Advertisement

Canada ಗುಂಡಿನ ದಾಳಿಗೆ ಭಾರತೀಯ ಯುವಕ ಸಾವು

01:21 AM Jul 29, 2024 | Team Udayavani |

ಟೊರಾಂಟೋ: ಕೆನಡಾದ ವ್ಯಾಂಕೋವರ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಇಂಡೋ-ಕೆನೆಡಿಯನ್‌ ಮೂಲದ 25 ವರ್ಷದ ಯುವಕ ಮೃತಪಟ್ಟಿದ್ದಾನೆ. ಆತನಿಗೆ ಅಪರಾಧಿ ಗುಂಪಿನ ಸಂಪರ್ಕವಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಗುಂಡಿನ ದಾಳಿ ನಡೆದ ವೇಳೆ ವಾಹನಗಳ ನಡುವೆ ಅಪಘಾತವೂ ಸಂಭವಿಸಿದೆ. ಮೃತ ಯುವಕನನ್ನು ಹಿತ್ಕರಣ್‌ ಜೊಹಾಲ್‌ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗುಂಡು ತಗುಲಿದ್ದು, ಓರ್ವ ಮೃತಪಟ್ಟರೆ ಮತ್ತೂಬ್ಬನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next