಂದ ಬರುವ ಭಾರತೀಯರಿಗೆ 14 ದಿನಗಳ ಕ್ವಾರಂಟೈನ್‌ ಮಾಡಲಾಗುತ್ತದೆ. ದಿಲ್ಲಿಯಲ್ಲಿರುವ ಪಾಕಿಸ್ಥಾನದ ದೂತಾವಾಸ ಆಯುಕ್ತರ ಪ್ರಕಾರ, ಪಾಕಿಸ್ಥಾನಕ್ಕೆ ಭಾರತದ ಮನವಿಯು ತಲುಪಿದ್ದು, ಪಾಕಿಸ್ಥಾನ ಸರಕಾರ, ಅಲ್ಲಿರುವ ಭಾರತೀಯರನ್ನು ಕಳುಹಿಸುವ ಬಗ್ಗೆ ಅಧಿಕೃತ ಒಪ್ಪಿಗೆ ನೀಡಬೇಕಿದೆಯಷ್ಟೆ. ಇತ್ತೀಚೆಗೆ, ಇದೇ ವಾಘಾ-ಅಠಾರಿ ಗಡಿಯ ಮೂಲಕ ಭಾರತ, 430 ಪಾಕಿಸ್ಥಾನ ಪ್ರಜೆಗಳನ್ನು ಆ ದೇಶಕ್ಕೆ ಕಳುಹಿಸಿಕೊಟ್ಟಿದ್ದನ್ನು ಇಲ್ಲಿ ಸ್ಮರಿಸ ಬಹುದು.

ಚಿಕಿತ್ಸೆ ಕೇಂದ್ರ ತೆರೆದ ಇಸ್ಲಾಂ ಉಗ್ರರು
ಸೋಮಾಲಿಯಾದ ಇಸ್ಲಾಂ ಮೂಲಭೂತವಾದಿ ಸಂಘಟನೆ ಅಲ್‌ ಶಾಬಾದ್‌ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ತೆರೆದಿರುವುದಾಗಿ ಶುಕ್ರವಾರ ತಿಳಿಸಿದೆ. ಅಲ್‌ ಶಬಾದ್ಸ್ ಕೋವಿಡ್ ತಡೆ ಮತ್ತು ಚಿಕಿತ್ಸೆ ಸಮಿತಿಯನ್ನು ಜಿಲಿಬ್‌ ಪ್ರದೇಶದಲ್ಲಿ ತೆರೆಯಲಾಗಿದೆ ಎಂದು ಸಂಘಟನೆ ಅಂಡಾಲಸ್‌ ರೇಡಿಯೊ ಮೂಲಕ ಘೋಷಣೆ ಹೊರಡಿಸಿದೆ. ಜೊತೆಗೆ ಕೋವಿಡ್ ಸೋಂಕಿನ ಲಕ್ಷಣಗಳಿರುವವರು ಈ ಕೇಂದ್ರಕ್ಕೆ ಬರುವಂತೆ ಜನರಿಗೆ ಹೇಳಿದೆ. ದಕ್ಷಿಣ ಆಫ್ರಿಕದಲ್ಲಿ ಕೋವಿಡ್ ಸೋಂಕು ಬಹಳ ವೇಗದಲ್ಲಿ ಹರಡುತ್ತಿದೆ ಎಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯೊಂದು ನೀಡಿರುವ ಎಚ್ಚರಿಗೆ ಕುರಿತು ಸಂಘಟನೆ ಪ್ರಸ್ತಾಪಿಸಿದೆ. ಕಳೆದ ದಶಕಕ್ಕಿಂತ ಹೆಚ್ಚು ಕಾಲ ಈ ಸಂಘಟನೆ ಸೋಮಾಲಿಯದಲ್ಲಿ ಅಧಿಕಾರ ಸ್ಥಾಪಿಸಿ, ಇಸ್ಲಾಮಿಕ್‌ ಶೆರಿಯಾ ಕಾನೂನು ತರಲು ಸರಕಾರದ ವಿರುದ್ಧ ಹೋರಾಟ ನಡೆಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next