ಲುಸಾನ್ನೆ: ಅಂತಾರಾಷ್ಟ್ರೀಯ ಹಾಕಿ ಸಂಸ್ಥೆಯ ವಾರ್ಷಿಕ ಪ್ರಶಸ್ತಿಗಳಲ್ಲಿ ಸಿಂಹಪಾಲು ಭಾರತಕ್ಕೆ ಒಲಿದಿದೆ. ಹಲವು ವರ್ಷಗಳ ಅನಂತರ ಇಂಥದ್ದೊಂದು ಅದ್ಭುತ ಸಾಧನೆಯನ್ನು ಭಾರತೀಯರು ಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀಡಿದ ಅದ್ಭುತ ಪ್ರದರ್ಶನ.
ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಹರ್ಮನ್‌ಪ್ರೀತ್ ಸಿಂಗ್, ವರ್ಷದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಯನ್ನು ಗುರ್ಜಿತ್ ಕೌರ್ ಪಡೆದಿದ್ದಾರೆ.
ಶ್ರೇಷ್ಠ ಪುರುಷ ಗೋಲ್‌ಕೀಪರ್ ಪ್ರಶಸ್ತಿ ಪಿ.ಆರ್. ಶ್ರೀಜೇಶ್‌ಗೆ, ಶ್ರೇಷ್ಠ ಮಹಿಳಾ ಗೋಲ್‌ಕೀಪರ್ ಪ್ರಶಸ್ತಿಗೆ ಸವಿತಾ ಪುನಿಯ ಆಯ್ಕೆಯಾಗಿದ್ದಾರೆ. ಉದಯೋನ್ಮುಖ ಪುರುಷ ಆಟಗಾರ ಪ್ರಶಸ್ತಿ ವಿವೇಕ್ ಸಾಗರ್‌ಗೆ, ಮಹಿಳಾ ವಿಭಾಗದ ಈ ಪ್ರಶಸ್ತಿ ಶರ್ಮಿಳಾದೇವಿಗೆ ಒಲಿದಿದೆ. ಹಾಗೆಯೇ ಶ್ರೇಷ್ಠ ಪುರುಷರ ಕೋಚ್ ಪ್ರಶಸ್ತಿ ಗ್ರಹಾಂ ರೀಡ್‌ಗೆ, ಮಹಿಳಾ ತಂಡದ ಕೋಚ್ ಪ್ರಶಸ್ತಿ ಮರಿನ್ ಸೋರ್ಡ್ ಪಾಲಾಗಿದೆ.
ಇದನ್ನೂ ಓದಿ:ಚೆನ್ನೈಯಲ್ಲೇ ಕೊನೆಯ ಐಪಿಎಲ್: ಧೋನಿ
ಭಾರತಕ್ಕೆ ಒಲಿದ ಹಾಕಿ ಪ್ರಶಸ್ತಿ
ಪುರುಷರ ವಿಭಾಗ
ವರ್ಷದ ಆಟಗಾರ: ಹರ್ಮನ್‌ಪ್ರೀತ್ ಸಿಂಗ್
ವರ್ಷದ ಗೋಲ್‌ಕೀಪರ್: ಪಿ.ಆರ್. ಶ್ರೀಜೇಶ್
ವರ್ಷದ ಉದಯೋನ್ಮುಖ ಆಟಗಾರ: ವಿವೇಕ್ ಸಾಗರ್ ಪ್ರಸಾದ್
ವರ್ಷದ ಕೋಚ್: ಗ್ರಹಾಂ ರೀಡ್
ವನಿತಾ ವಿಭಾಗ
ವರ್ಷದ ಆಟಗಾರ್ತಿ: ಗುರ್ಜಿತ್ ಕೌರ್
ವರ್ಷದ ಗೋಲ್‌ಕೀಪರ್: ಸವಿತಾ ಪುನಿಯ
ವರ್ಷದ ಉದಯೋನ್ಮುಖ ಆಟಗಾರ್ತಿ: ಶರ್ಮಿಳಾದೇವಿ
ವರ್ಷದ ಕೋಚ್: ಸೋರ್ಡ್ ಮರಿನ್