Advertisement
ವೈಯಕ್ತಿಕ ಹಾಗೂ ಸಾಂಸ್ಥಿಕ ಖಾತೆಗಳಲ್ಲಿ 2020ರಲ್ಲಿ ಇಟ್ಟಿರುವ ಮೊತ್ತದಲ್ಲಿ ಆಗಿರುವ ಬದಲಾವಣೆಗಳಿಗೆ ಸಂಭವನೀಯ ಕಾರಣಗಳನ್ನು ನೀಡುವಂತೆ ಕೇಂದ್ರ ಹಣಕಾಸು ಸಚಿವಾಲಯ ಸ್ವಿಸ್ ಬ್ಯಾಂಕ್ ನನ್ನುಯ ಕೇಳಿದ್ದು, ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರು ನೇರವಾಗಿ ಠೇವಣಿ ಇಡುತ್ತಿರುವ ಪ್ರಮಾಣವು 2019 ರಿಂದ ಇಳಿಕೆ ಕಾಣುತ್ತಿದೆ ಎಂದಷ್ಟೇ ಸಚಿವಾಲಯ ಹೇಳಿದೆ.
Related Articles
Advertisement
ಇನ್ನು, ಭಾರತೀಯ ಕಂಪನಿಗಳ ಹೆಚ್ಚುತ್ತಿರುವ ವ್ಯಾಪಾರ ವಹಿವಾಟು, ಭಾರತದಲ್ಲಿ ನೆಲೆಗೊಂಡಿರುವ ಸ್ವಿಸ್ ಬ್ಯಾಂಕ್ ಶಾಖೆಗಳ ವ್ಯವಹಾರ ಹಾಗೂ ಸ್ವಿಸ್ ಮತ್ತು ಭಾರತೀಯ ಬ್ಯಾಂಕುಗಳ ನಡುವಿನ ಅಂತರ-ಬ್ಯಾಂಕ್ ವಹಿವಾಟಿನ ಹೆಚ್ಚಳ ಸೇರಿದಂತೆ ಇನ್ನೂ ಹಲವು ಕಾರಣಗಳಿಂದಾಗಿ ಠೇವಣಿಯಲ್ಲಿ ಹೆಚ್ಚಳ ಆಗಿರುವ ಸಾಧ್ಯತೆಯೂ ಇದೆ ಎಂದು ಸಚಿವಾಲಯ ತಿಳಿಸಿದೆ.
ಆದರೇ, ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಇಟ್ಟಿದ್ದಾರೆ ಎಂದು ಹೇಳಲಾದ ಬ್ಲ್ಯಾಕ್ ಮನಿ ಅಥವಾ ‘ಕಪ್ಪುಹಣ’ದ ಬಗ್ಗೆ ಸಂಬಂಧಿಸಿದ ವಿವರ ಇದಲ್ಲ. ಬೇರೆ ದೇಶದ ಕಂಪನಿಗಳ ಹೆಸರಿನಲ್ಲಿ ಭಾರತೀಯರು, ಎನ್ ಆರ್ ಐಗಳು ಅಥವಾ ಇತರರು ಹೊಂದಿರಬಹುದಾದ ಹಣವನ್ನೂ ಇದು ಒಳಗೊಂಡಿಲ್ಲ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ : ‘ಪಾನಿಪುರಿ’ ಹೆಸರೇ ಬಾಯಲ್ಲಿ ನೀರೂರಿಸುತ್ತದೆ…